ಮಂಡ್ಯ: ಭೋರ್ಗರೆಯುತ್ತ ಹಾಲ್ನೋರೆಯಂತೆ ಧುಮ್ಮಿಕ್ಕುತ್ತಿದೆ ಬೆಂಕಿ ಫಾಲ್ಸ್! | Due to heavy rain in Mandya; The fire falls like a roaring fire!ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀರಂಗಪಟ್ಟಣದ ಧಾರ್ಮಿಕ ಸ್ಥಳವಾಗಿರುವ ಗೋಸಾಯಿ ಘಾಟ್​ ಮುಳುಗಡೆ ಹಂತ ತಲುಪಿದೆ.

TV9kannada Web Team


| Edited By: ಗಂಗಾಧರ್​ ಬ. ಸಾಬೋಜಿ

Aug 05, 2022 | 11:47 AM
ಮಂಡ್ಯ: ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಹಿನ್ನೆಲೆ ಗಾಣಾಳು ಫಾಲ್ಸ್​​ನಲ್ಲಿ ಜಲ ವೈಭವ ಕಂಡುಬಂತು. ನದಿಯಲ್ಲಿ ನೀರು ಹೆಚ್ಚಾಗಿರೋದ್ರಿಂದ ಗಾಣಾಳು ಫಾಲ್ಸ್ ಕಳೆಗಟ್ಟಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್. ಶಿಂಷಾ ನದಿಯಲ್ಲಿ ನೀರು ಹೆಚ್ಚಾದ್ರೆ ಮಾತ್ರ ಗಾಣಾಳು ಫಾಲ್ಸ್ ಕಳೆಗಟ್ಟುತ್ತದೆ. ಈ ಗಾಣಾಳು ಫಾಲ್ಸ್ ಬೆಂಕಿ ಫಾಲ್ಸ್ ಎಂದೇ ಪ್ರಸಿದ್ದಿಯಾಗಿದೆ. ಮಣ್ಣು ಮಿಶ್ರಿತ ನೀರು ಬರೋದ್ರಿಂದ ಬೆಂಕಿ ಫಾಲ್ಸ್ ಎಂದು ಫೇಮಸ್ ಆಗಿದೆ. ಭೋರ್ಗರೆಯುತ್ತ ಹಾಲ್ನೋರೆಯಂತೆ ಧುಮ್ಮಿಕ್ಕಿರುವ ಬೆಂಕಿ ಫಾಲ್ಸ್​​ ಸೌಂದರ್ಯ ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇನ್ನೂ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀರಂಗಪಟ್ಟಣದ ಧಾರ್ಮಿಕ ಸ್ಥಳವಾಗಿರುವ ಗೋಸಾಯಿ ಘಾಟ್​ ಮುಳುಗಡೆ ಹಂತ ತಲುಪಿದೆ.

TV9 Kannada


Leave a Reply

Your email address will not be published. Required fields are marked *