ಭೂಮಿಯ ನಕ್ಷೆಯ ವೆರಿಫಿಕೇಶನ್ ನಲ್ಲಿ  ನಿಮಗೆ ಮೋಸ ಮಾಡಲು ಭೂಕಳ್ಳರು ಹೋದಲ್ಲೆಲ್ಲಾ ಇದ್ದಾರೆ. ಒಂದು ಸೈಟ್ ಖರೀದಿಸಬೇಕಾದರೆ, ಅದನ್ನು ಸಾಕಷ್ಟು ಕಡೆಯಂದ ವೆರಿಫೈ ಮಾಡಬೇಕಾಗುತ್ತದೆ.  ಸಾಲ ಮಾಡಿ ಭೂಮಿ ಖರೀದಿಸುವಾಗ ಎಷ್ಟೋ ಮಂದಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮೋಸ ಹೊಗಿ ಬಿಡುತ್ತಾರೆ. ಇನ್ಮುಂದೆ ಈ ಸನ್ನಿವೇಶ ಬರಲಿ ಸಾಧ್ಯವೇ ಇಲ್ಲ. ಭೂಕಳ್ಳರ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ. ಹೌದು ಭೂಮಿ ವೆರಿಫಿಕೇಶನ್ ಗಾಗಿಯೇ ರಾಜ್ಯ ಸರ್ಕಾರ ಹೊರತಂದಿದೆ `ದಿಶಾಂಕ್ ಆ್ಯಪ್’.

ಸರಳವಾಗಿ ಹೇಳಬೇಕೆಂದರೆ ಇದು ಭೂನಕ್ಷೆ ತಿಳಿಸುವ ಸರ್ಕಾರಿ ಸ್ವಾಮ್ಯದ ಆ್ಯಪ್ ಇದಾಗಿದ್ದು, ಸರ್ವೆ ಇಲಾಖೆಯ ಅತ್ಯುತ್ತಮ ತಂತ್ರಾಂಶವಾಗಿದೆ. ಇದು ರಾಜ್ಯದ 30 ಜಿಲ್ಲೆಗಳ ಪ್ರತಿಭೂಭಾಗದ ಮಾಹಿತಿ, ಸರ್ವೆ ನಂಬರ್‍ ಒಳಗೊಂಡಿದೆ.

ಇದು ಫ್ರೀ ಅಪ್ಲಿಕೇಶನ್ ಆಗಿದ್ದು, ( ಮೊಬೈಲ್ ಫೋ ನಿನಲ್ಲಿ ಲೋಕೇಶನ್ ವಿವರ ಕೊಟ್ಟು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ದಿಶಾಂಕ್ ಆ್ಯಪ್ ಯಾವುದಕ್ಕೆ ಸಹಕಾರಿ..? 

*ಯಾವುದಾದರೂ ಆಸ್ತಿಯ ನಿಖರ ಸರ್ವೇ ನಂಬರ್ ನ್ನು ಪಡೆಯಲು ಸಹಕಾರಿಯಾಗಿದೆ.

* ಆಸ್ತಿಯ ಭೂಭಾಗದ ಸಂಪೂರ್ಣ ವಿವರ ನೀಡುತ್ತದೆ. ಕೆರೆಕುಂಟೆ, ಸುತ್ತಲಿನ ಪ್ರದೇಶ, ಅಸುಪಾಸಿನ ಆಸ್ತಿಯ ವಿವರ ನೀಡುತ್ತದೆ.

* ಭೂಮಿ ಒತ್ತುವರಿಯಾಗಿದ್ದರೆ ಸುಲಭವಾಗಿ ಈ ಅಪ್ಲಿಕೇಶನ್ ಮೂಲಕ ಪತ್ತೆ ಮಾಡಬಹುದಾಗಿದೆ.

* ಈ ಅಪ್ಲಿಕೇಶನ್ ನ ಸಹಾಯದಿಂದ ಭೂಮಿಯ ಸರ್ವೇ ನಂಬರ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.

*ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್  ಉದ್ಯಮಿಗಳಿಗೆ  ಅತಿ ಉಪಯುಕ್ತ ಆ್ಯಪ್ ಇದು.

*  30 ಜಿಲ್ಲೆಗಳ ಸುಮಾರು 70 ಲಕ್ಷ ಸರ್ವೆ ನಂಬರ್ ಗಳಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ವಿವರಗಳು ಇದರಲ್ಲಿವೆ .

* ಹೊಸ ಆಸ್ತಿ ಖರೀದಿ, ಮಾರಾಟದ ವೇಳೆ ಈ ಆ್ಯಪ್ ಬಹಳ ಉಪಯುಕ್ತ ಮಾಹಿತಿ ನೀಡಲಿದೆ.

* ಗ್ರಾಮದ ವಿಲೇಜ್ ಮ್ಯಾಪ್ ಇದರಲ್ಲಿ ಸೂಪರ್ ಇಂಪೋಸ್ ಆಗಿರತ್ತದೆ. ನೀವು ನಿಂತಿರುವ ಜಾಗದ ಸಂಪೂರ್ಣ ಮಾಹಿತಿ ಈ ಆ್ಯಪ್ ನಲ್ಲಿ ಲಭ್ಯವಿರುತ್ತದೆ. ಸರ್ವೇ ನಂಬರ್ ಸಹಿತ ಭೂಮಿಯ ಬಗ್ಗೆ ಎಲ್ಲಾ ಮಾಹಿತಿ ಸಿಗುತ್ತದೆ.

* ಆ ಸರ್ವೆ ನಂಬರ್‍ ಮಾಲೀಕ ಯಾರು ಅನ್ನೋ ಮಾಹಿತಿ ಕೂಡಾ ನಿಮಗೆ ಸಿಗುತ್ತದೆ.

* ಕೊಟ್ಟಿರುವ ಸರ್ವೆ ನಂಬರಿನಲ್ಲಿ ಸರ್ಕಾರದ ಯಾವುದಾದರೂ ಆಸ್ತಿಗಳಿವೆಯಾ..? ಎನ್ನುವ ಮಾಹಿತಿ ಕೂಡಾ ಈ ಅಪ್ಲಿಕೇಶನ್ ನಲ್ಲಿ ಲಭ್ಯವಿದೆ.

*  ನೀವು ಒಂದು ಸೈಟ್ ಖರೀದಿಗೆ ಹೋಗುವಾಗ ಆ ಸೈಟಿನ ಜಾಗದಲ್ಲಿ ನಿಂತು ಈ ದಿಶಾಂಕ್ ಆ್ಯಪ್ ಆನ್ ಮಾಡಿ. ಅಲ್ಲೇ ನಿಮಗೆ ಆ ಜಾಗದ ಸಮಸ್ತ ಮಾಹಿತಿ ಸಿಗುತ್ತದೆ.

ಭೂಮಿಯ ಬಗ್ಗೆ ಇಷ್ಟೆಲ್ಲಾ ಸಂಪೂರ್ಣ ಮಾಹಿತಿ ನೀಡುವ ಈ ಅಪ್ಲಿಕೇಶನ್ ನಮಗೆ ಸರ್ಕಾರದಿಂದ ಲಭ್ಯವಾಗುತ್ತಿರುವಾಗ ನಾವು ಇನ್ಮುಂದೆ ಭೂಮಿಯ ವಿಚಾರದಲ್ಲಿ ಮೋಸ ಹೋಗುವುದಕ್ಕೆ ಸಾಧ್ಯವಿಲ್ಲ ಎನ್ನುವುದರಲ್ಲಿ ಸಂಶಯ ಬೇಕಾಗಿಲ್ಲ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More