‘ಮಂಗಳ ಗೌರಿ’ಯ ಕಷ್ಟ ಪರಿಹಾರ ಮಾಡಲು ಚಾಮುಂಡಿ ಅವತಾರದಲ್ಲಿ ಬಂದ ‘ಸ್ಪರ್ಶ’ ರೇಖಾ

ನಿನ್ನೆಯಿಂದ ನವರಾತ್ರಿ ಉತ್ಸವ ಶುರುವಾಗಿದೆ. ಪ್ರತಿ ಮನೆಯಲ್ಲಿಯೂ ದೇವಿ ಪೂಜೆಯನ್ನು ಆಚರಣೆ ಮಾಡ್ತಾಯಿದ್ದಾರೆ. ಮಾತ್ರವಲ್ಲ ಪ್ರತಿಯೊಂದು ಸೀರಿಯಲ್​ನಲ್ಲೂ ಕೂಡಾ ನವರಾತ್ರಿ ಹಬ್ಬದ ಸ್ಪೆಷಲ್​ ಎಪಿಸೋಡ್​ಗಳನ್ನು ಪ್ರಸಾರ ಮಾಡ್ತಿದ್ದಾರೆ.

ವಿಶೇಷ ಅಂದ್ರೆ ಕಲರ್ಸ್​ ಕನ್ನಡದಲ್ಲಿ ನವರಾತ್ರಿ ಹಬ್ಬಕ್ಕಾಗಿ ಪ್ರತಿಯೊಂದು ಸೀರಿಯಲ್​ನಲ್ಲೂ ದೇವಿಯ ಒಂದೊಂದು ಅವತಾರ ಪರಿಚಯಿಸಲಾಗ್ತಿದೆ. ಈಗಾಲ್ಲೇ, ಮಂಗಳಗೌರಿ ಮದುವೆ ಸೀರಿಯಲ್​ ತಂಡದಲ್ಲಿ ದೇವಿಯ ಎಂಟ್ರಿ ಆಗಿದೆ. ಸದ್ಯ ಈ ಸೀರಿಯಲ್​ನಲ್ಲಿ ದಿನಕ್ಕೊಂದು ಟ್ವಿಸ್ಟ್​ ಅಂಡ್​ ಟರ್ನ್​ಗಳು ಜನರಿಗೆ ಧಾರಾವಾಹಿಯ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚು ಮಾಡ್ತಾನೆಯಿದೆ. ಈ ಸಂದರ್ಭದಲ್ಲಿ ದೇವಿಯ ಎಂಟ್ರಿ ಕೂಡಾ ಅಷ್ಟೇ ಕುತೂಹಲ ಉಂಟು ಮಾಡಿದೆ.

ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ದೇವಿ ರೋಲ್​ನಲ್ಲಿ ನಟಿ ರೇಖಾ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ರಾಜೀವ್ ಒಂದು ದೊಡ್ಡ ಸಂಕಟಕ್ಕೆ ಒಳಗಾಗಿರ್ತಾನೆ.. ಅದೇ ಸಂದರ್ಭದಲ್ಲಿ ಮಂಗಳ ದೇವಸ್ಥಾನದಲ್ಲಿ ತನ್ನ ಗಂಡನಿಗೆ ಒಳ್ಳೆಯದಾಗ್ಲಿ ಅಂತಾ ಪೂಜೆ ಮಾಡಿಸ್ತಿರ್ತಾಳೆ. ಇದ್ದಕ್ಕಿದ್ದ ಹಾಗೆ ಅಪಶಕುನದ ಸುಳಿವಿನಂತೆ ದೀಪ ಆರಿ ಹೋಗುತ್ತದೆ. ಆಗ ಮಂಗಳ ಗಾಬರಿಯಾಗ್ತಳೆ. ಆಗ ದೇವಿ ಪತ್ಯಕ್ಷವಾಗಿ..ನೀನು ನಿನ್ನ ಗಂಡನ ಹೆಸರಲ್ಲಿ ಇಲ್ಲಿ ಪೂಜೆ ಮಾಡಿಸ್ತಿದ್ದೀಯಾ.. ಆದ್ರೆ ಅಲ್ಲಿ ನಿನ್ನ ಗಂಡನ ಪ್ರಾಣ ಹೋಗುವ ಪರಿಸ್ಥಿತಿ ಎದುರಾಗಿದೆ ಅಂತಾರೆ.

ಈ ಮೇಲಿನ ಎಳೆಯನ್ನಿಟ್ಟುಕೊಂಡು ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಚಾಮುಂಡಿ ದೇವಿಯನ್ನು ತೋರಿಸಿದ್ದಾರೆ.. ಈ ಧಾರಾವಾಹಿಯಲ್ಲಿ ಯಾವುದೇ ಆಡಂಬರವಿಲ್ಲದೆ ಸರಳ ರೂಪದಲ್ಲಿ ದೇವಿಯಿದ್ದಾಳೆ. ಇನ್ನು ಈ ಒಂದು ಎಪಿಸೋಡ್​ನಲ್ಲಿ ಮಾತ್ರ ರೇಖಾ ಅವರ ರೋಲ್​ ಇರತ್ತೆ.. ಕಾರಣ ಈಗಾಲ್ಲೇ ಹೇಳಿದ ಹಾಗೆ ಇದು ನವರಾತ್ರಿ ವಿಶೇಷ.. ಹೀಗೇ ಕಲರ್ಸ್​ ಕನ್ನಡದ ಪ್ರತಿಯೊಂದು ಧಾರಾವಾಹಿಯಲ್ಲಿ ಒಬ್ಬರ ಎಂಟ್ರಿ ಇದ್ದೇ ಇರತ್ತೆ.. ಯಾವ ಸೀರಿಯಲ್​ನಲ್ಲಿ ದೇವಿ ರೂಪದಲ್ಲಿ ಯಾವ ನಟಿ ಬರಲಿದ್ದಾರೆ.. ಕಥೆಯನ್ನು ಹೇಗೆ ಪ್ಲಾನ್​ ಮಾಡಿದ್ದಾರೆ ಅನ್ನೋ ಡೀಟೆಲ್ಸ್​ನ್ನ ನಾವ್ ನಿಮ್ಗೆ ಕೊಡ್ತೀವಿ.

The post ‘ಮಂಗಳ ಗೌರಿ’ಯ ಕಷ್ಟ ಪರಿಹಾರ ಮಾಡಲು ಚಾಮುಂಡಿ ಅವತಾರದಲ್ಲಿ ಬಂದ ‘ಸ್ಪರ್ಶ’ ರೇಖಾ appeared first on News First Kannada.

News First Live Kannada

Leave a comment

Your email address will not be published. Required fields are marked *