ಮಂಗಳೂರು: ಸೂರತ್ಕಲ್​ ಟೋಲ್ ಪ್ಲಾಜಾ, ಹೆಜಮಾಡಿ ಟೋಲ್‌​ನಲ್ಲಿ ವಿಲೀನ; ಟೋಲ್​ ಸಂಗ್ರಹ ಶುಲ್ಕ ಏರಿಕೆ – Mangaluru Surathkal toll gate to be merged with Hejamady toll gate price incriced


​ಮಂಗಳೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಸೂರತ್ಕಲ್​ ಟೋಲ್ ಪ್ಲಾಜಾ ಡಿಸೆಂಬರ್ 1ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಮಂಗಳೂರು: ಸೂರತ್ಕಲ್​ ಟೋಲ್ ಪ್ಲಾಜಾ, ಹೆಜಮಾಡಿ ಟೋಲ್‌​ನಲ್ಲಿ ವಿಲೀನ; ಟೋಲ್​ ಸಂಗ್ರಹ ಶುಲ್ಕ ಏರಿಕೆ

ಸುರತ್ಕಲ್ ಟೋಲ್ ಗೇಟ್ (ಸಂಗ್ರಹ ಚಿತ್ರ)

ಮಂಗಳೂರು: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಲ್ಲಿ 2015ರಲ್ಲಿ ಆರಂಭಗೊಂಡಿದ್ದ ಸೂರತ್ಕಲ್​ ಟೋಲ್ ಪ್ಲಾಜಾ (surathkal toll plaza) ಡಿಸೆಂಬರ್ 1ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಆದರೆ ಈ ಸೂರತ್ಕಲ್ ಟೋಲ್‌ಗೇಟ್‌ ಪಕ್ಕದ ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನವಾಗಲಿದೆ. ಇದರಿಂದ ಸುರತ್ಕಲ್ ಟೋಲ್‌ನ ಹೆಚ್ಚುವರಿ ಶುಲ್ಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸಲಾಗುವುದು ಎಂದು ದರ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.

ಉಡುಪಿಯ ಹೆಜಮಾಡಿ ಟೋಲ್‌ಗೇಟ್​ನಲ್ಲಿ ಸಂಗ್ರಹಿಸಲಾಗುವ ಶುಲ್ಕ

  1. ಕಾರಿಗೆ ಏಕಮುಖ ಪಾಸಿಂಗ್ 40 ರೂ. ಇತ್ತು, ಈಗ 100 ರೂ. ಶುಲ್ಕ ಆಗಲಿದೆ.
  2. ಈ ಹಿಂದೆ ಬಸ್, ಟ್ರಕ್‌ಗಳಿಗೆ ಏಕಮುಖ ಪಾಸಿಂಗ್ ದರ 210 ರೂ ಇತ್ತು ಈಗ 355 ಶುಲ್ಕ ಆಗಲಿದೆ
  3. ಭಾರಿ ಗಾತ್ರದ ಮತ್ತು ಮಲ್ಟಿ ಆಕ್ಸೆಲ್‌ಗೆ ಈ ಹಿಂದೆ 225 ರೂ ಇತ್ತು ಈಗ 555 ರೂ ಆಗಲಿದೆ.
  4. ಲಘು ವಾಣಿಜ್ಯ, ಸರಕು ವಾಹನಕ್ಕೆ ಈ ಹಿಂದೆ 70 ರೂ ಇತ್ತು ಈಗ 170 ರೂ ಆಗಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *