
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)
ಇದು ಭಾವನಾತ್ಮಕ ವಿಚಾರ, ಅದನ್ನು ಅವರ ಮನೆಯಲ್ಲಿಟ್ಟಿಕೊಳ್ಳಲಿ. ಸರ್ಕಾರ ಮಧ್ಯಪ್ರವೇಶಿಸಿ ಭವಿಷ್ಯ ಹೇಳುವವರನ್ನು ಬಂಧಿಸಬೇಕು. ದಕ್ಷಿಣ ಕನ್ನಡ ಡಿಸಿ, ಎಸ್ಪಿ ಕೂಡಲೇ ಮಧ್ಯಪ್ರವೇಶಿಸಬೇಕು.
ಬೆಂಗಳೂರು: ಮಂಗಳೂರಿನ ಮಳಲಿ ಮಸೀದಿ (Malali Masjid) ವಿವಾದದ ಬಗ್ಗೆ ಇಂದು (ಮೇ 25) ತಾಂಬೂಲ ಪ್ರಶ್ನೆ ಪ್ರಕ್ರಿಯೆ ನಡೆದಿದೆ. ತಾಂಬೂಲ ಪ್ರಶ್ನೆಯಲ್ಲಿ ದೇವರು ಇತ್ತು ಎಂಬ ಬಗ್ಗೆ ಕೇರಳದಿಂದ ಆಗಮಿಸಿದ್ದ ತಂತ್ರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ. ಇದು ಭಾವನಾತ್ಮಕ ವಿಚಾರ, ಅದನ್ನು ಅವರ ಮನೆಯಲ್ಲಿಟ್ಟಿಕೊಳ್ಳಲಿ. ಸರ್ಕಾರ ಮಧ್ಯಪ್ರವೇಶಿಸಿ ಭವಿಷ್ಯ ಹೇಳುವವರನ್ನು ಬಂಧಿಸಬೇಕು. ದಕ್ಷಿಣ ಕನ್ನಡ ಡಿಸಿ, ಎಸ್ಪಿ ಕೂಡಲೇ ಮಧ್ಯಪ್ರವೇಶಿಸಬೇಕು. ಇವರು ರಾಜ್ಯವನ್ನು ಸಾಯಿಸುತ್ತಿದ್ದಾರೆಂದು ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.
ಮಸೀದಿ ಕಟ್ಟಿರುವುದು ವಾಸ್ತವ ಸತ್ಯ- ಸಿಟಿ ರವಿ:
ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ ಸತ್ಯ. ನಾನು ಈಗಲೂ ಸವಾಲು ಹಾಕುತ್ತೇನೆ. ಶ್ರೀರಂಗಪಟ್ಟಣ ಜಾಮೀಯ ಮಸೀದಿಯ ಬಗ್ಗೆ ಅಧ್ಯಯನ ನಡೆಸಲಿ. ಪುರಾತತ್ವ ಇಲಾಖೆಯಿಂದ ಅಧ್ಯಯನ ಮಾಡಿಸಲಿ. ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ. ತಾಬೂಲ ಪ್ರಶ್ನೆ ನಂಬಿಕೆ ಇರುವವರು ಕೇಳಿದ್ದಾರೆ. ಬೇರೆಯವರ ನಂಬಿಕೆ ನಾವು ಹೇಗೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಕಾನೂನು ಅಡಿಯಲ್ಲಿ ವಿವಾದ ಇತ್ಯರ್ಥವಾಗಲಿದೆ. ಕೆಲವರು ಇಡಿಯಾಗಿ ಸಿಗುವ ಓಟಿಗಾಗಿ ಕೆಲವರು ಜ್ವಲ್ಲು ಸುರಿಸಿಕೊಂಡು ಹೋಗುತ್ತಾರೆ. ಸತ್ಯ ಗೊತ್ತಿದ್ದರೂ ಓಟಿಗಾಗಿ ರಾಜಕೀಯ ಮಾಡುತ್ತಾರೆ. ನಾವು ಓಟಿಗಾಗಿ ರಾಜಕೀಯ ಮಾಡಿಲ್ಲ. ನಾಲ್ಕು ತಲೆಮಾರು ಇದೇ ವಿಚಾರಗಳ ಮೇಲೆ ಹೋರಾಟ ಮಾಡಿದ್ದೇವೆ ಎಂದು ದೆಹಲಿಯಲ್ಲಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.