ಕೊವ್ಯಾಕ್ಸಿನ್ ಬೆನ್ನಲ್ಲೇ ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್ ಡಿ ಲಸಿಕೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆರಂಭಿಕವಾಗಿ ದೇಶದ 7 ರಾಜ್ಯಗಳಲ್ಲಿ ಜೈಕೋವ್ ಡಿ ಲಸಿಕೆ ಬಳಕೆಗೆ ಕೇಂದ್ರ ಪರ್ಮೀಷನ್ ಕೊಟ್ಟಿದೆ. ಬಿಹಾರ್, ಜಾರ್ಖಂಡ್, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಈ ವ್ಯಾಕ್ಸಿನ್ ಪ್ರಾಯೋಗಿಕವಾಗಿ ಬಳಸಲಾಗುವುದು ಎಂದು ತಿಳಿದು ಬಂದಿದೆ.
ಜೈಕೋವ್ ಡಿ ಲಸಿಕೆ ವಿಶೇಷತೆಯೇನು?
- ಸೂಜಿಯೇ ಇಲ್ಲದ ವ್ಯಾಕ್ಸೀನ್
- 12-17 ವರ್ಷದ ಒಳಗಿನ ಮಕ್ಕಳಿಗೆ ವ್ಯಾಕ್ಸೀನ್
- 1 ಕೋಟಿ ಡೋಸ್ ವ್ಯಾಕ್ಸೀನ್ ಖರೀದಿ
- ಪ್ರತಿ ವ್ಯಾಕ್ಸೀನ್ ಡೋಸ್ಗೆ 265 ರೂಪಾಯಿ ನಗದಿ
- ಪ್ರಾಯೋಗಿಕವಾಗಿ 7 ರಾಜ್ಯಗಳಲ್ಲಿ ಅನುಮತಿ
- ಕೊರೋನಾದ ಮೊದಲ ಡಿಎನ್ಎ ವ್ಯಾಕ್ಸಿನ್
- ಗುಜರಾತ್ನ ಜೈಡಸ್ ಕ್ಯಾಡಿಲಾ ಕಂಪನಿಯಿಂದ ತಯಾರಾದ ಲಸಿಕೆ
- ಭಾರತದ ಎರಡನೇ ಸ್ವದೇಶಿ ವ್ಯಾಕ್ಸೀನ್