ಮಂತ್ರಾಲಯದಲ್ಲಿ ಸರಳವಾಗಿ ನೆರವೇರಿದ ಆರಾಧನಾ ಮಹೋತ್ಸವ

ಮಂತ್ರಾಲಯದಲ್ಲಿ ಸರಳವಾಗಿ ನೆರವೇರಿದ ಆರಾಧನಾ ಮಹೋತ್ಸವ

ರಾಯಚೂರು: ಮಂತ್ರಾಲಯ ಮಠದಲ್ಲಿ ಇಂದು ವಾದೀಂದ್ರ ತೀರ್ಥರ ಆರಾಧನಾ ಮಹೋತ್ಸವ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಶ್ರೀ ಮಠದಲ್ಲಿನ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಪಂಚಾಮೃತ ಅಭಿಷೇಕ ನಡೆದಿದೆ.

ಆ ಬಳಿಕ ಶ್ರೀಮಠದ ಪ್ರಾಂಗಣದಲ್ಲಿ ರಥೋತ್ಸವ ಕಾರ್ಯಕ್ರಮ ನೆರವೇರಿತು. ರಥೋತ್ಸವದಲ್ಲಿ ಕೇವಲ ಶ್ರೀಮಠದ ಸಿಬ್ಬಂದಿ ಮಾತ್ರ ಭಾಗಿಯಾಗಿದ್ದರು. ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಈ ಬಾರಿಯ ಆರಾಧನಾ ಮಹೋತ್ಸವ ತುಂಬಾ ಸರಳವಾಗಿ ನೆರವೇರಿತ್ತಿದೆ.

The post ಮಂತ್ರಾಲಯದಲ್ಲಿ ಸರಳವಾಗಿ ನೆರವೇರಿದ ಆರಾಧನಾ ಮಹೋತ್ಸವ appeared first on News First Kannada.

Source: newsfirstlive.com

Source link