ಮಂಗಳೂರು: ತಲ್ವಾರ್ ತೋರಿಸಿ ದನಕಳವು ಮಾಡಿದ್ದ ನಾಲ್ವರ ಬಂಧನ | Mangalore news cattle stolen accused arrested by mangaluru police


ಮಂಗಳೂರು: ತಲ್ವಾರ್ ತೋರಿಸಿ ದನಕಳವು ಮಾಡಿದ್ದ ನಾಲ್ವರ  ಬಂಧನ

ಮಂಗಳೂರು: ಶುಕ್ರವಾರ (ಡಿ.03) ಮಂಗಳೂರು ಹೊರವಲಯದ ಬಂಗ್ರಕುಳೂರಿನಲ್ಲಿ ಮಾರಾಕಾಯುಧಗಳನ್ನು ತೋರಿಸಿ 3 ದನಗಳನ್ನು ಕದ್ದಯೊಯ್ದಿದ್ದ ನಾಲ್ವರು ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಕಾವೂರು ಪೊಲೀಸರು ಆರೊಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಉಳ್ಳಾಲದ ಮಹಮ್ಮದ್ ಸಲೀಂ (32). ಮಹಮದ್ ತಂಜಿಲ್(25), ಮಹಮದ್ ಇಕ್ಬಾಲ್( 23) ಮತ್ತು ಮಹಮದ್​ ಅಫ್ರೀದ್​ ಬಂಧಿತ ಆರೋಪಿಗಳು.

ನಿನ್ನೆ ರಾತ್ರಿ ಬಂಗ್ರಕುಳೂರು ಬಳಿಯ ಮನೆಯ ಹಟ್ಟಿಗೆ ನುಗ್ಗಿ 3 ದನಗಳನ್ನು ಕಳವು ಮಾಡಿದ್ದರು. ಕಳುವಾದ ದನಗಳು ಉಮೇಶ್ ಮಲರಾಯಸಾನ ಹಾಗೂ ಉದಯ ಶೆಟ್ಟಿ ಅವರದ್ದು ಎಂದು ತಿಳಿದುಬಂದಿದೆ. ಕದ್ದ 2 ದನಗಳು ಉಮೇಶ್ ಹಾಗೂ ಒಂದು ದನ ಉದಯ್​ ಶೆಟ್ಟಿ ಅವದ್ದು ಎಂದು ಹೇಳಲಾಗಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ರಾತ್ರಿ ವೇಳೆ ಬಂದ ನಾಲ್ವರು ದುಷ್ಕರ್ಮಿಗಳು ತಲ್ವಾರ್ ತೋರಿಸಿ ಉಮೇಶ್​ ಹಾಗೂ ಉದಯ ಶೆಟ್ಟಿ ಅವರನ್ನು ಹೆದರಿಸಿ 3 ದನಗಳನ್ನು ಎಳೆದೊಯ್ದಿದ್ದರು. ದನಗಳನ್ನು ಕಳವು ಮಾಡಿದ್ದಲ್ಲದೆ ಅವುಗಳನ್ನು ಕೊಂದು ತಿಂದಿದ್ದಾರೆ ಎಂದು ಆರೋಪಿಲಾಗಿದೆ.

ಈ ಕುರಿತು ಉಮೇಶ್​ ಮತ್ತು ಉದಯ್​ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಇದರ ಜತೆಗೆ ಕಳ್ಳತನಕ್ಕೆ ಬಳಸಿದ್ದ ತಲ್ವಾರ್, ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *