ಬಹುಭಾಷಾ ನಟಿ ಸ್ಯಾಂಡಲ್​ವುಡ್​​ನ ಹರ್ಷಿಕಾ ಪೂಣಚ್ಚ ಜನ ಸೇವೆಯಲ್ಲಿ ಬ್ಯುಸಿಯಾಗಿದ್ದಾರೆ. ಭುವನ್ ಪೊನ್ನಣ್ಣ ಜೊತೆ ಸೇರಿ ಕೋವಿಡ್ ಸೋಂಕಿತರಿಗೆ ಬೆಡ್​, ಆಕ್ಸಿಜನ್, ಚಿಕಿತ್ಸೆ , ಊಟ ಇತ್ಯಾದಿ ಉಪಕಾರಗಳ ಮಾಡ್ತಿರುವ ಹರ್ಷಿಕಾ ಪೂಣಚ್ಚ ಈಗ ಸಿನಿಮಾದಿಂದಲೂ ಸುದ್ದಿಯಾಗಿದ್ದಾರೆ. ಹರ್ಷಿಕಾ ನಟನೆಯ ಮೊಟ್ಟ ಮೊದಲ ಭೋಜ್​​ ಪುರಿ ಭಾಷೆಯ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

‘ಹಮ್ ಹೈನ ರಹಿ ಪ್ಯಾರ್ ಕೆ’ ಅನ್ನೋ ಭೋಜ್​​​ ಪುರಿ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ. ಪವನ್ ಸಿಂಗ್, ಹರ್ಷಿಕಾ ಹಾಗೂ ಕಾಜಲ್ ರಾಘವಾನಿ ಮುಖ್ಯ ಭೂಮಿಕೆಯ ‘ಹಮ್ ಹೈನ ರಹಿ ಪ್ಯಾರ್ ಕೆ’ ಚಿತ್ರ ಫ್ಯಾಮಿಲಿ ಎಂಟರ್​​ಟೈನ್ಮೆಂಟ್ ಸಿನಿಮಾವಾಗಿದೆ. ಪ್ರೇಮನ್ಶು ಸಿಂಗ್ ನಿರ್ದೇಶನದಲ್ಲಿ ಅದ್ಧೂರಿ ಲೋಕೇಷನ್​​​ಗಳಲ್ಲಿ ಚಿತ್ರ ಮೂಡಿಬಂದಿದೆ.

ಈ ಭೋಜ್ ಪುರಿ ಸಿನಿಮಾದಲ್ಲಿ ಕನ್ನಡತಿ ಹರ್ಷಿಕಾ ಪೂಣಚ್ಚ ಗ್ಲಾಮರಸ್​ ಗೊಂಬೆಯಾಗಿ ಕಂಗೊಳಿಸಿದ್ದಾರೆ. ಟ್ರೈಲರ್ ರಿಲೀಸ್ ಮಾಡಿರುವ ಚಿತ್ರತಂಡ ಅತೀ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಸಿನಿಮಾವನ್ನ ಬಿಡುಗಡೆ ಮಾಡಲಿದೆ.

The post ಭೋಜ್​​​​​​​​​​​​ ಪುರಿ ಚಿತ್ರದಲ್ಲಿ ಕನ್ನಡದ ಹುಡುಗಿ ಹರ್ಷಿಕಾ ಪೂಣಚ್ಚ.. ಟ್ರೈಲರ್ ರಿಲೀಸ್ appeared first on News First Kannada.

Source: newsfirstlive.com

Source link