ಭುಗಿಲೆದ್ದ ಹಿಜಾಬ್ ವಿವಾದ; ಮುಂದಿನ ಆದೇಶದ ತನಕ ಉಡುಪಿ ಎಂಜಿಎಂ‌ ಕಾಲೇಜು‌ ಬಂದ್


ಉಡುಪಿ: ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಅತಿರೇಕಕ್ಕೆ ತಲುಪಿದ್ದು ಮುಂದಿನ ಆದೇಶದ ವರೆಗೆ ಎಂಜಿಎಂ‌ ಕಾಲೇಜ್​ ಅನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.

ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ ನಾಯಕ್ ಆದೇಶ ಹೊರಡಿಸಿದ್ದಾರೆ. ಕಾಲೇಜಿನಿಂದ ಹೊರ ಬಂದ ಅವರು, ಆದೇಶ ಪ್ರಕಟಿಸಿ ದೇವಿದಾಸ್ ನಾಯಕ್ ವಿದ್ಯಾರ್ಥಿಗಳ ಗಮನಕ್ಕೆ ತಂದಿದ್ದಾರೆ.

ಇನ್ನು ಎರಡು ಕಡೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರು, ಕೋರ್ಟ್ ತೀರ್ಪು ಶೀಘ್ರದಲ್ಲಿಯೇ ಬರಲಿದೆ. ಕೋರ್ಟ್ ಆದೇಶ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯ ತನಕ ಕಾಲೇಜು ಬಂದ್ ಇರಲಿದೆ ಎಂದು ಪ್ರಾಂಶುಪಾಲ ದೇವಿದಾಸ್ ನಾಯಕ್ ಹೇಳಿಕೆ ನೀಡಿದ್ದಾರೆ.

News First Live Kannada


Leave a Reply

Your email address will not be published.