‘ಮಂಗಳಮುಖಿಯರು ಪ್ರಪಂಚವನ್ನು ನೋಡುವ ಪರಿಯೇ ಬೇರೆ’; ನವಾಜುದ್ದೀನ್ ಸಿದ್ದಿಕಿ – ‘Transgender are see the world is totally different view’; Nawazuddin


ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿಯಾಗಿ ಕಾಣಿಸಿಕೊಳ್ಳುತ್ತಿರುವ ‘ಹಡ್ಡಿ’ ಚಿತ್ರದ ಮತ್ತೊಂದು ಪೋಸ್ಟರ್​​ ರಿವೀಲ್​ ಆಗಿದೆ.

‘ಮಂಗಳಮುಖಿಯರು ಪ್ರಪಂಚವನ್ನು ನೋಡುವ ಪರಿಯೇ ಬೇರೆ’; ನವಾಜುದ್ದೀನ್ ಸಿದ್ದಿಕಿ

ಹಡ್ಡಿ ಚಿತ್ರದ ಹೊಸ ಪೋಸ್ಟರ್​​

ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಬಾಲಿವುಡ್​​ ಚಿತ್ರರಂಗದಲ್ಲಿ ಗುರುತಿಸಿಕೊಂಡವರ ಪೈಕಿ ನಟ ನವಾಜುದ್ದೀನ್ ಸಿದ್ದಿಕಿ (Nawazuddinsiddiqui) ಕೂಡ ಒಬ್ಬರು. ಭಿನ್ನ ಪಾತ್ರ ಆಯ್ಕೆಯಲ್ಲಿ ಅವರು ಎತ್ತಿದ ಕೈ. ಹಾಗಾಗಿಯೇ ಅವರು ಪರದೆ ಮೇಲೆ ಬಂದರೆ ಆ ಪಾತ್ರವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾರೆ. ತಮ್ಮ ನೈಜ ಅಭಿನಯದಿಂದ ನವಾಜುದ್ದೀನ್ ಸಿದ್ದಿಕಿ ವಿಭಿನ್ನವಾಗಿ ನಿಲ್ಲುತ್ತಾರೆ. ನಟ ಟೈಗರ್​ ಶ್ರಾಫ್​ ನಟನೆಯ ‘ಹೀರೋಪಂತಿ 2’ ಚಿತ್ರ ಬಿಟ್ಟರೆ ಮತ್ತೆ ನವಾಜುದ್ದೀನ್ ಸಿದ್ದಿಕಿ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಕೆಲ ಸಮಯ ಚಿತ್ರರಂಗದಿಂದ ಅವರು ಬ್ರೇಕ್​ ಪಡೆದುಕೊಂಡಿದ್ದರು. ಆದರೆ ಈಗ ಮತ್ತೆ ಮರಳಿದ್ದಾರೆ. ಅದು ಒಂದು ವಿಭಿನ್ನ ಪಾತ್ರದ ಮೂಲಕ ಎನ್ನುವುದು ವಿಶೇಷ.

ನಟ ನವಾಜುದ್ದೀನ್ ಸಿದ್ದಿಕಿ ಸದ್ಯ ತಮಗೆ ಸವಾಲೆನಿಸಿದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಮತ್ತು ಆ ಚಿತ್ರ ಸದ್ದಿಲ್ಲದೆ ಚಿತ್ರೀಕರಣವನ್ನು ಸಹ ಮುಗಿಸಿದೆ. ಹೌದು ಸೇಡಿನ ಕಥಾಹಂದರವುಳ್ಳ ಚಿತ್ರವಾದ ‘ಹಡ್ಡಿ’ (Haddi) ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಕುರಿತಾಗಿ ಹಿಂದೆ ಬೂದು ಬಣ್ಣದ ಗೌನ್ ಧರಿಸಿ, ಉದ್ದ ಕೂದಲು ಮತ್ತು ಫುಲ್​​ ಮೇಕ್ಅಪ್‌ನಲ್ಲಿದ್ದ ಲುಕ್‌ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಅದು ಭಾರೀ ಕುತೂಹಲಕ್ಕೂ ಕಾರಣವಾಗಿತ್ತು. ಈಗ ಇದೇ ಚಿತ್ರದ ಮತ್ತೊಂದು ಹೊಸ ಲುಕ್ ಬಿಡುಗಡೆ ಮಾಡಲಾಗಿದೆ.

ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ‘ಹಡ್ಡಿ’. ಸದ್ಯ ಈ ಚಿತ್ರದ ಮತ್ತೊಂದು ಪೋಸ್ಟರ್​​ ರಿವೀಲ್​ ಆಗಿದೆ. ಕೆಲ ಮಂಗಳಮುಖಿಯರ ನಡುವೆ ನಿಂತುಕೊಂಡು ಮೇಲೆ ಯಾರನ್ನೋ ನೋಡುವಂತಿದೆ ಈ ಹೊಸ ಪೋಸ್ಟರ್. ಸದ್ಯ ಈ ಹೊಸ ಲುಕ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿಯವರೊಂದಿಗೆ ಸಿನಿಮಾ ಮಾಡಿರುವುದರ ಕುರಿತಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಚಿತ್ರೀಕರಣ ಸಂದರ್ಭದಲ್ಲಿ ನಾನು  ಮಂಗಳಮುಖಿ ಸಮುದಾಯದವರೊಂದಿಗಿದ್ದೆ. ಅದೊಂದು ಸಂಪೂರ್ಣ ಬೇರೆಯದೇ ಪ್ರಪಂಚವಾಗಿತ್ತು. ಪ್ರತಿನಿತ್ಯ ಸೆಟ್​​ನಲ್ಲಿ 25-30 ಜನ ಮಂಗಳಮುಖಿಯರು ಇರುತ್ತಿದ್ದರು. ಅವರು ಪ್ರಪಂಚವನ್ನು ನೋಡುವ ಪರಿಯೇ ಬೇರೆ. ತುಂಬಾನೇ ಕುತೂಹಲಕಾರಿಯಾಗಿದೆ. ಈ ಹಡ್ಡಿ ಚಿತ್ರದ ಮೂಲಕ ನಾನು ಅವರ ಕುರಿತಾಗಿ ಬಹಳ ಕಲಿತುಕೊಂಡೆ’ ಎಂದು ನವಾಜುದ್ದೀನ್ ಸಿದ್ದಿಕಿ ಸಂದರ್ಶನದಲ್ಲಿ  ಹೇಳಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.