ಮಂಡ್ಯದಲ್ಲಿ ಕೊನೆಗೂ ಸೆರೆ ಸಿಕ್ಕ ಪುಂಡಾನೆ ಮೌಂಟೇನ್ ಟಸ್ಕರ್ -3945

ಮಂಡ್ಯದಲ್ಲಿ ಕೊನೆಗೂ ಸೆರೆ ಸಿಕ್ಕ ಪುಂಡಾನೆ ಮೌಂಟೇನ್ ಟಸ್ಕರ್ -3945

ಮಂಡ್ಯ.: ಬರೋಬ್ಬರಿ 48 ಗಂಟೆಗಳ ಕಾಲ, ಸುಮಾರು 40 ಅಧಿಕಾರಿಗಳ ನೇತೃತ್ವದ ಕಾರ್ಯಾಚರಣೆ ಬಳಿಕ ಕೊನೆಗೂ ಪುಂಡಾನೆ ಮೌಂಟೇನ್ ಟಸ್ಕರ್ -3945 ಸೆರೆ ಸಿಕ್ಕಿದೆ. ಮದ್ದೂರು- ಚನ್ನಪಟ್ಟಣದ ಅರಣ್ಯ ಪ್ರದೇಶದಲ್ಲಿ ಆನೆಯನ್ನ ಸೇರೆ ಹಿಡಿಯಲಾಗಿದೆ.

ಚಾಮರಾಜನಗರ ಜಿಲ್ಲೆಯ ಕೌದಳ್ಳಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿದ್ದ ಆನೆ, ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನಲ್ಲಿ ಅಬ್ಬರಿಸಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಕಳೆದ ನಾಲ್ಕೈದು ದಿನಗಳಿಂದ ಜನರ ನಿದ್ದೆ ಕೆಡಿಸಿತ್ತು. ಅರಣ್ಯಾಧಿಕಾರಿಗಳು ಆನೆಗೆ ರೆಡಿಯೋ ಕಾಲರ್ ಅಳವಡಿಸಿದ್ದರು.

ಕುಶಾಲನಗರದ ದುಬಾರೆ ಕ್ಯಾಂಪ್​ನ ಅಭಿಮನ್ಯು, ಭೀಮ, ಗಣೇಶ ಹಾಗೂ ಗೋಪಾಲಸ್ವಾಮಿ ಆನೆಗಳ ಸಹಾಯದಿಂದ ಅರಣ್ಯಾಧಿಕಾರಿ ಟಿ.ಹೀರಾಲಾಲ್ ನೇತೃತ್ವದ ತಂಡ ಆನೆ ಸೆರೆಗೆ ಕಾರ್ಯಾಚರಣೆ ನಡೆಸಿತ್ತು. ಈಗ ಕೊನೆಗೂ ಮೌಂಟೇನ್ ಟಸ್ಕರ್ ಆನೆಯನ್ನ ಸೆರೆ ಹಿಡಿದು ದುಬಾರೆ ಕ್ಯಾಂಪ್​​​ಗೆ ರವಾನೆ ಮಾಡಲಾಗಿದೆ.

 

The post ಮಂಡ್ಯದಲ್ಲಿ ಕೊನೆಗೂ ಸೆರೆ ಸಿಕ್ಕ ಪುಂಡಾನೆ ಮೌಂಟೇನ್ ಟಸ್ಕರ್ -3945 appeared first on News First Kannada.

Source: newsfirstlive.com

Source link