ಮಂಗಳೂರು ಏರ್​ಪೋರ್ಟ್​ನಲ್ಲಿ ಆತಂಕ ಸೃಷ್ಟಿಸಿದ ಯುವಕ, ಯುವತಿಯ ಚಾಟಿಂಗ್ ಅವಾಂತರ: ಇಂದು ಕೂಡ ವಿಚಾರಣೆ ಮಾಡಲಿರುವ ಪೊಲೀಸ್ | Chatting incident at Mangalore Airport: Today also, Bajpe police interrogated a young man and a young woman


ಮಂಗಳೂರು ಏರ್​ಪೋರ್ಟ್​ನಲ್ಲಿ ಚಾಟಿಂಗ್ ಅವಾಂತರ ಪ್ರಕರಣ ಹಿನ್ನೆಲೆ ಇಂದು ಕೂಡ ಬಜ್ಪೆ ಪೊಲೀಸರಿಂದ ಯುವಕ ದೀಪಯನ್ ಮಾಜಿ​(23), ಯುವತಿ ಸಿಮ್ರಾನ್​ ಥಾಮ್​(23) ವಿಚಾರಣೆ ಮಾಡಲಿದ್ದಾರೆ.

ಮಂಗಳೂರು ಏರ್​ಪೋರ್ಟ್​ನಲ್ಲಿ ಆತಂಕ ಸೃಷ್ಟಿಸಿದ ಯುವಕ, ಯುವತಿಯ ಚಾಟಿಂಗ್ ಅವಾಂತರ: ಇಂದು ಕೂಡ ವಿಚಾರಣೆ ಮಾಡಲಿರುವ ಪೊಲೀಸ್

ಮಂಗಳೂರು ಏರ್​ಪೋರ್ಟ್​

ಮಂಗಳೂರು: ಮಂಗಳೂರು ಏರ್​ಪೋರ್ಟ್​ನಲ್ಲಿ ಚಾಟಿಂಗ್ (Chatting) ಅವಾಂತರ ಪ್ರಕರಣ ಹಿನ್ನೆಲೆ ಇಂದು ಕೂಡ ಬಜ್ಪೆ ಪೊಲೀಸರಿಂದ ಯುವಕ ದೀಪಯನ್ ಮಾಜಿ​(23), ಯುವತಿ ಸಿಮ್ರಾನ್​ ಥಾಮ್​(23) ವಿಚಾರಣೆ ಮಾಡಲಿದ್ದಾರೆ. ಇಬ್ಬರೂ ಉತ್ತರಪ್ರದೇಶದ ಗಾಜಿಯಾಬಾದ್ ನಿವಾಸಿಗಳಾಗಿದ್ದಾರೆ. 2-3 ದಿನದ ಹಿಂದೆ ಉಡುಪಿ ಮಣಿಪಾಲಕ್ಕೆ ಇಬ್ಬರೂ ಬಂದಿದ್ದರು. ಮಂಗಳೂರು ಏರ್ ಪೋರ್ಟ್​ನಲ್ಲಿ ಯುವಕ-ಯುವತಿ ಚಾಟಿಂಗ್ ಮಾಡಿದಕ್ಕೆ ರನ್ ವೇನಲ್ಲಿ ಟೇಕಾಫ್​ಗೆ ಸಿದ್ದವಾಗಿದ್ದ ವಿಮಾನ ಸಂಚಾರ ನಿನ್ನೆ  ಸ್ಥಗಿತಗೊಳಿಸಲಾಗಿತ್ತು. ಮಂಗಳೂರು ಏರ್ ಪೋರ್ಟ್​​ನಲ್ಲಿ ಯುವಕ-ಯುವತಿ ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ವಾಟ್ಸಾಪ್ ಚಾಟ್ ಮಾಡಿದ್ದಕ್ಕೆ ಟೇಕಾಫ್​ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಂಡಿತ್ತು.

TV9 Kannada


Leave a Reply

Your email address will not be published. Required fields are marked *