ಬೆಂಗಳೂರು: ಕೊರೊನಾ ಸೋಂಕು ಮಂಡ್ಯ ಜಿಲ್ಲೆಯಲ್ಲೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಸದೆ ಸುಮಲತಾ ಅಂಬರೀಶ್ ಅವರು ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನ ಭೇಟಿ ಮಾಡಿದರು.

ಸುಧಾಕರ್ ಭೇಟಿ ಬಳಿಕ ಮಾತನಾಡಿದ ಸುಮಲತಾ.. ಮಂಡ್ಯ ಜಿಲ್ಲೆ ಕೋವಿಡ್ ವಿಷಯವಾಗಿ ಚರ್ಚೆ ಮಾಡಿದ್ವಿ. ಮಂಡ್ಯಗೆ ಆಕ್ಸಿಜನ್ ಬಗ್ಗೆ ಕೇಳಿದ್ವಿ, ಸದ್ಯ ಇರುವ ರೋಗಿಗಳಿಗೆ ಆಕ್ಸಿಜನ್ ಇದೆ. ಆದರೆ ಇನ್ನಷ್ಟು ಆಕ್ಸಿಜನ್ ಬೆಡ್​ಗಳ ಅವಶ್ಯಕತೆ ಇದೆ.

ನಮ್ಮ ಜಿಲ್ಲೆಯಲ್ಲಿ ಆಕ್ಸಿಜನ್ ಫ್ಲಾಂಟ್ ಮಾಡುವಂತೆ ಕೇಳಿದ್ವಿ. ಮೂರು ನಾಲ್ಕು ವಾರಗಳಲ್ಲಿ ಮಾಡಿಕೊಡ್ತೀವಿ ಅಂತಾ ಆರೋಗ್ಯ ಸಚಿವರು ತಿಳಿಸಿದ್ದಾರೆ. ಮಂಡ್ಯ ಮತ್ತು ಮಳವಳ್ಳಿಯಲ್ಲಿ ಆಕ್ಸಿಜನ್ ಜನರೇಟರ್ಸ್ ಮಾಡ್ತೀವಿ ಅಂತಾ ಹೇಳಿದ್ರು. ಸದ್ಯಕ್ಕೆ ಸ್ವಲ್ಪ ವ್ಯಾಕ್ಸಿನ್ ಕೊರತೆ ಇದೆ. ಎರಡನೇ ಡೋಸ್ ನವರಿಗೆ ಮೊದಲ ಆದ್ಯತೆ ಕೊಡ್ತೀವಿ. ಬಳಿಕ ವ್ಯಾಕ್ಸಿನ್ ಬಂದ ಮೇಲೆ ಮೊದಲ ಡೋಸ್ ಕೂಡ ಕೊಡ್ತೀವಿ. ಈ ಸಮಸ್ಯೆ ಇಡೀ ದೇಶದಲ್ಲಿ ಇದೆ. ನಮ್ಮ ಕರ್ನಾಟಕದಲ್ಲಿ ಸ್ವಲ್ಪ ಕೇಸ್ ಜಾಸ್ತಿಯಾಗ್ತಿದೆ. ನಾನು ಪ್ರಧಾನಿ ಕಾರ್ಯಲಯಕ್ಕೆ, ಕೇಂದ್ರ ಹೆಲ್ತ್ ಡಿಪಾರ್ಟ್ಮೆಂಟ್ ಲೆಟರ್ ಬರೆದಿದ್ದೇನೆ. ಆದಷ್ಟು ಬೇಗ ಆಕ್ಸಿಜನ್ ಸಪ್ಲೈ ಮಾಡಲಾಗುತ್ತದೆ. ಕರ್ನಾಟಕಕ್ಕೆ ಆದ್ಯತೆ ಮೇರೆಗೆ ಕೊಡಿ ಎಂದು ಕೇಳುತ್ತಿದ್ದೇನೆ.

The post ಮಂಡ್ಯಗೆ ಹೆಚ್ಚಿನ ಆಕ್ಸಿಜನ್ ನೀಡುವಂತೆ ಕೇಳಿದ್ದೇನೆ -ಡಾ.ಸುಧಾಕರ್ ಭೇಟಿ ಬಳಿಕ ಸುಮಲತಾ ಹೇಳಿಕೆ appeared first on News First Kannada.

Source: newsfirstlive.com

Source link