ಮಂಗಳ ಗೌರಿ ಮದುವೆ ಸೀರಿಯಲ್ನ ಸ್ನೇಹ ಅಂದ್ರೆ ಯಶಸ್ವಿನಿ ಲಾಕ್ಡೌನ್ ಆದ್ಮೇಲಂತು ಫುಲ್ ಬ್ಯುಸಿಯಾಗಿದ್ರು. ಯಾವಾಗ ಕೇಳಿದ್ರು ಶೂಟಿಂಗ್ ಶೂಟಿಂಗ್ ಅಂತಾನೆ ಹೇಳ್ತಾಯಿದ್ರು.. ಅಷ್ಟು ಬ್ಯುಸಿ ಶೆಡ್ಯೂಲ್ನಲ್ಲಿ ಪುಲ್ ಸ್ಟ್ರೇಸ್ನಿಂದ ಸುಸ್ತಾಗಿದ್ರು. ಹಾಗಾಗಿ ಸ್ನೇಹ ರಿಲ್ಯಾಕ್ಸ್ಸೆಷನ್ ಗೋಸ್ಕರ್ ಶೂಟಿಂಗ್ನಿಂದ ಕೊಂಚ್ ಬಿಡುವು ಮಾಡಿಕೊಂಡು ಟ್ರಿಪ್ ಹೋಗಿದ್ರು.
ಹೌದು, ಬರೊಬ್ಬರೀ 5 ದಿನ ತಮ್ಮ ಅಮಿತ್ ಜೊತೆ ಟ್ರಿಪ್ ಹೋಗಿದ್ದ ಯಶಸ್ವಿನ್ ಸಖತ್ ಎಂಜಾಯ್ ಮಾಡಿದ್ದಾರೆ. ಯೆಸ್ ಯಶಸ್ವಿನಿ ಟ್ರಿಪ್ ಹೋಗಿದ್ದು ಕ್ರ್ಯೂಸ್ಗೆ. ಇಲ್ಲಿಗೆ ಹೋಗ್ಬೇಕು ಅಂತಾ ಯಶಸ್ವಿನಿ ಅವ್ರ ಬಹಳದಿನದ ಕನಸಾಗಿತ್ತಂತೆ. ಆದರೆ ಕೊರೊನಾ ಲಾಕ್ಡೌನ್ನಿಂದಾಗಿ ಆ ಕನಸು ಕನಸಾಗಿಯೇ ಉಳಿದಿತ್ತು. ಆದ್ರೆ ಸದ್ಯ ಕಾಲ ಕೂಡಿ ಬಂದಿದ್ದು, ಟ್ರಿಪ್ ಹೋಗಿ ಸಖತ್ ಮಜಾ ಮಾಡಿದ್ವಿ ಅಂತಾ ಯಶಸ್ವಿನಿ ತಿಳಿಸಿದ್ದಾರೆ.
ಸಮುದ್ರದ ಮಧ್ಯ.. ದೊಡ್ಡ ಹಡಗಿನಲ್ಲಿ ಕಾಲ ಕಳೆಯುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ.. ಯಶಸ್ವನಿ ನೀಲಿ ಸಮುದ್ರದ ಮಧ್ಯ ವಾತಾವರಣವನ್ನು ಸವಿಯುತ್ತಾ.. ನೀರಿನಲ್ಲಿ ಆಡ್ತಾ.. ವೆರೈಟಿ ಫುಡ್ ಟೇಸ್ಟ್ ಮಾಡಿ. ಕ್ರ್ಯೂಸ್ಗೆ ಹೋಗಿದ್ದು ತಮ್ಮನ ಜೊತೆ.. ಆದರೆ ಅಲ್ಲಿಯೂ ಕೂಡಾ ಒಂದಿಷ್ಟು ಫ್ಯಾನ್ಸ್ ಸಿಕ್ಕಿದ್ದು.. ಅವ್ರ ಜೊತೆ ಯಶಸ್ವಿನಿ ಮಸ್ತಿ ಮಾಡಿದ್ದಾರೆ. ಅಮಿತ್ ಹಾಗೂ ಯಶಸ್ವಿನ ಕ್ರ್ಸೂನ್ ಸಂಜೆ ಪಾರ್ಟಿನಲ್ಲಿ ಸೂಪರ್ ಆಗಿ ಹೆಜ್ಜೆ ಹಾಕಿದ್ದಾರೆ.
ಇನ್ನೂ ಲಕ್ಷದ್ವೀಪ್ ಐ ಲ್ಯಾಂಡ್ಗೂ ಕೂಡಾ ಇವ್ರು ತೆರಳಿದ್ದಾರೆ. ಬೋಟಿಂಗ್ ನಲ್ಲಿ ಸಖತ್ ಮಜಾ ಮಾಡಿ ಒಂದಿಷ್ಟು ಫೋಟೋಗಳನ್ನ ಲ್ಕಿಕ್ಕಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಎಲ್ಲಡೆ ಆ ಫೋಟೋಗಳದ್ದೆ ಸದ್ದು. ಒಟ್ಟಿನಲ್ಲಿ ಟ್ರಿಪ್ನ ಸಖತ್ ಎಂಜಾಯ್ ಮಾಡಿರುವ ಯಶಸ್ವಿನಿ ಇದೀಗ ಮತ್ತೆ ಬ್ಯಾಕ್ ಟು ದಿ ವರ್ಕ್ ಅನ್ನುವ ಹಾಗೆ ಶೂಟಿಂಗ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.