ಮಂಡ್ಯ ವಿಧಾನ ಪರಿಷತ್ ಚುನಾವಣೆಗೆ ಅಚ್ಚರಿ ‘ಕೈ’ ಅಭ್ಯರ್ಥಿ; ಕಾಂಗ್ರೆಸ್​​​​ನಿಂದ ಹೊಸ ಸಂದೇಶ ರವಾನೆ

ಮಂಡ್ಯ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಮಂಡ್ಯ ವಿಧಾನ ಪರಿಷತ್ ಸ್ಥಾನಕ್ಕೆ ಅಚ್ಚರಿ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಹೊಸ ಸಂದೇಶ ರವಾನೆ ಮಾಡಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾ ಬೆಂಬಲಿಗರಾದ ದಿನೇಶ್ ಗೂಳಿಗೌಡ ಅವರಿಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಘೋಷಿಸಲಾಗಿದೆ. ರಾಜ್ಯ ಕಾಂಗ್ರೆಸ್ ಹಲವು ನಾಯಕರ ಬೆಂಬಲದೊಂದಿಗೆ ಪರಿಷತ್ ಟಿಕೆಟ್ ಗೂಳಿಗೌಡ ಅವರಿಗೆ ನೀಡಲಾಗಿದೆ ಎನ್ನಲಾಗಿದ್ದು, ಪಕ್ಷದ ಸರ್ವ ಸಮ್ಮತ, ಒಮ್ಮತ ಅಭ್ಯರ್ಥಿಯಾಗಿ ಮಾಡಿದ್ದು, ಆ ಮೂಲಕ ರಾಜ್ಯ ಕಾಂಗ್ರೆಸ್ ಹೊಸ ಸಂದೇಶ ನೀಡಿದೆ.

ರಾಜ್ಯ ಕಾಂಗ್ರೆಸ್​ ಸಂದೇಶ..

  1. ಬಿಜೆಪಿ ಅಷ್ಟೇ ಪಕ್ಷದ ಕಛೇರಿಯಲ್ಲಿ ಕೆಲಸ ಮಾಡಿದವರಿಗೆ ಮಣೆ ಹಾಕಲ್ಲ
  2. ಕಾಂಗ್ರೆಸ್ ಕೂಡ ಸಾಮಾನ್ಯ ಕಾರ್ಯಕರ್ತರಿಗೂ ಮನ್ನಣೆ ನೀಡುತ್ತೆ
  3. ಹಲವು ವರ್ಷಗಳಿಂದ ಪಕ್ಷದ ಪರ ದುಡಿದವರಿಗೆ ಕಾಂಗ್ರೆಸ್ ಸೂಕ್ತ ಮನ್ನಣೆ ನೀಡಲಿದೆ
  4. ಯಾವುದೇ ಲಾಬಿಗಳಿಗೆ ಮಣೆ ಹಾಕಲ್ಲ
  5. ರಾಜಕೀಯ ಪ್ರಭಾವ, ಶಿಫಾರಸುಗಳಿಗೆ ಕಾಂಗ್ರೆಸ್ ನಲ್ಲಿ ಮನ್ನಣೆ ನೀಡಲ್ಲ
  6. ಪಕ್ಷಕ್ಕಾಗಿ ದುಡಿದವರಿಗೆ ಎಂದೂ ಕೂಡ ಕಾಂಗ್ರೆಸ್ ಕೈ ಬಿಡಲ್ಲ
  7. ಪಕ್ಷ ನಿಷ್ಠ, ಹೊಸ ಮುಖಗಳಿಗೂ ಪಕ್ಷ ಟಿಕೆಟ್ ನೀಡಲಿದೆ

ಅಂದಹಾಗೇ ದಿನೇಶ್ ಗೂಳಿಗೌಡ ಅವರು 15 ವರ್ಷಗಳಿಂದ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು. ಅಲ್ಲದೇ ಬಳ್ಳಾರಿ ಪಾದಯಾತ್ರೆಯ ಯಶಸ್ವಿಯಲ್ಲಿ ಪ್ರಚಾರದ ಹೊಣೆ ಹೊತ್ತಿದ್ದರು. ಆ ಸಂದರ್ಭದಲ್ಲಿ ಬಳ್ಳಾರಿ ಪಾದಯಾತ್ರೆಯಿಂದ ಕಾಂಗ್ರೆಸ್ ಗೆ ಸಿಕ್ಕಿತ್ತು. ರಾಜ್ಯ ಕಾಂಗ್ರೆಸ್​​ನ ಎಲ್ಲಾ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ದಿನೇಶ್ ಗೂಳಿಗೌಡ ಅವರು, ಸಹಕಾರಿ ಸಚಿವರಿಗೆ OSD ಆಗಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಿ ನಂತರ ರಾಜೀನಾಮೆ ನೀಡಿದ್ದರು.

ಸದ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಸ ಮುಖಕ್ಕೆ ಆದ್ಯತೆ ನೀಡುವ ಮೂಲಕ ವಿಧಾನ ಸಭಾ ಚುನಾವಣೆಯಲ್ಲೂ ಹೊಸ ಮುಖಗಳಿಗೆ ಆದ್ಯತೆ ಸಿಗಲಿದೆ ಎಂಬ ಸಂದೇಶವನ್ನು ಪಕ್ಷದಲ್ಲಿ ರವಾನಿಸಿದೆ. ಅಲ್ಲದೇ ಕೇವಲ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿ, ಪಕ್ಷದ ಹಿರಿಯ ಕಾರ್ಯಕರ್ತರು, ಡಾ. ಜಿ. ಪರಮೆಶ್ವರ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ಜೊತೆ ಕೆಲಸ ಮಾಡಿದ ಅನುಭವಿಗೆ ಮಣೆ ಹಾಕಲು ಮುಂದಾಗಿದೆ.

ಗೌಡರ ಕುಟುಂಬ ರಾಜಕಾರಣಕ್ಕೆ ಪೆಟ್ಟು..
ಮಂಡ್ಯದ ಜೆಡಿಎಸ್​​ ಪ್ರಾಬಲ್ಯದ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದ ದಿನೇಶ್ ಗೂಳಿಗೌಡ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್​ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಪೆಟ್ಟು ಕೊಡುವ ತಂತ್ರಗಾರಿಕೆಯನ್ನು ಪ್ರದರ್ಶನ ಮಾಡಿದೆ. ಅಲ್ಲದೇ ಹಾಸನದಲ್ಲಿ ಸೂರಜ್ ರೇವಣ್ಣಗೆ ಟಿಕೆಟ್ ನೀಡಿರೋ ಕಾರಣ ಜೆಡಿಎಸ್​ ಕುಟುಂಬ ರಾಜಕಾರಣಕ್ಕೆ ಮನ್ನಣೆ ಎಂಬ ಸಂದೇಶವನ್ನ ಕ್ಷೇತ್ರದಲ್ಲಿ ರವಾನಿಸಿದೆ.

News First Live Kannada

Leave a comment

Your email address will not be published. Required fields are marked *