ಮಂಡ್ಯದಿಂದ ಎಲೆಕ್ಷನ್​​ಗೆ ನಿಲ್ತಾರಾ ಪ್ರೇಮ್..? ಈ ಬಗ್ಗೆ ಸಿದ್ದರಾಮಯ್ಯ, DKS ಭೇಟಿ ಬಳಿಕ ಏನಂದ್ರು?


ಬೆಂಗಳೂರು: ಚಿತ್ರನಟ, ನಿರ್ದೇಶಕ ಪ್ರೇಮ್​ ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​ ರನ್ನು ಭೇಟಿ ಮಾಡಿ ‘ಏಕ್ ಲವ್ ಯಾ’ ಚಿತ್ರ ವೀಕ್ಷಿಸಲು ಆಹ್ವಾನ ನೀಡಿದ್ದಾರೆ.

ಕೈ ನಾಯಕರು ಅಹೋರಾತ್ರಿ ಧರಣಿ ಮಾಡುತ್ತಿದ್ದ ವೇಳೆಯಲ್ಲಿ ವಿಧಾನಸೌಧದಲ್ಲಿಯೇ ಭೇಟಿಯಾಗಿದ್ದಾರೆ. ಈ ಸಂಬಂಧ ಪ್ರೇಮ್​ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಏಕಲವ್ಯ ಸಿನಿಮಾ ರಿಲೀಸ್​ ಆಗ್ತಿದೆ, ಇದು ನನ್ನ ದೊಡ್ಡ ಬಜೆಟ್​ ಸಿನಿಮಾ ಆದ್ದರಿಂದ ಸಿನಿಮಾ ವೀಕ್ಷಣೆಗೆ ಆಹ್ವಾನ ನೀಡಲು ಆಗಮಿಸಿದ್ದೇ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ಗೆ ಆಹ್ವಾನ ನೀಡಿರುವುದಾಗಿ ತಿಳಿಸಿದರು.

ರಾಜಕೀಯಕ್ಕೆ ಬರುವ ಕುರಿತು ಮಾತನಾಡಿರುವ ಪ್ರೇಮ್​ ನನಗೆ ರಾಜಕೀಯಕ್ಕೆ ಬರುವ ಆಸೆಯಿಲ್ಲ ಎಂದಿದ್ದಾರೆ. ಇನ್ನೂ ರಕ್ಷಿತಾ ಮೊದಲಿನಿಂದಲೂ ಬಿಜೆಪಿಯಲ್ಲಿದ್ದಾರೆ. ಆದರೇ ಅವರು ಎಲೆಕ್ಷನ್ನಿಗೆ ನಿಲ್ತಾರೋ ಇಲ್ವೊ ಅದರ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ. ಇನ್ನೂ ನನಗೆ ರಾಜಕೀಯದಲ್ಲಿ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಹಿರಿಯರಿದ್ದಾರೆ, ಗುರುಗಳು ಇದ್ದಾರೆ ಎಂದು ಹೇಳಿರುವ ಪ್ರೇಮ್​, ಎಲೆಕ್ಷನ್​ಗೆ ನಿಲ್ಲದಿದ್ರೂ ಕೆಲಸ ಮಾಡ್ತೇನೆ ಎಂದಿದ್ದಾರೆ.

ಮಂಡ್ಯದಲ್ಲಿ ಪ್ರೇಮ್​ ನಿಲ್ತಾರೆ ಎಂಬ ಮಾತಿಗೆ ಉತ್ತರಿಸಿರುವ ಪ್ರೇಮ್​ ಅಂಬರೀಶ್​ ಅಣ್ಣ ಇದ್ದಾಗ ಅಣ್ಣದ ಎದುರಾಗಿ ನಿಲ್ಲೊಕೆ ಹೇಳಿದ್ದು ಎಲ್ಲರಿಗೂ ಗೊತ್ತೇ ಇದೆ, ಆಗಲೂ ನಾನು ನಿಲ್ಲಲಿಲ್ಲ. ಮುಂದೆ ಏನಾಗತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *