ಮಂಗಳೂರಲ್ಲಿ ಆಯೋಜಿಸಿದ ತಾಂಬೂಲ ಪ್ರಶ್ನೆಗೆ ಉತ್ತರಿಸಲು ಕೇರಳದ ಜ್ಯೋತಿಷಿ ಗೋಪಾಲಕೃಷ್ಣ ಫಣಿಕ್ಕರ್ ಅಗಮಿಸಿದರು | Thamboola Prashne: Kerala’s renowned astrologer Gopalakrishna Phanikker arrives in Mangaluru ARBಮಂಗಳೂರು ನಗರದ ಹೊರವಲಯದಲ್ಲಿ ಗಂಜಿಮಠ ಬಳಿ ಇರುವ ಮಳಲಿ ದರ್ಗಾ ಈಗ ವಾರಣಾಸಿಯ ಜ್ಞಾನವಾಪಿ ಮಸೀದಿಯ ಹಾಗೆ ಸುದ್ದಿಯಲ್ಲಿದೆ. ಜ್ಞಾನವಾಪಿ ಮಸೀದಿಯ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಸುದ್ದಿ ಇದ್ದರೆ, ಮಳಲಿ ದರ್ಗಾನಲ್ಲಿ ಹಿಂದೂ ದೇವಾಲಯವಿದ್ದ ಕುರುಹುಗಳು ಸಿಕ್ಕಿವೆ.

TV9kannada Web Team


| Edited By: Arun Belly

May 25, 2022 | 8:33 PM
Mangaluru:  ಕೇರಳದ ವಿಖ್ಯಾತ ಜ್ಯೋತಿಷಿ ಜ್ಯೋತಿಷಿ ಜಿಪಿ ಗೋಪಾಲಕೃಷ್ಣ ಫಣಿಕ್ಕರ್ (GP Gopalakrishna Phanikker) ಅವರು ತಮ್ಮ ರಾಜ್ಯದವರೇ ಅದ ಇತರ ಕೆಲ ತಂತ್ರಿಗಳೊಂದಿಗೆ ಬುಧವಾರ ಮಂಗಳೂರಿಗೆ ಆಗಮಿಸಿದರು. ಫಣಿಕ್ಕರ್ ಅವರು ತಮ್ಮ ಸಂಗಡಿಗರು ಮತ್ತು ವಿಶ್ವ ಹಿಂದೂ ಪರಿಷತ್ತಿನ (VHP) ಸ್ಥಳೀಯ ಕಾರ್ಯಕರ್ತರೊಂದಿಗೆ ನಗರದ ರಾಮಾಂಜನೇಯ ಭಜನಾ ಮಂದಿರದೊಳಗೆ (Ramaanjaneya Bhajana Mandir) ಪ್ರವೇಶಿಸುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದು. ಅವರು ಬಂದಿರುವ ಕಾರಣವನ್ನು ನಾವು ಇನ್ನೊಂದು ವಿಡಿಯೋನಲ್ಲಿ ಚರ್ಚಿಸಿದ್ದೇವೆ.

ಮಂಗಳೂರು ನಗರದ ಹೊರವಲಯದಲ್ಲಿ ಗಂಜಿಮಠ ಬಳಿ ಇರುವ ಮಳಲಿ ದರ್ಗಾ ಈಗ ವಾರಣಾಸಿಯ ಜ್ಞಾನವಾಪಿ ಮಸೀದಿಯ ಹಾಗೆ ಸುದ್ದಿಯಲ್ಲಿದೆ. ಜ್ಞಾನವಾಪಿ ಮಸೀದಿಯ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಸುದ್ದಿ ಇದ್ದರೆ, ಮಳಲಿ ದರ್ಗಾನಲ್ಲಿ ಹಿಂದೂ ದೇವಾಲಯವಿದ್ದ ಕುರುಹುಗಳು ಸಿಕ್ಕಿವೆ.

ಇದೇ ಕಾರಣಕ್ಕಾಗಿ ವಿ ಹೆಚ್ ಪಿ ಕಾರ್ಯಕರ್ತರು ತಾಂಬೂಲ ಪ್ರಶ್ನೆ ಇಡಲು ನಿರ್ಧರಿಸಿ ಕೇರಳದಿಂದ ಗೋಪಾಲಕೃಷ್ಣ ಫಣಿಕ್ಕರ್ ಮತ್ತು ಬೇರೆ ಕೆಲ ತಂತ್ರಿಗಳನ್ನು ಕರೆಸಿದ್ದಾರೆ. ಅಲ್ಲಿ ಲಭ್ಯವಾಗಿರುವ ಕುರುಹುಗಳು ಜೈನ ಮಂದಿರದ ರಚನೆಯ ಹಾಗೆಯೂ ಕಾಣುತ್ತವೆ ಎಂದು ಹೇಳಲಾಗಿದೆ. ಒಂದು ವೇಳೆ ಅದು ಹಿಂದೂ ದೇವಾಲಯದ ಬದಲು ಜೈನ ಮಂದಿರ ಇತ್ತು ಅನ್ನೋದು ಖಚಿತಪಟ್ಟರೆ ಆ ಸಮುದಾಯದವರು ವಿಷಯವನ್ನು ಕೈಗೆತ್ತಿಕೊಳ್ಳುವರೇ ಅನ್ನೋದು ಕಾದು ನೋಡಬೇಕಾದ ವಿಷಯವಾಗಿದೆ.

ನಾವು ಈಗಾಗಲೇ ವರದಿ ಮಾಡಿರುವ ಹಾಗೆ, ತಾಂಬೂಲ ಪ್ರಶ್ನೆ ಸಮಯದಲ್ಲಿ ಗೋಪಾಲಕೃಷ್ಣ ಫಣಿಕ್ಕರ್ ಅವರು ದರ್ಗಾ ಇರುವ ಜಾಗದಲ್ಲಿ ಹಿಂದೂ ದೇವರ ಸಾನಿಧ್ಯ ಇತ್ತು ಅಂತ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.


TV9 Kannada


Leave a Reply

Your email address will not be published. Required fields are marked *