ರತ್ನಮಾಲಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭುವಿ ಕರೆ ಮಾಡಿದ್ದಾಳೆ. ಅದ್ಭುತವಾಗಿ ಇಂಗ್ಲಿಷ್ನಲ್ಲಿ ಮಾತನಾಡಿದ್ದಾಳೆ. ಭುವಿ ಇಂಗ್ಲಿಷ್ ಮಾತನಾಡುವುದನ್ನು ನೋಡಿ ಹರ್ಷ ಹಾಗೂ ಸಾನಿಯಾ ಅಚ್ಚರಿ ಹೊರಹಾಕಿದ್ದಾರೆ.

ಭುವಿ-ಸಾನಿಯಾ
‘ಕನ್ನಡತಿ’ ಧಾರಾವಾಹಿಯ (Kannadathi Serial) ನಾಯಕಿ ಭುವನೇಶ್ವರಿ ಸದಾ ಕನ್ನಡ ಮಾತನಾಡುತ್ತಾಳೆ. ಈ ಧಾರಾವಾಹಿ ಮೂಲಕ ಕನ್ನಡದ ಮೇಲಿನ ಪ್ರೀತಿ ಮೆರೆಯಲಾಗುತ್ತಿದೆ. ಈ ವಿಚಾರಕ್ಕಾಗಿ ಕಥಾ ನಾಯಕಿ ಸಾಕಷ್ಟು ಇಷ್ಟವಾಗುತ್ತಾಳೆ. ಭುವಿ ಕನ್ನಡ ಮಾತನಾಡುವುದನ್ನು ನೋಡಿ ಅನೇಕರು ಆಕೆಗೆ ಇಂಗ್ಲಿಷ್ ಬರುವುದಿಲ್ಲ ಎಂದೇ ಅಂದುಕೊಂಡಿದ್ದರು. ಆದರೆ, ಅದನ್ನು ಅವಳು ಸುಳ್ಳು ಮಾಡಿದ್ದಾಳೆ. ಸುಲಲಿತವಾಗಿ ಇಂಗ್ಲಿಷ್ ಮಾತನಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ಭುವಿ ಇಂಗ್ಲಿಷ್ ಕಂಡು ಸಾನಿಯಾ ಹಾಗೂ ಹರ್ಷ ನಿಜಕ್ಕೂ ಶಾಕ್ ಆಗಿದ್ದಾರೆ.
ಹರ್ಷನ ತಾಯಿ ರತ್ನಮಾಲಾ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದಾಳೆ. ಆಕೆ ಬೇಗ ಗುಣಮುಖರಾಗಿ ಬರಲಿ ಎಂಬುದು ಮಗ ಹರ್ಷ ಹಾಗೂ ಸೊಸೆ ಭುವಿಯ ಕೋರಿಕೆ. ಅವಳು ಮರಳೋದು ಯಾವಾಗ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಈ ಮಧ್ಯೆ ರತ್ನಮಾಲಾ ಆರೋಗ್ಯದ ಅಪ್ಡೇಟ್ ತಿಳಿಯಲು ಹರ್ಷ ಪ್ರಯತ್ನಿಸಿದ್ದಾನೆ. ಇದು ಸಾಧ್ಯವಾಗದಾಗ ಕೂಗಾಡಿದ್ದಾನೆ. ಆಗ ಭುವಿ ಕನ್ನಡದಲ್ಲಿ ಮಾತನಾಡಿದ್ದು ಹರ್ಷನಿಗೆ ಕಿರಿಕಿರಿ ಉಂಟಾಗಿದೆ. ಈ ಕಾರಣಕ್ಕೆ ಆಕೆಯ ಮೇಲೂ ಹರ್ಷ ಕೂಗಾಡಿದ್ದಾನೆ.
ಇದರಿಂದ ಭುವಿಗೆ ಬೇಸರ ಆಗಿದೆ. ರತ್ನಮಾಲಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭುವಿ ಕರೆ ಮಾಡಿದ್ದಾಳೆ. ಅದ್ಭುತವಾಗಿ ಇಂಗ್ಲಿಷ್ನಲ್ಲಿ ಮಾತನಾಡಿದ್ದಾಳೆ. ಭುವಿ ಇಂಗ್ಲಿಷ್ ಮಾತನಾಡುವುದನ್ನು ನೋಡಿ ಹರ್ಷ ಹಾಗೂ ಸಾನಿಯಾ ಅಚ್ಚರಿ ಹೊರಹಾಕಿದ್ದಾರೆ. ಭುವಿ ಮುಂದೊಂದು ದಿನ ತನಗೆ ಕಂಟಕ ಆಗಬಹುದು ಎಂಬುದು ಸಾನಿಯಾಗೆ ಖಚಿತವಾಗಿದೆ.
ಅಮ್ಮಮ್ಮ ಭುವಿಯ ಹೆಸರಿಗೆ ಸಂಪೂರ್ಣ ಆಸ್ತಿ ಬರೆದಿದ್ದಾಳೆ. ಹೀಗಾಗಿ, ರತ್ನಾಮಾಲಾಗೆ ಸಂಬಂಧಿಸಿದ ಸಂಪೂರ್ಣ ಆಸ್ತಿಗೆ ಒಡತಿ ಭುವಿಯೇ ಆಗಲಿದ್ದಾಳೆ. ಈ ವಿಚಾರ ತಿಳಿದರೆ ಯಾರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ರತ್ನಾಮಾಲ ಒಡೆತನದ ಸಂಸ್ಥೆಗಳಿಗೆ ಭುವಿ ಬೇಗ ಎಂಡಿ ಆಗಲಿ ಎಂದು ವೀಕ್ಷಕರು ಆಸೆಪಡುತ್ತಿದ್ದಾರೆ.