ಬೆಂಕಿ ಹೊತ್ತಿಕೊಂಡಿದ್ದ ಅಪಾರ್ಟ್‍ವೊಂದರಲ್ಲಿ ಸಿಲುಕಿದ್ದ ಮಕ್ಕಳನ್ನು ರಷ್ಯಾದ ಮೂವರು ವ್ಯಕ್ತಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೊಸ್ಟ್ರೋಮಾದಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಿಲುಕಿಕೊಂಡಿದ್ದ ಮಕ್ಕಳನ್ನು ಕಟ್ಟಡದ ಹೊರಗೆ ಇದ್ದ ಪೈಪ್ ಏರಿ ಮೂವರು ವ್ಯಕ್ತಿಗಳು ರಕ್ಷಿಸಿದ್ದಾರೆ. ಅಲ್ಲದೇ ಈ ಘಟನೆ ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ಅಲ್ಲಿನ ಸ್ಥಳೀಯರು ಬಾಗಿಲನ್ನು ಒಡೆದು ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಮದುವೆ ಸ್ಕ್ವಾಡ್ ಕನ್ನಡದಲ್ಲೇ ಬರೆದು, ಕಲರ್‍ಫುಲ್ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

ಆದರೆ ಅದರು ಸಾಧ್ಯವಾಗದೇ ಇದ್ದಾಗ ಕಟ್ಟಡದ ಹೊರಗಿದ್ದ ಡ್ರೈನ್ ಪೈಪ್‍ಗಳನ್ನು ಮೂವರು ವ್ಯಕ್ತಿಗಳು ಒಬ್ಬರ ನಂತರ ಒಬ್ಬರು ಹತ್ತಿ, ಕಿಟಕಿ ಮೂಲಕ ಒಬ್ಬರ ನಂತರ ಒಬ್ಬರಂತೆ ಮಕ್ಕಳನ್ನು ಪಾಸ್ ಮಾಡುತ್ತಾರೆ. ಇತ್ತ ಕೆಳಗಡೆ ನಿಂತಿದ್ದ ಮಹಿಳೆಯರು ಮಕ್ಕಳನ್ನು ಇಳಿಸಿಕೊಂಡಿದ್ದಾರೆ. ಘಟನೆ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಶೇ.3.05ಕ್ಕೆ ಇಳಿಕೆ

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗತ್ತಿದ್ದು, ಮಕ್ಕಳನ್ನು ರಕ್ಷಿಸಲು ಹರಸಹಾಸ ಪಟ್ಟ ಮೂವರು ವ್ಯಕ್ತಿಗಳ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

The post ಮಕ್ಕಳನ್ನು ರಕ್ಷಿಸಲು ಕಟ್ಟಡವೇರಿದ ವ್ಯಕ್ತಿಗಳ ಧೈರ್ಯಕ್ಕೆ ನೆಟ್ಟಿಗರ ಮೆಚ್ಚುಗೆ appeared first on Public TV.

Source: publictv.in

Source link