
ಸಚಿವ ನಾರಾಯಣಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್
ಸಚಿವ ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಮಂಡ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ಗೆ ಸಚಿವ ನಾರಾಯಣ ಗೌಡರಿಂದ ಖಡಕ್ ವಾರ್ನಿಂಗ್ ನೀಡಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷನಿಗೆ ಕ್ಲಾಸ್ ತೆಗೆದುಕೊಂಡರು.
ಮಂಡ್ಯ: ಎಂಎಲ್ಸಿ ಚುನಾವಣೆಯಲ್ಲಿ ಜೆಡಿಎಸ್ ಸೋಲಲು ಸಚಿವ ನಾರಾಯಣಗೌಡ ಕಾರಣ. ನಾರಾಯಣಗೌಡನ ಹಿಂಬಾಗಿಲ ರಾಜಕೀಯದಿಂದ ಸೋಲಾಯಿತು. ಹೇಡಿ ಕೆಲಸ ಮಾಡ್ಕೋಂಡು ಇದ್ದಾರೆ, ಮಾನ ಮರ್ಯಾದೆ ಇದೀಯಾ ಎಂದು ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಸಚಿವ ನಾರಾಯಣಗೌಡ ವಿರುದ್ಧ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ವಾಗ್ದಾಳಿ ಮಾಡಿದರು. ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಮಾಡಿದ ರೀತಿ ಈ ಎಂಎಲ್ಸಿ ಚುನಾವಣೆಯಲ್ಲಿ ಮಾಡೋಕೆ ಆಗಲ್ಲ. ತಾಕತ್ತು ಇದರೆ ಈ ಚುನಾವಣೆಯಲ್ಲಿ ಹಾಗೆ ಮಾಡಿ. ಜೆಡಿಎಸ್ನಲ್ಲಿರುವವರು ಅಪ್ಪನಿಗೆ ಹುಟ್ಟಿದ ಮಕ್ಕಳು ಎಂದು ಹೇಳಿದರು. ಈ ಹಿನ್ನೆಲೆ ಜಿಲ್ಲೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮತ್ತು ಸಚಿವರ ನಡುವೆ ವಾಕ್ ಸಮರ ಉಂಟಾಗಿದ್ದು, ಜೆಡಿಎಸ್ v/s ಬಿಜೆಪಿ ಫೈಟ್ ಶುರುವಾದಂತ್ತಾಗಿದೆ.