ಸಿನಿಮಾ ಮಾಡುವ ಕನಸು ಎಲ್ಲರಿಗೂ ಇರಬಹುದು ಆದ್ರೆ ಸಿನಿಮಾ ಮಾಡಲೇಬೇಕೆಂದು ತಮ್ಮ ಸಂಪೂರ್ಣ ಶ್ರಮ ಹಾಕುವವರು ವಿರಳ. ಇಲ್ಲೊಂದು ಟೀಮ್ ತಮ್ಮ ಸಿನಿಮಾ ಮಾಡುವ ಶ್ರದ್ಧೆ ಹೇಗಿದೆ ಎಂಬುದನ್ನ ಸಾಬೀತುಪಡಿಸಲು ಒಪ್ಟಿಮೆಲೊ ಹೆಸರಿನ ಕಿರುಚಿತ್ರವೊಂದನ್ನ ತಯಾರಿಸಿದ್ದಾರೆ.

ಒಪ್ಪಿಮೆಲೊ ಸಮಯದ ಭ್ರಮಾಲೋಕದ ಗೊಂದಲದಲ್ಲಿ ಸಿಲುಕಿರುವ ವ್ಯಕ್ತಿಯ ಕಾಲ್ಪನಿಕ ದೃಶ್ಯರೂಪಕ. ಮಾರ್ಗದರ್ಶಕನ ಅಣತಿಯಂತೆ ಭೂತ, ವರ್ತಮಾನ ಹಾಗೂ ಭವಿಷ್ಯದ ಜಂಜಾಟದಿಂದ ತಪ್ಪಿಸಿಕೊಳ್ಳಲು ಆ ವ್ಯಕ್ತಿ ಹೆಣಗಾಡುವ ಕಥನವೇ “ಒಪ್ಟಿಮೆಲೊ”.‘ಒಪ್ಟಿಮೆಲೊ ಕಿರುಚಿತ್ರ ಮೂರು ಪಾತ್ರಗಳ ಸುತ್ತ ಸಾಗುತ್ತದೆ. ಭ್ರಮಾಲೋಕದಲ್ಲಿ ಹೆಣಗಾಡುವ ವ್ಯಕ್ತಿ, ಮಾರ್ಗದರ್ಶಕ ಹಾಗೂ ಕ್ಯಾಬ್ ಡ್ರೈವರ್ ಈ ಕಿರುಚಿತ್ರದ ಪ್ರಮುಖ ಪಾತ್ರಗಳು. ಮಾರ್ಗದರ್ಶಕನ ಪಾತ್ರದಲ್ಲಿ ಶಿಶಿರ್ ಕುಮಾರ್ ನಟಿಸಿದ್ದಾರೆ. ರಂಗಭೂಮಿ ಹಾಗೂ ಕಿರುಚಿತ್ರ ಕಲಾವಿದ ವಿಶಾಖ್ ಭಾರಧ್ವಾಜ್​​​​​​ ಭ್ರಮಾಲೋಕದಲ್ಲಿ ಸಿಲುಕುವ ವ್ಯಕ್ತಿಯಾಗಿ ನಟಿಸಿದ್ದಾರೆ. ಮತ್ತೊಬ್ಬ ರಂಗಭೂಮಿ ಕಲಾವಿದ ವಿಶ್ವಾಸ್ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಕಿರುಚಿತ್ರವನ್ನ ಆಕಾಶ್ ಕೋಟೆಮನೆ ನಿರ್ದೇಶಿಸಿದ್ದಾರೆ.

ನಿರ್ದೇಶಕ ಆಕಾಶ್ ಕೋಟೆಮನೆ ಇದಕ್ಕೂ ಮುನ್ನ ‘ಎನ್​​.ಎಸ್​.ಎಫೆಕ್ಟ್​​​’ ಹಾಗೂ ‘ಅವೇಕ್ಎಂಬ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆಕಾಶ್​​, ಸೈನ್ಸ್ ಫಿಕ್ಷನ್ ಕಥೆಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದು ಮುಂದಿನ ದಿನಗಳಲ್ಲಿ ಇದೇ ಜೋನರ್​​​​ನಲ್ಲಿ ಸಿನಿಮಾವೊಂದನ್ನು ನಿರ್ದೇಶಿಸುವ ಗುರಿ ಹೊಂದಿದ್ದಾರೆ.

ರಂಗಭೂಮಿ ಕಲಾವಿದರಾದ ಶಿಶಿರ್.. ಸುಬ್ಬಲಕ್ಷ್ಮಿ ಸಂಸಾರ, ನನ್ನರಸಿ ರಾಧೆ ಹಾಗು ಅನೇಕ ಧಾರಾವಾಹಿ‌, ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಹಲವು ಚಲನಚಿತ್ರಗಳಿಗೆ ಸಂಗೀತ ನೀಡಿರುವ ಕ್ಲಾರೆನ್ಸ್ ಅಲೆನ್ ಕ್ರಾಸ್ತಾ ಹಿನ್ನಲೆ ಸಂಗೀತ ಹಾಗು ಅರುಣ್ ಕುಮಾರ್​ ಛಾಯಾಗ್ರಹಣ ಈ ಕಿರುಚಿತ್ರದಲ್ಲಿದೆ. ನಮ್ದೆ ಪ್ರೊಡಕ್ಷನ್ ಹೌಸ್ ಈ ಕಿರುಚಿತ್ರವನ್ನು ನಿರ್ಮಿಸಿದ್ದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿದೆ.

ಲಾಕ್ಡೌನ್ ಸಮಯದಲ್ಲಿ ಸುಮಾರು 8 ತಿಂಗಳು ಸ್ಕ್ರಿಪ್ಟಿಂಗ್ ಪ್ರೊಸೆಸ್ ನಡೆಸಲಾಗಿದೆ. ಸುಮಾರು ಸೂಕ್ಷ್ಮ ಆಯಾಮಗಳನ್ನು ಹೊಂದಿರುವ ಕಥೆ ಇದಾಗಿದ್ದು ಇದನ್ನ ಅರ್ಥ ಮಾಡಿಕೊಳ್ಳಲು ಸಂಪೂರ್ಣ ಗಮನವಿಟ್ಟು ವೀಕ್ಷಿಸಬೇಕಾಗುತ್ತದೆ.

The post ಭೂತ, ವರ್ತಮಾನ, ಭವಿಷ್ಯಗಳ ನಡುವೆ ತೋಯ್ದಾಡಿಸುತ್ತದೆ ‘ಒಪ್ಟಿಮೆಲೊ’ ಕಿರುಚಿತ್ರ appeared first on News First Kannada.

Source: newsfirstlive.com

Source link