ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಈ ವಾರ ಸೋತ ತಂಡದ ಸದಸ್ಯರಿಗೆ ಬಿಗ್‍ಬಾಸ್ ಡಿಫರೆಂಟ್ ಶಿಕ್ಷೆಯನ್ನು ನೀಡುತ್ತಿದ್ದಾರೆ. ಸದ್ಯ ಏಳು ಬೀಳು ಟಾಸ್ಕ್‌ನಲ್ಲಿ ಸೋತ ವಿಜಯಯಾತ್ರೆ ತಂಡದ ಇಬ್ಬರು ಸದಸ್ಯರು ನಿಂಗೈತೆ ಇರು ತಂಡದ ಎಲ್ಲಾ ಸದಸ್ಯರಿಗೆ ಊಟ ಮಾಡಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ.

ಅದರಂತೆ ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ನಿಂಗೈತೆ ಇರು ತಂಡದ ಎಲ್ಲಾ ಸದಸ್ಯರಿಗೂ ಊಟಮಾಡಿಸಿದ್ದಾರೆ. ಆದರೆ ಈ ಎಲ್ಲಾ ಸದಸ್ಯರಲ್ಲಿ ಮಂಜುಗೆ ಊಟ ಮಾಡಿಸಲು ವೈಷ್ಣವಿ ಹಾಗೂ ಪ್ರಶಾಂತ್ ಸಿಕ್ಕಾಪಟ್ಟೆ ಸರ್ಕಸ್ ಮಾಡಿದ್ದಾರೆ.

ತಮ್ಮ ಚೇಷ್ಟೆ, ತಮಾಷೆ ಹಾಗೂ ತುಂಟತನದಿಂದಲೇ ಬಿಗ್ ಮನೆಯ ಸ್ಪರ್ಧಿಗಳಿಗೆ ಮನರಂಜನೆ ನೀಡುವ ಮಂಜುಗೆ, ವೈಷ್ಣವಿ ಊಟ ಮಾಡಿಸುವ ವೇಳೆ ನನಗೆ ಇನ್ನು ಸ್ವಲ್ಪ ಉಪ್ಪು ಬೇಕಿತ್ತು ಎಂದು ಸತಾಯಿಸುತ್ತಾರೆ. ಆಗ ವೈಷ್ಣವಿ ಕೊಡುವುದಿಲ್ಲ ಎಂದು ಸ್ವಲ್ಪ, ಸ್ವಲ್ಪವೇ ಅನ್ನ ತಿನ್ನಿಸುತ್ತಾರೆ. ಆಗ ಮಂಜು ಬೆಳಗ್ಗೆ ತನಕ ನಿಧಾನವಾಗಿ ತಿನ್ನಿಸುತ್ತಾ ಎಂದು ಅಣುಕಿಸಿದ್ದಾರೆ. ನಂತರ ಮತ್ತೊಂದು ತುತ್ತು ಊಟ ತಿನ್ನಿಸಲು ಬಂದ ವೈಷ್ಣವಿಗೆ ಇರು ಇನ್ನೂ ಅಗೀತಾ ಇದ್ದೀನಿ, ಗ್ರೈಂಡ್ ಆಗಬೇಕು ಎಂದು ಕಾಯಿಸುತ್ತಾರೆ. ನನ್ನ ಜಾತಕದಲ್ಲಿತ್ತು ನೀನು ಒಂದು ದೊಡ್ಡ ಟಾಲ್ ಹೀರೋಯಿನ್ ಕೈನಲ್ಲಿ ಊಟ ಮಾಡಿಸಿಕೊಳ್ಳುತ್ತೀಯಾ ಎಂದು ಹೇಳಿದ್ದರು. ಮೊನ್ನೆ ಒಬ್ಬರಿಗೆ ಬಟ್ಟೆ ಬಿಚ್ಚಿಸಿ ಕುಣಿಸಿದ್ದೆ, ಇವತ್ತು ಅದೇ ವ್ಯಕ್ತಿ ನನಗೆ ಊಟ ಕೂಡ ಮಾಡಿಸುತ್ತಿದ್ದಾರೆ ಎಂದು ರೇಗಿಸಿದ್ದಾರೆ.

ನಂತರ ಪ್ರಶಾಂತ್ ಮಂಜುಗೆ ಊಟ ಮಾಡಿಸಲು ಬಂದಾಗ, ಇಲ್ಲಿ ಕುರೋಣ್ವಾ ಅಥವಾ ಗಾರ್ಡನ್ ಏರಿಯಾದಲ್ಲಿ ಕುರೋಣ್ವಾ ಎಂದಾಗ ಪ್ರಶಾಂತ್ ನೀನು ಎಲ್ಲಿ ಹೇಳುತ್ತಿಯಾ ಅಲ್ಲಿ, ಮಗುಗೆ ಹೊಟ್ಟೆ ತುಂಬಬೇಕು ಅಷ್ಟೇ ಎಂದು ಊಟ ಮಾಡಿಸುತ್ತಾರೆ. ಈ ವೇಳೆ ಪ್ರಶಾಂತ್ ಒಂದು ಊರಿನಲ್ಲಿ ಮಂಜು ಎಂಬ ಹುಡುಗ ಇದ್ನಂತೆ. ಅವನು ತುಂಬಾ ತುಂಟ ಅಂತೆ, ಅವನ ತುಂಟತನಕ್ಕೆ ಮನೆ ಮಂದಿಯೆಲ್ಲಾ ಕಣ್ಣೀರು ಹಾಕುತ್ತಿದ್ರಂತೆ ಎಂದು ಕಥೆ ಹೇಳಲು ಆರಂಭಿಸುತ್ತಾರೆ. ಆಗ ಮಂಜು ನನಗೆ ನನ್ನ ದೊಡ್ಡಪ್ಪನೇ ನೆನಪಾಗುತ್ತಿದ್ದಾರೆ, ನನಗೆ ಸಾಕು ಎಂದು ರೇಗಿಸುತ್ತಾ, ವೈಷ್ಣವಿ ಹಾಗೂ ಪ್ರಶಾಂತ್‍ಗೆ ಮನೆಯೆಲ್ಲಾ ಓಡಾಡಿಸುತ್ತಾ, ಸೋಫಾ ಮೇಲೆ ಉರುಳಾಡುತ್ತಾ ಆಟ ಆಡಿಸಿದ್ದಾರೆ. ಇದನ್ನೂ ಓದಿ:ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

The post ಮಂಜುಗೆ ಊಟ ಮಾಡಿಸಲು ವೈಷ್ಣವಿ, ಪ್ರಶಾಂತ್ ಸರ್ಕಸ್ appeared first on Public TV.

Source: publictv.in

Source link