ಎಂಡ್ ಆಫ್ ದಿ ಡೇ ಬಿಗ್‌ಬಾಸ್‌ ಅನ್ನೋದು ಒಂದು ಶೋ. ಇಲ್ಲಿ ಎಲ್ಲರೂ ಗೇಮ್ ಆಡೋಕೆ ಬಂದಿರೋದು. ಅದನ್ನ ಮರೆತರೇ ಅದು ಸ್ಪರ್ಧಿಗಳ ತಪ್ಪು. ಇದಕ್ಕೆ ಅವರವೇ ಹೊಣೆ. ಈ ರೀತಿ ಹೇಳೋಕು ಒಂದು ಕಾರಣವಿದೆ. ಅದು ಭಾನುವಾರ ನಡೆದ.. ಚಂದ್ರಚೂಡ್ ಹಾಗೂ ಲ್ಯಾಗ್‌ ಮಂಜು ನಡುವಿನ ವಾಕ್ಸಮರ.

ವಾಕ್ಸಮರ ನಂತರ ಸೋಷಿಯಲ್ ಮೀಡಿಯಾದಲ್ಲಿ ಆಗ್ತಿರೋ ಚರ್ಚೆಗಳು ತಾರಕ್ಕೇರಿವೆ. ಪರ ಹಾಗೂ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗೋದು ಸಹಜವೇ ಬಿಡಿ. ಆದ್ರೆ, ನಮ್ಮ ಪ್ರಶ್ನೆಯಿರೋದು ಈ ವಾಕ್ಸಮರದಿಂದ ಯಾರಿಗೆ ಲಾಭ ಯಾರಿಗೆ ನಷ್ಟ? ಯಾಕಂದ್ರೆ, ಇದೊಂದು ಬಿಗ್ ಆಟ.

 

ಭಾನುವಾರ ಚಂದ್ರಚೂಡ್‌ ಮಾತಿನ ಶೈಲಿ, ಅವರು ಪ್ರಸ್ತಾಪಿಸಿದ ವಿಚಾರಗಳು, ಕೊಟ್ಟ ಕ್ಲಾರಿಟಿಗಳು ಆಶ್ಚರ್ಯವೆನಿಸಲಿಲ್ಲ. ಯಾಕಂದ್ರೆ, ಮಾತಿನಲ್ಲಿ ಅವರನ್ನ ಸೋಲಿಸೋದು ಕಷ್ಟ. ಆದ್ರೆ, ಮಂಜು ಪಾವಗಡ ಡಲ್ ಆದ್ರೂ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಕೇವಲ ಹೊರಗಡೆಯಲ್ಲ ಬಿಗ್ಬಾಸ್ ಮನೆಯಲ್ಲೂ ಕೂಡ. ಇವರು ಹೇಗೇ ಬಂದ್ರು? ಅನ್ನೋ ಮಾತು ಮಂಜು ಮುಳುವಾಗಿದೆ. ಕಿಚ್ಚ ಸುದೀಪ್‌ ಕೂಡ ಈ ಬಗ್ಗೆ ಪ್ರಸ್ತಾಪಿಸಿದರು. ಕೆ.ಪಿ. ಅರವಿಂದ್ ಕೂಡ ಆ ಮಾತು ಆಡಬಾರದಿತ್ತು ಅಂತಾ ಹೇಳಿದರು.

ಹಾಗಂತಾ ಚಂದ್ರಚೂಡ್‌ ಇದು ಸಂಪೂರ್ಣವಾಗಿ ವರವಾಗಿದೆಯೇ ಅಂತಾ ನೋಡೋದಾದ್ರೆ.. ನೋ. ಈ ಎಪಿಸೋಡ್‌ ಅವ್ರಿಗೆ ಸಂಪೂರ್ಣವಾಗಿ ವರವಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಚಂದ್ರಚೂಡ್‌ ಬಗ್ಗೆಯೂ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫಸ್ಟ್ ಇನ್ನಿಂಗ್ಸ್‌ನಲ್ಲಿ ಅವರ ಆಟದ ವೈಖರಿಯನ್ನ ಪ್ರಸ್ತಾಪಿಸಿ ಕುಟುಕಿದ್ದಾರೆ.

 

ಇನ್ನೊಂದೆಡೆ, ಲ್ಯಾಗ್‌ ಮಂಜು ಮೇಲೆ ಹಲವರಿಗೆ ಅನುಕಂಪವೂ ಹುಟ್ಟಿದೆ. ಮಂಜು ನಾವು ನಿಮ್ಮ ಜೊತೆ ಇದ್ದೀವಿ, ಹಳ್ಳಿ ಹುಡುಗನಿಗೆ ಸಪೋರ್ಟ್ ಮಾಡೋಣ ಅಂತೆಲ್ಲಾ ಜನರು ಹೇಳ್ತಿದ್ದಾರೆ. ಸ್ವಲ್ಪ ಮಟ್ಟಿಗೆ ಮಂಜು ಮೇಲೆ ಅನುಕಂಪವೂ ಹರಿದು ಬಂದಿದೆ ಅನ್ನೋದು ಕೂಡ ಸತ್ಯವೇ. ಲ್ಯಾಗ್‌ ಮಂಜು ಹಾಗೂ ಚಂದ್ರಚೂಡ್‌ರ ಈ ವಾಕ್ಸಮರ ವೋಟಿನ ಮೇಲೆ ಹೇಗೇ ಪರಿಣಾಮ ಬೀರಲಿದೆ ಅನ್ನೋದು ಈಗಲೇ ಹೇಳೋದು ಕಷ್ಟ. ಅದಕ್ಕೆ ಶನಿವಾರದವರೆಗೆ ಕಾಯಲೇಬೇಕು.

ಈ ಎಪಿಸೋಡ್‌ನ ಪರಿಣಾಮ ಮುಂದಿನ ದಿನಗಳಲ್ಲಿ ಇವರಿಬ್ಬರು ಹೇಗೇ ಇರ್ತಾರೆ? ಹೇಗೇ ಮಾತನಾಡ್ತಾರೆ? ಅನ್ನೋದರ ಮೇಲೆ ನಿರ್ಧಾರವಾಗಲಿದೆ. ಈ ವಾರದಲ್ಲಿ ಯಾರು ಹೇಗೇ ವರ್ತಿಸ್ತಾರೆ ಅನ್ನೋದರ ಮೇಲೆ ಪ್ಲಸ್ ಹಾಗೂ ಮೈನಸ್‌ ನಿಂತಿದೆ.

ಭಾನುವಾರದ ವಾಕ್ಸಮರದಿಂದ ಲ್ಯಾಗ್ ಮಂಜು ಕೊಂಚ ಅಲುಗಾಡಿರೋದು ನಿಜ. ಅದೇ ರೀತಿ ಚಂದ್ರಚೂಡ್‌ ಅತ್ಯುತ್ಸಾಹದಿಂದ ಇರೋದು ಸತ್ಯವೇ. ಒಂದು ವೇಳೆ ಮಂಜು ಕಂಪ್ಲೀಟ್ ಡಲ್ ಆಗೋದ್ರೆ, ಅವ್ರಿಗೆ ನೆಗೆಟಿವ್ ಆಗ್ಲಿದೆ. ಜೊತೆಗೆ ಚಂದ್ರಚೂಡ್‌ ಇದೇ ಉತ್ಸಾಹದ ಭರದಲ್ಲಿ ಅಪಬ್ಧಗಳನ್ನ ಮಾತನಾಡಿದ್ರೆ, ಅವರಿಗೆ ಇದು ಮುಳುವಾಗ್ಲಿದೆ.

ಮಂಜು ಈ ವಿಚಾರದ ಬಗ್ಗೆ ಮೌನದ ಜೊತೆಗೆ ಟಾಸ್ಕ್‌ ಚೆನ್ನಾಗಿ ಮಾಡಿದ್ರೆ, ಅವ್ರಿಗೆ ಅಡ್ವಾಂಟೇಜ್ ಆಗ್ಲಿದೆ. ಜೊತೆಗೆ ಚಂದ್ರಚೂಡ್‌ ಜನರಿಗೆ ಅನಿಸಿದ ಅಭಿಪ್ರಾಯವನ್ನ ಮಾತ್ರ ಗಟ್ಟಿ ಧ್ವನಿಯಲ್ಲಿ ಹೇಳಿದ್ರೆ ಅವ್ರಿಗೆ ಲಾಭವಾಗ್ಲಿದೆ. ಹೀಗಾಗಿ ವಾಕ್ಸಮರ ಲಾಭ? ನಷ್ಟ? ಈ ವಾರದ ಇವರಿಬ್ಬರ ನಡೆಯ ಮೇಲೆ ನಿರ್ಧಾರಿತವಾಗಲಿದೆ.

The post ಮಂಜು vs ಚಕ್ರವರ್ತಿ: ವಾಕ್ಸಮರದಿಂದ ಯಾರಿಗೆ ಪ್ಲಸ್‌? ಯಾರಿಗೆ ಮೈನಸ್‌? appeared first on News First Kannada.

Source: newsfirstlive.com

Source link