ಬೆಂಗಳೂರು: ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದ್ದು ಮಕ್ಕಳನ್ನ ಇದರಿಂದ ಮಕ್ಕಳನ್ನು ರಕ್ಷಿಸಲು ಓರಲ್​ ಪೋಲಿಯೋ ವ್ಯಾಕ್ಸಿನ್​ ಸಹಕಾರಿಯಾಗಲಿದೆ ಎಂದ ತಜ್ಞ ವೈದ್ಯ ಡಾ.ವಿಶಾಲ್​ ರಾವ್​ ಹೇಳಿದ್ದಾರೆ.

ಹೆಚ್​ಸಿಜಿ ಆಸ್ಪತ್ರೆ ವತಿಯಿಂದ ಅಧ್ಯಯನ

ಓರಲ್​ ಪೋಲಿಯೋ ವ್ಯಾಕ್ಸಿನ್​ಗೂ ಹಾಗೂ ಕೋವಿಡ್​ಗೂ ಹೇಗೆ ಸಂಬಂಧ ಎಂಬ ಬಗ್ಗೆ ಈಗಾಗಲೇ ಅಧ್ಯಯನ ನಡೆಸಿ Indian Journal of Medical Sciences ನಲ್ಲಿ ಡಾ.ವಿಶಾಲ್​ ರಾವ್​ ಪ್ರಕಟಿಸಿದ್ದಾರೆ. ಪೋಲಿಯೋ ಹಾಗೂ ಕೊರೊನಾ ಎರಡೂ ಸಹ RNA ವೈರಸ್​ ಆಗಿದ್ದು, ಸದ್ಯದ ಮಟ್ಟಿಗೆ ಮಕ್ಕಳ ಹಿತದೃಷ್ಠಿಯಿಂದ ಪೋಲಿಯೋ ಲಸಿಕೆ ಸಹಕಾರಿಯಾಗಲಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾ ಲಸಿಕೆ ಇಲ್ಲ, ಈ ಹಿನ್ನೆಲೆ ಸಿಂಪಲ್​ ವ್ಯಾಕ್ಸಿನ್​ ಆಗಿರುವ ಓರಲ್​ ಪೋಲಿಯೋ ವ್ಯಾಕ್ಸಿನ್​ ಮೊರೆ ಹೋಗಬಹುದು ಎಂದು ವಿಶಾಲ್​ ರಾವ್​ ಹೇಳಿದ್ದಾರೆ.

ವಿಶೇಷ ಅನುಮತಿ ಹಾಗೂ ಕ್ಲಿನಿಕಲ್​ ಟ್ರಯಲ್​ ಅವಶ್ಯಕತೆ ಇದೆ

ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದು, ವಿಶೇಷ ಅನುಮತಿ ಹಾಗೂ ಕ್ಲಿನಿಕಲ್​ ಟ್ರಯಲ್​ ಅವಶ್ಯಕತೆ ಇದೆ. ಓರಲ್​ ಪೋಲಿಯೋ ವ್ಯಾಕ್ಸಿನ್​ ಬಹು ಸಿಂಪಲ್​ ಆಗಿದ್ದು, ಜನರಿಗೆ ಸುಲಭವಾಗಿ ತಲುಪಲು ಸಹಕಾರಿಯಾಗಿದೆ. ಈ ಪೋಲಿಯೋ ಲಸಿಕೆಯಿಂದಾಗಿ ದೇಹದ ಇಮ್ಯೂನ್​ ಸಿಸ್ಟಮ್​ಗೆ ಸ್ವಲ್ಪ ಪ್ರೋತ್ಸಾಹ ನೀಡಿದಂತಾಗುತ್ತದೆ. ವೈರಸ್​ ಅಟ್ಯಾಕ್​ ಆದ್ರೂ ಕೂಡ ಅದನ್ನ ತಡೆ ಹಿಡಿಯೋಕೆ ಇದು ಸಹಕಾರಿ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿಕಲ್​ ಟ್ರಯಲ್​ ಮೂಲಕ ಪ್ರೂವ್​ ಮಾಡಲು ವಿಶಾಲ್​ರಾವ್​ ಚಿಂತನೆ

ಸದ್ಯ 18 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಲಸಿಕೆ ಇರದ ಹಿನ್ನೆಲೆ, ಪೋಲಿಯೋ ಲಸಿಕೆ ಬಳಸುವ ಬಗ್ಗೆ ಅನುಮತಿ ದೊರೆತರೆ ಸಂಶೋಧನೆ ಮಾಡಬಹುದು. ಸದ್ಯ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಲು ಸಿದ್ಧತೆ ನಡೆಸಿದ್ದು, ಕ್ಲಿನಿಕಲ್​ ಟ್ರಯಲ್​ ಮೂಲಕ ಇದನ್ನು ಪ್ರೂವ್​ ಮಾಡಲು ವಿಶಾಲ್​ರಾವ್​ ಚಿಂತನೆ ನಡೆಸಿದ್ದಾರೆ.​

ಓರಲ್​ ಪೋಲಿಯೋ ವ್ಯಾಕ್ಸಿನ್​ ನಮ್ಮ ಭಾರತವೇ ಇಡೀ ವಿಶ್ವಕ್ಕೆ ಮಾದರಿಯಾಗಿ ತೋರಿಸಿದ ಲಸಿಕೆ. ಪೋಲಿಯೋ ಲಸಿಕೆಯ ಎರಡು ಡ್ರಾಪ್​ ಬಾಯಿಗೆ ಹಾಕುವುದರಿಂದ ಬಾಡಿ ಇಮ್ಯೂನ್​ಗಳು ಆ್ಯಕ್ಟೀವ್​ ಆಗುತ್ತವೆ. ಪೋಲಿಯೋ ವೈರಸ್​ ಬೇರೆ, ಕೋವಿಡ್​ ವೈರಸ್​ ಬೇರೆ, ಹೀಗಿದ್ರೂ ಸಹ ಒಂದು ಹಂತದವರೆಗೆ ಮಕ್ಕಳಿಗೆ ಕೋವಿಡ್​ನಿಂದ ರಕ್ಷಣೆ ನೀಡಲು ಓರಲ್​ ಪೋಲಿಯೋ ಲಸಿಕೆ ಸಹಕಾರಿ ಎನ್ನಲಾಗಿದೆ.

ಕಳೆದ ಹಾಗೂ ಈ ವರ್ಷದಲ್ಲಿ 1 ರಿಂದ 5 ವರ್ಷದ ಮಕ್ಕಳು ಯಾರೂ ಪೋಲಿಯೋ ಲಸಿಕೆ ಪಡೆದಿದ್ದಾರೋ, ಅವರಿಗೆ ಎಷ್ಟರ ಮಟ್ಟಿಗೆ ಕೊರೊನಾ ಬಂದಿದೆ ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇದರಿಂದಾಗಿ, ಪೋಲಿಯೋ ಲಸಿಕೆ ಎಷ್ಟರ ಮಟ್ಟಿಗೆ ಕೊರೊನಾ ನಿಯಂತ್ರಿಸಬಲ್ಲದು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಸಿಗಲಿದೆ. ಅಮೆರಿಕದ ಖ್ಯಾತ ವಿಜ್ಞಾನಿ ರಾಬರ್ಟ್​ ಗ್ಯಾಲೋ ಕೂಡ ಓರಲ್​ ಪೋಲಿಯೋ ವ್ಯಾಕ್ಸಿನ್​, ಕೋವಿಡ್​ನ್ನು ತಡೆ ಹಿಡಿಯುವ ಸಾಮಥ್ರ್ಯ ಹೊಂದಿದೆ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ.

The post ಮಕ್ಕಳಿಗೆ ಕೊರೊನಾ ಬಾರದಂತೆ ತಡೆಯುತ್ತಾ ಪೋಲಿಯೋ ಲಸಿಕೆ.? ತಜ್ಞ ವೈದ್ಯರು ಹೇಳಿದ್ದೇನು..? appeared first on News First Kannada.

Source: newsfirstlive.com

Source link