ವಿಜಯ ಯಾತ್ರೆ ಹಾಗೂ ನಿಂಗ್​ ಐತೇ ಇರು ತಂಡಗಳು ಟಾಫ್​ ಫೈಟ್​ ನೀಡುತ್ತಿದ್ದವು. ಸೋತ ತಂಡ ನೇರವಾಗಿ ಎಲಿಮಿನೇಟ್​ಗೆ ನಾಮಿನೇಟ್​ ಆಗುತ್ತಿತ್ತು. ಇದ್ರಿಂದ ಟೆನ್ಷನ್​ನಲ್ಲಿ ಇದ್ದ ಎರಡು ತಂಡಗಳ ಪರಿಸ್ಥಿತಿ ಹಾಟ್​ ಸೀಟ್​ ಆಗಿತ್ತು.

ಹೆಚ್ಚು ಕಡಿಮೆ ಎರಡು ತಂಡಗಳು ಸಮಬಲ ಸಾಧಿಸುತ್ತಿದ್ದವು. ನಿನ್ನೆಯ ಎಪಿಸೋಡ್​ನಲ್ಲಿ ಬಿಗ್​ ಬಾಸ್​ ಮಜಾ ಮೊದಲು ಟಾಸ್ಕ್​ನ​ ನೀಡಿದ್ದರು, ಈ ಟಾಸ್ಕ್‌ನಲ್ಲಿ ಹಂತ ಹಂತವಾಗಿ ಆಟವಾಡಬೇಕಿತ್ತು. ಮೊದಲು ವಿಜಯ ಯಾತ್ರೆ ತಂಡದಿಂದ ವೈಷ್ಣವಿ ಹಾಗೂ ನಿಂಗ್​ ಐತೇ ಇರು ಇರು ತಂಡಿದಿಂದ ದಿವ್ಯಾ ಉರುಡುಗ ಆಟ ಪ್ರಾರಂಭಿಸಿದ್ರು. ಆದ್ರೇ ದಿವ್ಯಾ ಅವರು ಸ್ವಲ್ಪ ಅವಸರ ಮಾಡಿದ್ರಾ, ಅಥವಾ ಅವರ ಕೈ ಅವರಿಗೆ ಸಾಥ್​ ನೀಡಲಿಲ್ಲವೊ ಗೊತ್ತಿಲ್ಲ. ಅವರು ಸ್ವಲ್ಪ ಸ್ಲೋ ಆಗಿದ್ದಕ್ಕೆ ಮಂಜು ಅವರ ಟೀಮ್​ ಕಷ್ಟಕ್ಕೆ ಸಿಲುಕುತ್ತದೆ. ಇದ್ರಿಂದ ಟೀಮ್​ ಸೋಲುತ್ತದೆ.

ಇನ್ನೂ ತನ್ನಿಂದಲೇ ಈ ರೀತಿಯಾಯಿತು ಎಂದು ದಿವ್ಯಾ, ಅರವಿಂದ ಅವರ ಮುಂದೆ ಬೇಸರ ವ್ಯಕ್ತಪಡೆಸುತ್ತಾರೆ. ಅಷ್ಟೇಯಲ್ಲ ಟೀಮ್​ಗೆ ಸಾರಿ ಕೇಳುತ್ತಾರೆ. ಮಂಜು ಅವರಿಗೂ ಸಾರಿ ಕೇಳಿದ ಅವರು ಇದು ನನ್ನ ತಪ್ಪು ಕ್ಷಮೀಸಿ. ನಾ ಈ ತರಹದ ಆಟಗಳನ್ನು ಆಡಿದ್ದೇನೆ ಆದರೂ ನನಗೆ ಏನ್ ಆಯ್ತು ಅಂತಾ ಗೊತ್ತಿಲ್ಲ ಎನ್ನುತ್ತಾರೆ.

ಇತ್ತ ದಿವ್ಯಾ ಸುರೇಶ್ ಅವರು ಪ್ರಿಯಾಂಕಾ ಅವರ ಮುಂದೆ ಚಕ್ರವರ್ತಿ ಅವರ ಬಗ್ಗೆ ಬೇಸರ ವ್ಯಕ್ತಪಡೆಸಿದ್ರು. ಘಮವನ್ನು ಸೇಳೆಯುತ್ತಾ ಟಾಸ್ಕ್​ನಲ್ಲಿ ನನಗೆ ಇಂಕ್​ ಸ್ಮೇಲ್​ ಗೊತ್ತಾಗ್ಲಿಲ್ಲಾ ಅಂದಿದ್ದಕ್ಕೆ ಟಾಂಟ್ ಮಾಡಿದ್ರು. ನಾನು ಒಳ್ಳೆಯ ರೀತಿ ಆಡಿದಾಗ ಏನ್​ ಹೇಳಲಿಲ್ಲ. ಒಂದು ಟಾಸ್ಕ್​ ಸೋತಿದ್ದಕ್ಕೆ ನಗುನಗ್ತಾನೆ ಟಾಂಟ್​ ಮಾಡಿದ್ರು. ಅವರು ಹೇಳುವ ಮಾತುಗಳು ನಂಗೆ ಕೋಪಾ ತರಿಸುತ್ತವೆ ಎನ್ನುತ್ತಾರೆ.
ಒಟ್ನಲ್ಲಿ ಈ ವಾರ ಎಷ್ಟೇ ಕೂಲ್​ ಆಗಿ ಸ್ಪರ್ಧಿಗಳು ಆಡಲು ಪ್ರಯತ್ನಿಸಿದ್ರು, ಅಲ್ಲಲ್ಲಿ ಹೊಗೆ ಆಡಿದ್ದು ಸುಳ್ಳಲ್ಲ. ಈ ವಾರ ಕಿಚ್ಚನ ಕಟ್ಟೆಯಲ್ಲಿ ಯಾರಿಗೆ ಕ್ಲಾಸ್​ ಇರಲಿದೇ ಎಂಬುವುದನ್ನು ನೋಡಬೇಕು.

The post ಮಂಜುಗೆ ದಿವ್ಯಾ ಉರುಡುಗ ಸಾರಿ ಕೇಳಿದ್ಯಾಕೆ? appeared first on News First Kannada.

Source: newsfirstlive.com

Source link