ಪತ್ರಕರ್ತರೊಬ್ಬರು ಸರ್ ನಿಮ್ಮ ಪ್ರಚೋದನಕಾರಿ ಹೇಳಿಕೆಗಳಿಂದ ಕೊಲೆಗಳಾಗುತ್ತಿವೆ ಎಂದು ಹೇಳಲಾಗುತ್ತಿದೆ ಅಂತ ಅನ್ನುವಾಗಲೇ ಸಂಸದರು ಪ್ರತಿಕ್ರಿಯಿಸದೆ ಅಲ್ಲಿಂದ ತಮ್ಮ ಕಾರಿನತ್ತ ಧಾವಿಸುತ್ತಾರೆ.
ಮಂಗಳೂರು: ಬಿಜೆಪಿ ಸಂಸದ ತೇಜಸ್ವೀ ಸೂರ್ಯ (Tejasvi Surya) ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಸ್ಥಳದಿಂದ ಪರಾರಿಯಾದ ಘಟನೆ ಶುಕ್ರವಾರ ಮಂಗಳೂರಲ್ಲಿ ನಡೆಯಿತು. ಪ್ರವೀಣ್ (Praveen Nettaru) ಕುಟಂಬಕ್ಕೆ ಪಕ್ಷ ನೀಡುತ್ತಿರುವ ನೆರವಿನ ಬಗ್ಗೆ ಮಾತಾಡುವಾಗ, ಪತ್ರಕರ್ತರೊಬ್ಬರು ಸರ್ ನಿಮ್ಮ ಪ್ರಚೋದನಕಾರಿ (provocative) ಹೇಳಿಕೆಗಳಿಂದ ಕೊಲೆಗಳಾಗುತ್ತಿವೆ ಎಂದು ಹೇಳಲಾಗುತ್ತಿದೆ ಅಂತ ಅನ್ನುವಾಗಲೇ ಸಂಸದರು ಪ್ರತಿಕ್ರಿಯಿಸದೆ ಅಲ್ಲಿಂದ ತಮ್ಮ ಕಾರಿನತ್ತ ಧಾವಿಸಿ ಹೋಗುವುದನ್ನು ವಿಡಿಯೋನಲ್ಲಿ ನೋಡಬಹುದು.