ಮಂಗಳೂರಲ್ಲಿ ಗ್ಯಾಂಗ್​​ ರೇಪ್ ಮಾಡಿ 2 ವರ್ಷದ ಮಗು ಹತ್ಯೆ; ಜಾರ್ಖಂಡ್​​​ ಮೂಲದ ರಾಕ್ಷಸರ ಬಂಧನ

ಮಂಗಳೂರು: ಹೊರವಲಯದಲ್ಲಿ ಬಾಲಕಿ ಮೇಲೆ ಗ್ಯಾಂಗ್​ ರೇಪ್​ ಮಾಡಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನಾಲ್ವರು ಆರೋಪಿಗಳು ಮಧ್ಯ ಪ್ರದೇಶ ಮತ್ತು ಜಾರ್ಖಂಡ ಮೂಲದ ಆರೋಪಿಗಳಾಗಿದ್ದಾರೆ. ನವೆಂಬರ್ 21ರ ಸಂಜೆ ಬಾಲಕಿಯ ಮೇಲೆ ಗ್ಯಾಂಗ್​ ರೇಪ್​ ಮಾಡಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ಪೈಶಾಚಿಕ ಕೃತ್ಯವನ್ನು ನಡೆಸಿ, ಬಾಲಕಿಯ ಮೃತದೇಹವನ್ನು ಫ್ಯಾಕ್ಟರಿಯ ಡ್ರೈನೇಜ್​ನಲ್ಲಿ ಬಿಸಾಕಿದ್ದರು.

ಜಾರ್ಖಂಡ್ ಮೂಲದ ವಲಸೆ ಕಾರ್ಮಿಕ ದಂಪತಿ 2 ವರ್ಷದ ಮಗಳೊಂದಿಗೆ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕಿಯ ಮೃತ ದೇಹ ಪತ್ತೆಯಾದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಪ್ರಕರಣದ ತನಿಖೆಗೆ 4 ಪೊಲೀಸ್ ಅಧಿಕಾರಿಗಳ ತಂಡ ರಚಿಸಿದ್ದರು. ಆ ಬಳಿಕ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 20 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

News First Live Kannada

Leave a comment

Your email address will not be published. Required fields are marked *