ಮಕ್ಕಳನ್ನ ಮರಕ್ಕೆ ಕಟ್ಟಿ ಸಿಗರೇಟ್​ ಸೇದುವಂತೆ ಹಿಂಸೆ

ಬೆಂಗಳೂರು: ನಗರದ ಕೆಆರ್ ಪುರದಲ್ಲಿ ಯುವಕರ ತಂಡವೊಂದು ಕೌರ್ಯ ಮೆರೆದಿದ್ದು ಗಾಂಜಾ ಮತ್ತಲ್ಲಿ ಚಿಕ್ಕ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಸಿಗರೇಟ್ ಸೇದುವಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೆ.ಆರ್. ಪುರದ ದೇವಸಂದ್ರ ವಾರ್ಡ್ ನಲ್ಲಿ ಈ ಘಟನೆ ಸಂಭವಿಸಿದ್ದು ಸರ್ಕಾರಿ ಶಾಲಾ ಆವರಣದಲ್ಲಿ ಗಾಂಜಾ ಸೇವನೆ ಮಾಡಿರೋ ಯುವಕರು ಮಕ್ಕಳಿಗೆ ಸಿಗರೇಟ್ ಸೇದುವಂತೆ ಬೆದರಿಕೆ ಹಾಕಿ ಸಿಗರೇಟ್​ ಸೇದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣ ಕುರಿತು ಹಲ್ಲೆಗೊಳಗಾದ ಮಕ್ಕಳ ಪೋಷಕರು ಪ್ರತಿಕ್ರಿಯಿಸಿದ್ದು ಪುಂಡ ಯುವಕರು ಸಿಗರೇಟ್ ಸೇದುವಾಗ ಅಥವಾ ಕುಡಿಯುವಾಗ ನಮ್ಮ ಮಕ್ಕಳನ್ನು ಗ್ಲಾಸ್ ತರಲು, ಅವರ ಕೆಲಸ ಮಾಡಲು ಬಳಸಿಕೊಳುತ್ತಾರೆ. ಜೊತೆಗೆ ಮನೆ ಬಳಿ ಬಂದು ಕೆಲ ಹುಡುಗರು ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಹೋಗ್ಲಿಲ್ಲ ಅಂದ್ರೆ ಸ್ಕೂಲ್ ಬಳಿ ಹೋಗಿ ನಮ್ಮ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾರೆ. ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಅಪಘಾತದಲ್ಲಿ ಸಹಾಯಕ್ಕಾಗಿ ಮಹಿಳೆ ಮನವಿ, ಮಾನವೀಯತೆ ಮರೆತ ಜನ -ಸ್ಥಳದಲ್ಲೇ ಹೋಯ್ತು 2 ಜೀವ

ಗಾಂಜಾ ಮತ್ತಲ್ಲಿ ಮಕ್ಕಳ ಮೇಲೆ ಕ್ರೂರಿ ಕೃತ್ಯ.
ಮಕ್ಕಳಿಗೆ ಟಾರ್ಚರ್ ಮಾಡಿರೋ ವಿಡಿಯೋ ಮಾಡಿ ಕುಚೇಷ್ಟೆ ಮೆರೆದ ಪುಂಡರು ಸತತ ಒಂದು ಗಂಟೆಗೂ ಅಧಿಕ ಕಾಲ ಟಾರ್ಚರ್​ ನೀಡಿ ವಿಡಿಯೋ ಸೆರೆ ಹಿಡಿದಿದ್ದಾರೆ. ಆ ಬಳಿಕ ಮರಕ್ಕೆ ಕಟ್ಟಿ ಹಾಕಿ ಬೀಡಿ ಸೇದುವಂತೆ ಟಾರ್ಚರ್ ಮಾಡಿದ್ದು ಮಕ್ಕಳ ಕಣ್ಣೀರ ಜೊತೆ ಗೋಳಾಡಿದ್ದಾರೆ. ವಿಷಯ ತಿಳಿದ ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್ ಘಟನೆ ಕುರಿತು ಮಹದೇವಪುರ ಪೊಲೀಸರಿಗೆ ಮಾಹಿತಿ ನೀಡಿದ್ದು ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

News First Live Kannada

Leave a comment

Your email address will not be published. Required fields are marked *