ಮಂಟಪದಲ್ಲೇ ವರದಕ್ಷಿಣೆ ಹಣ ಹೆಣ್ಮಕ್ಕಳ ಹಾಸ್ಟೆಲ್​ಗೆ ನೀಡಿ ಎಂದ ಮಗಳು; ಖಾಲಿ ಚೆಕ್ ಕೊಟ್ಟ ಅಪ್ಪ


ಮದುವೆ ಬಗ್ಗೆ ಹೆಣ್ಮಕ್ಕಳು ದೊಡ್ಡ ದೊಡ್ಡ ಕನಸುಗಳನ್ನೇ ಕಂಡಿರುತ್ತಾರೆ. ಅದರಲ್ಲೂ ಶ್ರೀಮಂತರ ಮನೆಯ ಹಣ್ಮಕ್ಕಳು ಅಂದ್ರೆ ಮುಗಿದೇ ಹೋಯ್ತು. ಕನಸುಗಳು ಎಲ್ಲೆ ಮೀರುತ್ತವೆ.. ಇದರ ಮಧ್ಯೆ ವರದಕ್ಷಿಣೆ ಅನ್ನೋ ಪಿಡುಗು ದಾಂಪತ್ಯದ ಬೆಸುಗೆಯ ಗಂಟಿನ ಮಧ್ಯೆ ಬಂದು ಸಂಬಂಧಗಳನ್ನ ಒಡೆದುಬಿಡುತ್ತವೆ.

ಆದರೆ ರಾಜಸ್ಥಾನದ ಈ ಸ್ಟೋರಿ ತುಂಬಾನೇ ಡಿಫ್ರೆಂಟ್ ಆಗಿದೆ. ಮದುವೆ ವೇಳೆ ಕೈಹಿಡಿಯುವ ಗಂಡನ ಕನಸು ಕಾಣುವ ಬದಲಾಗಿ, ಹೆಣ್ಮಕ್ಕಳ ಬದುಕಿನ ಶ್ರೇಯಸನ್ನ ಬಯಸಿ ಯುವತಿಯೊಬ್ಬಳು ತೆಗೆದುಕೊಂಡ ದೃಢ ನಿರ್ಧಾರದ ಕಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸ್ಫೂರ್ತಿಯ ಪ್ರಸಂಗ ನಡೆದಿದ್ದು, ರಾಜಸ್ಥಾನದ ಬರ್ಮೇರ್ ಪಟ್ಟಣದಲ್ಲಿ. ಹುಟ್ಟಿದ ಮಗು ಹೆಣ್ಣು ಎಂದು ಗೊತ್ತಾದ ಕೂಡಲೇ ತಂದೆ ಕಿಶೋರ್ ಸಿಂಗ್, ಆಕೆಯ ಮದ್ವೆ ಬಗ್ಗೆ ಯೋಚನೆ ಮಾಡಿದ್ದ. ಮುಂದಿನ ದಿನಗಳಲ್ಲಿ ಮಗಳ ಮದುವೆ ಮಾಡುವ ದಿನ ಬರುತ್ತೆ. ಈ ವೇಳೆ ವರದಕ್ಷಿಣೆ ನೀಡಬೇಕು ಎಂದು ಆಕೆ ಹುಟ್ಟಿದ ದಿನದಿಂದ ಹಣವನ್ನ ಕೂಡಿಟ್ಟಿದ್ದ.

ಅಂತೂ ಒಂದು ದಿನ ಮದುವೆ ಮಾಡುವ ದಿನ ಬಂದೇ ಬಿಟ್ಟಿತ್ತು. ಈ ವೇಳೆ ಮಗಳು ಅಂಜಲಿ, ಅಪ್ಪನಿಗೆ ತನ್ನ ಮನದ ಇಂಗಿತವನ್ನ ತಿಳಿಸುತ್ತಾಳೆ. ಏನಂದರೆ, ನೀವು ಇಷ್ಟುದಿನ ವರದಕ್ಷಿಣೆಗಾಗಿ ಕೂಡಿಟ್ಟ ಹಣವನ್ನ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಕಟ್ಟಿಸು. ಇದು ನನ್ನ ಆಸೆ ಎಂದು ತಂದೆಯ ಬಳಿ ಹೇಳುತ್ತಾಳೆ. ಇದಕ್ಕೆ ಆಕೆಯ ತಂದೆ ಕೂಡ ಸಮ್ಮತಿ ನೀಡುತ್ತಾರೆ.

ಅದರತೆ ಅಂಜಲಿ ಅವರು ಕಳೆದ ನವೆಂಬರ್​ 21 ಪ್ರವೀಣ್ ಸಿಂಗ್ ಎಂಬುವವರನ್ನ ವಿವಾಹ ಆಗ್ತಾರೆ. ಈ ವೇಳೆ ಅಂಜಲಿ ಅವರ ಆಸೆಯಂತೆ.. ಸಪ್ತಪದಿ ತುಳಿಯವ ಮಂಟಪದಲ್ಲಿ ಮಠದ ಮುಖ್ಯಸ್ಥ ಮಹಾಂತ್ ಪ್ರತಾಪ್ ಪುರಿ ಮೂಲಕ ತನ್ನ ನಿರ್ಧಾರವನ್ನ ಪ್ರಕಟಿಸುತ್ತಾಳೆ. ಈ ವೇಳೆ ನೆರದಿದ್ದ ಗಣ್ಯರು, ಸಂಬಂಧಿಕರು ಆಕೆಯ ನಿರ್ಧಾರಕ್ಕೆ ಚಪ್ಪಾಳೆ ತಟ್ಟಿ ಹರಸುತ್ತಾರೆ. ಆಗ ಅಜಂಲಿ ತಂದೆ ಖಾಲಿ ಚೆಕ್​​ಗೆ ಸಹಿ ಮಾಡಿ ಎಷ್ಟು ಬೇಕಾದರೂ ಹಣವನ್ನ ತೆಗೆದುಕೊಳ್ಳುವಂತೆ ಸೂಚನೆ ನೀಡ್ತಾರೆ.

ಪುರಿ ಅವರು ಈಗಾಗಲೇ ಹೆಣ್ಮಕ್ಕ ಹಾಸ್ಟೆಲ್ ನಿರ್ಮಾಣಕ್ಕೆ ಒಂದು ಕೋಟಿ ಹಣವನ್ನ ಘೋಷಣೆ ಮಾಡಿದ್ದರು. ಅದಕ್ಕೆ ಹೆಚ್ಚುವರಿಯಾಗಿ 50 ರಿಂದ 75 ಲಕ್ಷ ರೂಪಾಯಿ ಬೇಕಿತ್ತು. ಅದಕ್ಕೆ ಅಂಜಲಿ ತಂದೆ ನೀಡಿದ್ದ ಹಣವನ್ನ ಬಳಸಿಕೊಳ್ಳಲಾಗಿದೆ.

ಅಂಜಲಿ ಮಾಧ್ಯಮವೊಂದಕ್ಕೆ ನೀಡಿರುವ ಮಾಹಿತಿ ಪ್ರಕಾರ.. ನನ್ನ ಕುಟುಂಬ ಹೆಣ್ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಿದೆ. ನಾನು ಯಾವಾಗಲೂ ಇತರೆ ಹೆಣ್ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುತ್ತಿದ್ದೆ. ನಾನು ಓದುತ್ತಿರುವಾಗಲೇ ವರದಕ್ಷಿಣೆ ನೀಡಬಾರದು ಅನ್ನೋ ನಿರ್ಧಾರಕ್ಕೆ ಬಂದಿದ್ದೆ. ಬದಲಿಗೆ ಹೆಣ್ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಏನಾದರೂ ಮಾಡಬೇಕೆಂದು ಯೋಚಿಸಿದ್ದೆ. ನನ್ನ ಈ ಯೋಚನೆಯನ್ನ ಮದುವೆ ಮುಂಚೆ ತಂದೆಗೆ ತಿಳಿಸಿದ್ದೆ. ಅದರಂತೆ ನನ್ನ ಆಸೆಯಂತೆ ಅಪ್ಪ ಹಾಸ್ಟೆಲ್ ನಿರ್ಮಾಣಕ್ಕೆ 75 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *