ಮಂಗಳೂರು: ಸೆಲ್ಫಿ ವಿಡಿಯೋ ತೆಗೆಯುವ ಭರದಲ್ಲಿ ಯುವಕನೊಬ್ಬ ನೀರು ಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಹೊಳೆಯಲ್ಲಿ ನಡೆದಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹರಿಯುವ ಗುಂಡ್ಯ ಹೊಳೆಯಲ್ಲಿ ಸೆಲ್ಫಿ ವಿಡಿಯೋ ತೆಗೆಯುವ ಭರದಲ್ಲಿ ಕಾಲು ಜಾರಿ ನೀರುಪಾಲಾಗಿದ್ದಾನೆ. ರಾಜಸ್ಥಾನ ಮೂಲದ ಸೀತಾರಾಮ್ ಆಯತಪ್ಪಿ ಬೀಳುವ ದೃಶ್ಯ ಸೆಲ್ಫಿ ವಿಡಿಯೋದಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The post ಮಂಗಳೂರಲ್ಲಿ ಮತ್ತೊಂದು ದುರಂತ; ಸೆಲ್ಫಿ ಹುಚ್ಚಿಗೆ ಯುವಕ ಬಲಿ appeared first on News First Kannada.