ಮಂಗಳೂರು: ಆರೋಗ್ಯಾಧಿಕಾರಿ ಡಾ.ರತ್ನಾಕರ್​ನನ್ನು ಬಂಧಿಸಿದ ಪೊಲೀಸರು | Mangaluru Police Arrests Health Officer Doctor Rathnakar Mangalore News details here


ಮಂಗಳೂರು: ಆರೋಗ್ಯಾಧಿಕಾರಿ ಡಾ.ರತ್ನಾಕರ್​ನನ್ನು ಬಂಧಿಸಿದ ಪೊಲೀಸರು

ಡಾಕ್ಟರ್ ರತ್ನಾಕರ್

ಮಂಗಳೂರು: ಇಲ್ಲಿನ ಆರೋಗ್ಯಾಧಿಕಾರಿ ಡಾ. ರತ್ನಾಕರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕಮಿಷನರೇಟ್​ ವ್ಯಾಪ್ತಿ ಪೊಲೀಸರಿಂದ ರತ್ನಾಕರ್ ಬಂಧನ ಮಾಡಲಾಗಿದೆ. ಮಂಗಳೂರು ಮಹಿಳಾ ಪೊಲೀಸರಿಂದ ಬಂಧನವಾಗಿದೆ. ಬಂಧಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಎರಡು ದಿನ ಪೊಲೀಸರ ಕಸ್ಟಡಿಗೆ ನೀಡಿದೆ. ರತ್ನನ್ ರಂಗೀನ್ ಪ್ರಪಂಚ ಶೀರ್ಷಿಕೆಯಡಿ ಟಿವಿ9 ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಟಿವಿ9ನಲ್ಲಿ ವರದಿ ಬಳಿಕ ಕೇಸ್​ ದಾಖಲಿಸಿ ರತ್ನಾಕರ್​ ಬಂಧನ ಮಾಡಲಾಗಿದೆ.

ಈ ಮೊದಲು, ಡಾ.ರತ್ನಾಕರ್​ನನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದರು. ಇದೀಗ ರತ್ನಾಕರ್​ನನ್ನು ವಿಚಾರಣೆಗಾಗಿ 2 ದಿನ ಪೊಲೀಸರ ವಶಕ್ಕೆ ಕೋರ್ಟ್​ ನೀಡಿದೆ. ಮಹಿಳಾ ಠಾಣೆ ಪೊಲೀಸರ ವಶಕ್ಕೆ ನೀಡಲಾಗಿದೆ. ಡಾ.ರತ್ನಾಕರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಯಾವುದೇ ಕ್ಷಣದಲ್ಲಾದರೂ ರತ್ನಾಕರ್ ಬಂಧನ ಸಾಧ್ಯತೆ ಎಂದು ಹೇಳಲಾಗಿತ್ತು. ಡಾ.ರತ್ನಾಕರ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗಿತ್ತು. ಮೊಬೈಲ್‌ನಲ್ಲಿ ಮತ್ತಷ್ಟು ವಿಡಿಯೋಗಳಿರುವ ಮಾಹಿತಿ ಲಭ್ಯವಾಗಿತ್ತು. ಘಟನೆ ಸಂಬಂಧ ಯುವತಿಯರು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಯುವತಿಯರ ಹೇಳಿಕೆ ಆಧರಿಸಿ ಬಂಧನ ಸಾಧ್ಯತೆ ಊಹಿಸಲಾಗಿತ್ತು.

ಸಹೋದ್ಯೋಗಿಗಳಿಗೆ ಡಾ.ರತ್ನಾಕರ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಟಿವಿ9ಗೆ ಮಂಗಳೂರು ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ಹೇಳಿಕೆ‌ ನೀಡಿದ್ದರು. ಟಿವಿ9ನಲ್ಲಿ ವರದಿ ನಂತರ ಮಹಿಳಾ ಸಂಘಟನೆ ದೂರು ನೀಡಿವೆ. ದೂರಿನ ಆಧಾರದಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ. ಘಟನೆ ಸಂಬಂಧ ಸಾಕಷ್ಟು ಪೂರಕ ಸಾಕ್ಷಿ ದೊರಕಿದೆ. ನಾಲ್ವರು ಮಹಿಳೆಯರು ವಿವರಣೆ ನೀಡಲು ಬರುತ್ತಿದ್ದಾರೆ. ವಿವರಣೆ, ಸಾಕ್ಷ್ಯಗಳ ಆಧಾರದ ಮೇಲೆ ಬಂಧಿಸುತ್ತೇವೆ. ವಿವರಣೆ ಬಳಿಕ ರತ್ನಾಕರ್​ನನ್ನ ಬಂಧನ ಮಾಡಲಿದ್ದೇವೆ ಎಂದು ಎನ್‌. ಶಶಿಕುಮಾರ್ ಹೇಳಿದ್ದರು.

ಇದನ್ನೂ ಓದಿ: Mangaluru: ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ; ವೈದ್ಯ ಡಾ.ರತ್ನಾಕರ್ ಪೊಲೀಸರ ವಶಕ್ಕೆ

ಇದನ್ನೂ ಓದಿ: ಗುತ್ತಿಗೆ ಆಧಾರದಲ್ಲಿದ್ದ ಯುವತಿಯರಿಗೆ ‘ಮುತ್ತಿಗೆ’ ಹಾಕ್ತಾನೆ ಡಾಕ್ಟರ್! ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದೆ ಸ್ತ್ರೀಲೋಲ ವೈದ್ಯನ ಲವ್ವಿಡವ್ವಿ!

TV9 Kannada


Leave a Reply

Your email address will not be published. Required fields are marked *