ಮಂಡ್ಯ: ಭಕ್ತನ ಸೋಗಿನಲ್ಲಿ ದೇವಾಲಯದಲ್ಲಿ ಕಳ್ಳತನ; ಯಲ್ಲಮ್ಮ ತಾಯಿಯ ತಾಳಿ ಕದ್ದು ಪರಾರಿ | Man theft goddess gold chain in renuka yellamma temple at mandya

ಮಂಡ್ಯ: ಭಕ್ತನ ಸೋಗಿನಲ್ಲಿ ದೇವಾಲಯದಲ್ಲಿ ಕಳ್ಳತನ; ಯಲ್ಲಮ್ಮ ತಾಯಿಯ ತಾಳಿ ಕದ್ದು ಪರಾರಿ

ಗರ್ಭಗುಡಿಗೆ ನುಗ್ಗಿ ಚಿನ್ನದ ತಾಳಿ ಕಿತ್ತುಕೊಂಡು ಪರಾರಿ

ಮಂಡ್ಯ: ಭಕ್ತನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ದೇವಿಯ ತಾಳಿ ಕದ್ದು ಪರಾರಿಯಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ತಾಯಿ ದೇವಾಲಯದಲ್ಲಿ ನಡೆದಿದೆ. 6 ಗ್ರಾಂ ಚಿನ್ನದ ತಾಳಿ ಕಿತ್ತುಕೊಂಡು ಕಳ್ಳ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಭಕ್ತನಂತೆ ಬಂದು ದೇವಿಗೆ ಕೈಮುಗಿದು ಬಳಿಕ ಕೃತ್ಯ ಎಸಗಿದ್ದಾನೆ. ಅರ್ಚಕರು ದೇವಾಲಯದಿಂದ ಹೊರದೋಗುತ್ತಿದ್ದಂತೆ ಕಳ್ಳ ತನ್ನ ಕೈಚಳ ತೋರಿದ್ದು, ಗರ್ಭಗುಡಿಗೆ ನುಗ್ಗಿ ದೇವಿ ವಿಗ್ರಹದಲ್ಲಿದ್ದ ತಾಳಿ ಕಿತ್ತು ಪರಾರಿಯಾಗಿದ್ದಾನೆ.

ಕಳ್ಳ ದೇವಿಗೆ ಕೈಮುಗಿದು, ಬಳಿಕ ಗರ್ಭಗುಡಿಗೆ ನುಗ್ಗಿ ಚಿನ್ನದ ತಾಳಿ ಕಿತ್ತುಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಮನೆ ಮನೆ ಸುತ್ತಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; ಬಂಧಿತನಿಂದ 20 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ

ಎನ್​ಆರ್​ಐ ಲೇಔಟ್​ನ​ ಮನೆಯಲ್ಲಿ ಕಳ್ಳತನ; 40 ಗ್ರಾಂ ಚಿನ್ನ, 4 ಸಾವಿರ ಹಣ ಕಳವು

TV9 Kannada

Leave a comment

Your email address will not be published. Required fields are marked *