ಭೂ ಕಬಳಿಕೆ ಪ್ರಕರಣ: ಸಚಿವ ಬೈರತಿ ಬಸವರಾಜ್​ಗೆ​ ಬಿಗ್​ ರಿಲೀಫ್ ನೀಡಿದ ಹೈಕೋರ್ಟ್ | Karnataka High Court quashes Land Grab Case Agaisnt Minister byrathi basavaraj


ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​ ವಿರುದ್ಧ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಭೂ ಕಬಳಿಕೆ ಪ್ರಕರಣ: ಸಚಿವ ಬೈರತಿ ಬಸವರಾಜ್​ಗೆ​ ಬಿಗ್​ ರಿಲೀಫ್ ನೀಡಿದ ಹೈಕೋರ್ಟ್

ಭೈರತಿ ಬಸವರಾಜ್

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಆರೋಪ ಪ್ರಕರಣದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್​ಗೆ ಹೈಕೋರ್ಟ್ ಬಿಗ್​ ರಿಲೀಫ್ ನೀಡಿದೆ.

ಬೈರತಿ ಬಸವರಾಜ್​ ವಿರುದ್ಧದ ಕ್ರಿಮಿನಲ್  ಪ್ರಕರಣವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಇಂದು(ಸೆಪ್ಟೆಂಬರ್.30) ಆದೇಶ ಹೊರಡಿಸಿದೆ. ಇದು ಸಿವಿಲ್ ವ್ಯಾಜ್ಯವಾಗಿರುವ ಹಿನ್ನೆಲೆಯಲ್ಲಿ ಮಿನಲ್ ಪ್ರಕರಣ ರದ್ದುಪಡಿಸಿ ನ್ಯಾ.ಸುನೀಲ್ ದತ್ ಯಾದವ್ ಏಕ ಸದಸ್ಯ ಪೀಠ ಆದೇಶಿಸಿದೆ. ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಿದ್ದಾರೆ ಎಂದು ಸಚಿವ ಬೈರತಿ ಬಸವರಾಜ್ ವಿರುದ್ಧ ಮಾದಪ್ಪ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.

TV9 Kannada


Leave a Reply

Your email address will not be published.