ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಮಧ್ಯೆ ನಡೆಯುತ್ತಿರುವ ವಾಕ್ಸಮರ ತಾರಕಕ್ಕೇರಿದೆ. ಅದರ ಮುಂದುವರಿದ ಭಾಗವಾಗಿ ಹೆಚ್‌ಡಿಕೆ ವಿರುದ್ಧ ಸುಮಲತಾ ಬೆಂಬಲಿಗರು ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

 

ಇದನ್ನೂ ಓದಿ: ಸುಮಲತಾ ಬಗ್ಗೆ ಮಾತು –“ಮಹಿಳೆಯರನ್ನು ಗೌರವಿಸೋದು ಕಲೀರಿ” ಎಂದು ಎಚ್ಡಿಕೆಗೆ ಹೇಳಿದ್ಯಾರು?

ಕುಮಾರಸ್ವಾಮಿ ಅವರ ವ್ಯಂಗ್ಯ ಭಾವಚಿತ್ರವನ್ನ ಹಿಡಿದು ದಿಕ್ಕಾರ ಕೂಗಿದ್ದಾರೆ. ಕೊನೆಗೆ ಅವರ ಭಾವಚಿತ್ರಕ್ಕೆ ಬೆಂಕಿಹಚ್ಚಿ, ಆಕ್ರೋಶವನ್ನ ಹೊರ ಹಾಕಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕುಮಾರಸ್ವಾಮಿಯವರೇ ಕಾರಣ. ಕೂಡಲೇ ಸುಮಲತಾ ಅವರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ

ಇದನ್ನೂ ಓದಿ: ನನ್ನ ಸ್ನೇಹಿತನ ಸಾವಿನ ಅನುಕಂಪದಿಂದ ಸುಮಲತಾ ಗೆದ್ದಿದ್ದಾರೆ ಅಷ್ಟೇ- ಹೆಚ್​ಡಿಕೆ

The post ಮಂಡ್ಯದಲ್ಲಿ ಹೆಚ್​​ಡಿಕೆ ವಿರುದ್ಧ ಸಿಡಿದೆದ್ದ ಸುಮಲತಾ ಅಂಬರೀಶ್ ಬೆಂಬಲಿಗರು appeared first on News First Kannada.

Source: newsfirstlive.com

Source link