ಮಂಗಳಮುಖಿಯರಿಂದ ಗ್ರಾ. ಪಂ ಸದಸ್ಯನ ಮೇಲೆ ಹಲ್ಲೆ: ನಡೆದಿದ್ದೇನು..?

ಮಂಗಳಮುಖಿಯರಿಂದ ಗ್ರಾ. ಪಂ ಸದಸ್ಯನ ಮೇಲೆ ಹಲ್ಲೆ: ನಡೆದಿದ್ದೇನು..?

ತುಮಕೂರು: ಹಣ ನೀಡಲು ನಿರಾಕರಿಸಿದ್ದಕ್ಕೆ ಗ್ರಾ ಪಂ ಸದಸ್ಯನ ಮೇಲೆ ಮಂಗಳಮುಖಿಯರು ಹಲ್ಲೆ ಮಾಡಿದ ಘಟನೆ ಮಧುಗಿರಿ ಹೊರವಲಯದ ಹಿಂದೂಪುರ ಬೈಪಾಸ್​ನಲ್ಲಿ ನಡೆದಿದೆ.

ಕೋಡ್ಲಾಪುರ ಗ್ರಾಮ ಪಂಚಾಯ್ತಿ ಸದಸ್ಯ ರಂಗನಾಥ್ ಅವರ ಬೈಕನ್ನ ಇಬ್ಬರು ಮಂಗಳಮುಖಿಯರು ಅಡ್ಡಗಟ್ಟಿ ಹಣ ಕೇಳಿದ್ದಾರೆ, ಹಣ ಕೊಡಲು ನಿರಾಕರಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಗ್ರಾ ಪಂ ಸದಸ್ಯ ರಂಗನಾಥ ಮಧುಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದು ಘಟನಾ ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

The post ಮಂಗಳಮುಖಿಯರಿಂದ ಗ್ರಾ. ಪಂ ಸದಸ್ಯನ ಮೇಲೆ ಹಲ್ಲೆ: ನಡೆದಿದ್ದೇನು..? appeared first on News First Kannada.

Source: newsfirstlive.com

Source link