ಬೆಂಗಳೂರು: ಕೊರೊನಾ ಎಷ್ಟು ಅಪಾಯಕಾರಿ ಅನ್ನೋದು ಈಗಾಗ್ಲೇ ಇಡೀ ಜಗತ್ತಿಗೇ ಗೊತ್ತಾಗಿದೆ. ಅದರಲ್ಲೂ ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚು ಮಧ್ಯವಯಸ್ಸಿನವರನ್ನೇ ಕಿತ್ತು ತಿಂದಿರೋ ಈ ಕೊರೊನಾ, ಮಕ್ಕಳಲ್ಲೂ ಕಂಡು ಬಂದಿತ್ತು. ಇದೀಗ, ಈ ಕೊವಿಡ್-19 ಮಕ್ಕಳಲ್ಲಿ 2 ರೀತಿಯಲ್ಲಿ ಕಂಡುಬಂದಿದೆ ಅನ್ನೋದು ವರದಿಯಾಗಿದೆ.

ಮೊದಲನೆಯದು ನ್ಯುಮೋನಿಯಾ ತರಹದ ರೋಗಲಕ್ಷಣಗಳ ವರದಿಯಾಗಿವೆ. ಎರಡನೆಯದಾಗಿ, ಇತ್ತೀಚೆಗೆ C0VID19ನಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಕಂಡುಬರುವ, ಬಹು ಉರಿಯೂತದ ಸಿಂಡ್ರೋಮ್‌ನ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ ಅಂತ
ಡಾ.ವಿ.ಕೆ.ಪಾಲ್ ನೀತಿ ಆಯೋಗದ ಸದಸ್ಯ ಹೇಳಿದ್ದಾರೆ. ಅಲ್ಲದೇ, ಮಕ್ಕಳ ವಿಚಾರದಲ್ಲಿ ಒಬ್ಬರಿಂದ ಇನ್ನೊಬ್ಬರಲ್ಲಿ ಲಕ್ಷಣ ಬದಲಾಗಿರಬಹುದು. ಮಕ್ಕಳ ಮೇಲೆ ಮುಂದಿನ ದಿನಗಳಲ್ಲಿ ಕೊರೊನಾ ಹೆಚ್ಚಿನ ರೀತಿಯಲ್ಲಿ ಪರಿಣಾಮ ಬೀರಬಹುದು. ಸದ್ಯ ರೋಗದಲ್ಲಿರೋ ಕಡಿಮೆ ಸಂಖ್ಯೆ ಮಕ್ಕಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಈ ಬಗ್ಗೆ ಅಂಕಿ ಅಂಶದಿಂದ ಗೊತ್ತಾಗುತ್ತಿದೆ ಅನ್ನೋದನ್ನ ಹೇಳಿದ್ದಾರೆ.

ಈ ಹಿನ್ನಲೆ ನಾವು ಸನ್ನದ್ಧತೆಯನ್ನು ಹೆಚ್ಚಿಸುತ್ತಿದ್ದೇವೆ. ಕೋವಿಡ್ ಸೋಂಕು ಮಕ್ಕಳಲ್ಲಿ ಕಾಣಿಸಿಕೊಳ್ಳುವ ವಿಚಾರವಾಗಿ ಹೆಚ್ಚು ನಿಗಾವಹಿಸಲಾಗಿದೆ. ಹೆಚ್ಚಿನ ಮಕ್ಕಳಲ್ಲಿ ಲಕ್ಷಣ ರಹಿತ ಸೋಂಕು ಕಾಣಿಸುತ್ತಿದೆ. ಬಹಳಷ್ಟು ಮಂದಿ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಾಣುತ್ತಿಲ್ಲ. ಸದ್ಯದ ಮಟ್ಟಿಗೆ ಮಕ್ಕಳ ಮೇಲೆ ಸೋಂಕು ಅಷ್ಟು ಪರಿಣಾಮ ಬೀರುತ್ತಿಲ್ಲ ಅಂತ ಡಾ.ವಿ.ಕೆ.ಪೌಲ್ ಹೇಳಿದ್ದಾರೆ.

The post ಮಕ್ಕಳಲ್ಲಿ ಎರಡು ರೀತಿಯ ಕೋವಿಡ್​ 19 ಲಕ್ಷಣಗಳು ಕಂಡು ಬಂದಿವೆ: ನೀತಿ ಆಯೋಗ​ appeared first on News First Kannada.

Source: newsfirstlive.com

Source link