ಭೂಗತ ಜಗತ್ತು ಕಬ್ಜ ಮಾಡಲು ಹೊರಟ ಉಪ್ಪಿಗೆ ಬಾಲಿವುಡ್​​ ನಟ ಸಾಥ್​

ರೌಡಿಸಂ ಸಿನಿಮಾಗಳಿಗೆ ಓಂಕಾರ ಆಡಿರೋ ರಿಯಲ್ ಸ್ಟಾರ್ ಉಪೇಂದ್ರ, ಮಂಗಳೂರು ಭೂಗತ ಜಗತ್ತನ್ನು “ಕಬ್ಜ” ಮಾಡೊಕೆ ರೆಡಿಯಾಗಿದ್ದಾರೆ.. ಮಂಗಳೂರ ಅಂಡರ್‌ ವರ್ಲ್ಡ್​​ ಡಾನ್ ಅನ್ನು ಡಾನ್ ಅಡ್ಡದಲ್ಲೆ ಖತಂ ಮಾಡೋಕೆ ಹೊರಟಿದ್ದಾರೆ. ಎಸ್ ಪ್ರಜಾಕೀಯ ಮೂಲಕ ರಾಜಕೀಯಕ್ಕೆ ಲಗಾಮ್ ಹಾಕೋಕೆ ಹೊರಟಿದ್ದ ರಿಯಲ್ ಸ್ಟಾರ್ ಉಪೇಂದ್ರ ಸಡನ್ ಆಗಿ ಈಗ ಅಂಡರ್ ವರ್ಲ್ಡ್ ಡಾನ್ ಅವತಾರದಲ್ಲಿ ಗನ್ ಹಿಡಿದು ನಿಂತಿದ್ದಾರೆ.. ಅಷ್ಟಕ್ಕೂ ಬುದ್ಧಿವಂತ ಉಪ್ಪಿ ಪೆನ್ ಹಿಡಿದು ಕತೆ ಬರೆಯೋದ ಬಿಟ್ಟು , ಗನ್ ಹಿಡುದು ರೌಡಿಸಂಗೆ ಇಳಿದಿದ್ದಾರ್ರು ಯಾಕೆ ಅಂತೀರ..?

ಸ್ಯಾಂಡಲ್ ವುಡ್ ನಲ್ಲಿ ರೌಡಿಸಂ ಸಿನಿಮಾಗಳ ಜನಜ ಯಾರು ಅಂತ ಕೇಳಿದ್ರೆ. ನಮ್ಮ ಗಾಂಧಿನಗರದ ಮಂದಿ ಮಾತ್ರವಲ್ಲ ಅಕ್ಕ ಪಕ್ಕದೂರಿನ ಸಿನಿಮಾ ಮಂದಿ ಹೇಳೋದು ಒಂದೇ ಹೆಸರು.. ಅದು ಯಾರಪ್ಪ ಅಂದ್ರೆ ರಿಯಲ್ ಸ್ಟಾರ್ ಉಪ್ಪಿ.. ಹೌದು ರೌಡಿಸಂ ಸಿನಿಮಾಗಳಿಗೆ ಕಲರ್ ಮತ್ತು ಖದರ್ ಎರಡನ್ನು ಉಪ್ಪಿ ತಂದು ಕೊಟ್ಟಿದ್ದಾರೆ.. ಉಪ್ಪಿ ನಿರ್ದೇಶನದಲ್ಲಿ ರೌಡಿಸಂ ಸಿನಿಮಾ ಬಂದ್ರೆ ಈ ಹವಾ ಇನ್ನು ರೌಡಿಸಂ ಸಿನಿಮಾದಲ್ಲಿ ನಟಿಸಿದ್ರೆ ಕೇಳಬೇಕಾ.. ಅದರ ಗತ್ತು ತಾಕತ್ತು ಬೇರೆನೇ ಇರುತ್ತೆ.. ಇನ್ನು ಈ ಗಮತ್ತನ್ನು ಈಗ ಮತ್ತಷ್ಟು ಹೆಚ್ಚಿಸಿರೋದು ಉಪ್ಪಿ ಅಭಿನಯದ ಅರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ.

ಕಬ್ಜ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರ ರಂಗವನ್ನೆ ಅವರಿಸಿಕೊಳ್ಳೋಕೆ ಉಪ್ಪಿ ರೆಡಿಯಾಗಿದ್ರು.. ಅದ್ರೆ ಉಪ್ಪಿಯ ಕನಸ್ಸಿಗೆ ಕಿಲ್ಲರ್ ಕೊರೊನ ಕೊಂಚ ಬ್ರೇಕ್ ಹಾಕಿತ್ತು.. ಆದ್ರೆ ಇದಕ್ಕೆ ತಲೆಕೆಡಿಸಿಕೊಳ್ಳದೆ ಉಪ್ಪಿ ಮತ್ತೆ ಆರು ತಿಂಗಳ ಗ್ಯಾಪ್ ನಂತ್ರ ಮತ್ತೆ ಕಬ್ಜ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ..

ಕೊರೊನಾ ನಂತ್ರ ಮತ್ತೆ ನಿರ್ದೆಶಕ ಅರ್ ಚಂದ್ರು ಕೋಟಿ ಕೋಟಿ ಸುರಿದು 1980ರ ದಶಕದ ಕಲ್ಪನೆಯಲ್ಲಿ ಭೂಗತ ಜಗತ್ತನ್ನು ಸೃಷ್ಟಿಸಿದ್ದಾರೆ.. ಇನ್ನು ಚಂದ್ರು ಅವರ ಭೂಗತ ಜಗತ್ತಿನ ಕಲ್ಪನೆಯ ಕನಸ್ಸಿಗೆ ಕೆಜಿಎಫ್ ಖ್ಯಾತಿಯ ಕಲಾನಿರ್ದೇಶಕ ಶಿವಕುಮಾರ್ ಬಣ್ಣ ಬಳಿದಿದ್ದಾರೆ. ಇನ್ನು ಕಲರ್ ಪುಲ್ ಸೆಟ್ ನಲ್ಕಿ ಇಂದಿನಿಂದ ಕಬ್ಜ ಚಿತ್ರದ ಶೂಟಿಂಗ್ ಮತ್ತೆ ಶುರುವಾಗಿದ್ದು, ನಗರದ ಮಿನರ್ವ ಮಿಲ್ ನಲ್ಲಿ ತಲೆ ಎತ್ತಿರುವ ಮಂಗಳೂರು ಭೂಗತ ಜಗತ್ತಿನ ಸೆಟ್ ನಲ್ಲಿ, ಉಪ್ಪಿ ಎದುರಾಳಿಯನ್ನು ಭೂಗತ ಮಾಡೊಕೆ ಗನ್ ಹಿಡಿದು ನಿಂತು ಬಿಟ್ಟಿದ್ದಾರೆ..

ಎತ್ತ ನೋಡಿದ್ರು ಧೈತ್ಯಕಾರದ ವಿಲನ್ ಗಳು ರಾಶಿ ರಾಶಿ ಗನ್ ಗಳು, ಈ ಕತ್ತಲೆಯ ಲೋಕದ ಸಿಂಹಾಸದಲ್ಲಿ ದರ್ಬಾರ್ ಮಾಡ್ಯಿರೋ ಖಳನಾಯಕ.. ಇದೆಲ್ಲ ಕಂಡಿದ್ದು ಕಬ್ಜ ಚಿತ್ರದ ಶೂಟಿಂಗ್ ನಲ್ಲಿ.‌.. ಕಬ್ಜ ಚಿತ್ರದಲ್ಲಿ ಉಪ್ಪಿ ಎದುರು ತೊಡೆ ತಟ್ಟೋಕೆ ಬಾಲಿವುಡ್ ನಟ ನವಾಬ್ ಷಾ ಬಂದಿದ್ದು.. ಇಂದಿನಿಂದ ಕಬ್ಜ ಬಳಗ ಸೇರಿಕೊಂಡಿದ್ದಾರೆ.. ನವಾಬ್ ಷಾ ಕಬ್ಜ ಚಿತ್ರದಲ್ಲಿ 80 ರ ದಶಕದ ಮಂಗಳೂರು ಡಾನ್ ಅವತಾರದಲ್ಲಿ ಕಾಣಿಸಿದ್ದು. ಮೊದಲ ದಿನವೇ ನವಾಬ್ ಷಾ ಅವರನ್ನು ಉಪ್ಪಿ ಶೂಟ್ ಮಾಡುವ ಸೀನ್ ಅನ್ನು ಸುತ್ತೋದ್ರಲ್ಲಿ ನಿರತರಾಗಿದ್ದಾರೆ ನಿರ್ದೇಶಕ ಅರ್ ಚಂದ್ರು‌…

ಇನ್ನು ಕಬ್ಜ ಚಿತ್ರದ ಇಂದಿನ ಶೂಟಿಂಗ್ ಹೈಲೆಟ್ಸ್ ಬಗ್ಗೆ ಹೇಳ ಬೇಕಂದ್ರೆ.. ಅದ್ದೂರಿ ವೆಚ್ಚದ ಡಾರ್ಕ್ ಶೇಡ್ ಇರುವ ಸೆಟ್ ಗಳ, ಸೆಟ್‌ಗಳ ನಡುವೆ ರಾಕ್ಷಸರಂತೆ ನಿಂತಿರುವ 200ಕ್ಕೂ ಹೆಚ್ಚು ವಿಲನ್ ಗಳು. ಜೊತೆಗೆ ಶೋಲೆ ಸಿನಿಮಾದಲ್ಲಿ ಬಳಸಿದಂತಹ ಮಾದರಿಯ ರಾಶಿ ರಾಶಿ ಗನ್ ಗಳು. ಇವುಗಳ ಮಧ್ಯೆ ನವಾಬ್ ಷಾ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟು ಅವನ ಅಡ್ಡದಲ್ಲೆ ಡಾನ್ ಅನ್ನು ಕತಮ್ ಮಾಡೋ ಉಪ್ಪಿ ಹೀಗೆ ಹಲವು ವಿಶೇಷಗಳೋಂದಿಗೆ ಇಂದಿನಿಂದ ಕಬ್ಜ ಚಿತ್ರದ ಶೂಟಿಂಗ್ ಶುರುವಾಗಿದೆ‌.

ಆರ್ ಚಂದ್ರು ಈಗಾಗಲೇ 80 ದಿನಗಳ ಶೂಟಿಂಗ್ ಮುಗಿಸಿದ್ರು ಕೇವಲ 50% ಶೂಟಿಂಗ್ ಮುಸಿದ್ದಾರೆ. ಅಲ್ಲದೆ ಇನ್ನು 80 ದಿನಗಳ ಶೂಟಿಂಗ್ ಬಾಕಿ ಇದ್ದು, ಮಂಗಳೂರು,ಹೈದರಾಬಾದ್ ನಲ್ಲಿ ಬಾಕಿ ಉಳಿದಿರುವ ಸೀನ್ ಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಿದ್ದಾರೆ.. ಇಂದಿನಿಂದ 40 ದಿನಗಳು ಮಿನರ್ವ ಮಿಲ್ ನಲ್ಲಿ ಕಬ್ಜ ಚಿತ್ರದ ಶೂಟಿಂಗ್ ನಡೆಯಲಿದ್ದು. ಮುಂದಿನ ತಿಂಗಳು ಎರಡನೇ ವಾರದಲ್ಲಿ ತಮ್ಮ ಟೀಂ ಕರ್ಕೊಂಡು ಹೈದರಾಬಾದ್ ಕಡೆ ಹಾರೋಕೆ ರೆಡಿಯಾಗಿದ್ದಾರೆ ಅರ್ ಚಂದ್ರು.

News First Live Kannada

Leave a comment

Your email address will not be published. Required fields are marked *