ಚಿಕ್ಕಮಗಳೂರು: ಅವಧೂತ ವಿನಯ್ ಗುರೂಜಿ ವಿನೂತನವಾಗಿ ದೀಪಾವಳಿ ಆಚರಿಸಿದ್ದಾರೆ.
ಮಂಗಳ ಮುಖಿಯರಿಗೆ ಪಾದಪೂಜೆ ಮಾಡಿ, ಬಡವರಿಗೆ ಕಿಟ್ ವಿತರಿಸಿ ವಿಶೇಷವಾಗಿ ಬೆಳಕಿನ ಹಬ್ಬವನ್ನ ಆಚರಿಸಿದ್ದಾರೆ.
ಜಿಲ್ಲೆಯ ಕೊಪ್ಪದಲ್ಲಿರುವ ಗೌರಿಗದ್ದೆ ವಿನಯ್ ಗುರೂಜಿ ಆಶ್ರಮದಲ್ಲಿ, 150 ಮಂದಿ ಬಡವರಿಗೆ ಆಹಾರ ಕಿಟ್ ವಿತರಿಸಿದ್ದು, ಮಂಗಳ ಮುಖಿಯರ ಪಾದಪೂಜೆ ಮಾಡಿ ಆಶೀರ್ವಾದ ಪಡೆದಿದ್ದಾರೆ.
ದೇಶದಲ್ಲಿ ಬೆಳಕಿನ ಹಬ್ಬದ ಸಡಗರ ಮನೆ ಮಾಡಿದ್ದೂ, ಪ್ರತಿ ಮನೆ ಮನೆಯಲ್ಲೂ ಜ್ಯೋತಿ ಬೆಳಗಿ ಹಬ್ಬವನ್ನ ಆಚರಿಸಲಾಗುತ್ತಿದೆ.