ಮುಂಬೈ: ಬಣ್ಣದ ಲೋಕಕ್ಕೆ ಕಪ್ಪು ಚುಕ್ಕೆಯಂತೆ ಅಂಟಿಕೊಂಡಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಇದೀಗ ಮತ್ತೋರ್ವ ನಟಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ತಾವು ಎದುರಿಸಿದ್ದ ಕರಾಳತೆಯನ್ನು ನಟಿ ಪ್ರಾಚಿ ದೇಸಾಯಿ ಬಿಚ್ಚಿಟ್ಟಿದ್ದಾರೆ.

ಸಿನಿಮಾಗಳಲ್ಲಿ ಅವಕಾಶ ಪಡೆಯಲು ಮಂಚ ಏರಲೇಬೇಕು,ಕೆಲವೊಬ್ಬರ ಜೊತೆ ಕಾಂಪ್ರಮೈಸ್ ಆಗಲೇಬೇಕು ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ. ಕಳೆದ ಎರಡು ವರ್ಷಗಳ ಹಿಂದೆ ಜಾಗತಿಕವಾಗಿ ಸದ್ದು ಮಾಡಿದ್ದ ‘Me too’ ಅಭಿಯಾನ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿತ್ತು. ಅಂದು ಈ ಅಭಿಯಾನದಡಿ ಸಾಕಷ್ಟು ನಟಿಯರು ಯಾವು ಎದುರಿಸಿದ್ದ ಲೈಂಗಿಕ ದೌರ್ಜನ್ಯದಂತಹ ಕೆಟ್ಟ ಅನುಭವಗಳನ್ನು ಬಹಿರಂಗಪಡಿಸಿದ್ದರು. ಇದೀಗ ಬಾಲಿವುಡ್ ನಟಿ ಪ್ರಾಚಿ ದೇಸಾಯಿ ಸಹ ನಿರ್ದೇಶಕನೋರ್ವ ಮಂಚಕ್ಕೆ ಕರೆದ ಕಹಿ ಘಟನೆಯನ್ನು ಹೊರ ಹಾಕಿದ್ದಾರೆ.

 

View this post on Instagram

 

A post shared by Prachi Desai (@prachidesai)

ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮಗೆ ಎದುರಾದ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಾಚಿ ಮಾತಾಡಿದ್ದಾರೆ. ದೊಡ್ಡ ಸಿನಿಮಾವೊಂದಕ್ಕೆ ನಟಿಯಾಗಲು ಈಕೆಗೆ ಅವಕಾಶ ಅರಸಿ ಬಂದಿತ್ತಂತೆ. ಆದರೆ, ಆ ಸಿನಿಮಾ ನಿರ್ದೇಶಕ ಮಾತ್ರ ಅವಕಾಶ ಬೇಕಾದರೆ ತನ್ನ ಜತೆ ಕಾಂಪ್ರಮೈಸ್ ಮಾಡ್ಕೋಬೇಕೆಂದು ಆಫರ್ ಮಾಡಿದನಂತೆ. ಆತನ ದುರ್ವತನೆಗೆ ಅಸಹ್ಯಪಟ್ಟುಕೊಂಡು ಪ್ರಾಚಿ, ಆ ಸಿನಿಮಾದ ಅವಕಾಶವನ್ನೇ ತಿರಸ್ಕರಿಸಿದರಂತೆ. ಆ ಚಿತ್ರದಲ್ಲಿ ನಟಿಸಲು ನೋ ಎಂದ್ಮೇಲೂ ಒಂದೆರಡು ಬಾರಿ ಇವರನ್ನು ಆತ ಸಂಪರ್ಕಿಸಿದ್ದನಂತೆ.

 

View this post on Instagram

 

A post shared by Prachi Desai (@prachidesai)

ಈ ಕಹಿ ಘಟನೆಯನ್ನು ಹೇಳಿಕೊಂಡಿರುವ ಪ್ರಾಚಿ, ಆ ಕಾಮುಕ ನಿರ್ದೇಶಕನ ಹೆಸರು ಹಾಗೂ ಆತನ ನಿರ್ದೇಶಿಸುತ್ತಿದ್ದ ಸಿನಿಮಾ ಟೈಟಲ್ ಬಗ್ಗೆ ಬಾಯಿ ಬಿಟ್ಟಿಲ್ಲ.

ಸಿನೆಮಾ – Udayavani – ಉದಯವಾಣಿ
Read More