ಯಾದಗಿರಿ: ನನ್ನ ಮಕ್ಕಳೇ ನನ್ನ ನೋಡಾಕ ಬಂದಿಲ್ಲ.. ನೀ ನನ್ನ ನೋಡಾಕ ಬಂದೀರಿ ಅಂತ ಕೊರೊನಾ ಸೋಂಕಿತ ವೃದ್ಧೆ ಶಾಸಕ ರಾಜುಗೌಡರ ಎದುರ ತಮ್ಮ ಅಳಲನ್ನ ತೋಡಿಕೊಂಡ ಪ್ರಸಂಗ ನಡೆಯಿತು.

ಪ್ರತಿದಿನ ಸೊಂಕೀತರ ವಿಚಾರಣೆಗೆ ತೆರಳುವ ಶಾಕ ರಾಜುಗೌಡ ಇಂದು ಕೂಡ ಸುರಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಸೋಂಕಿತರ ಯೋಗಕ್ಷೇಮ ವಿಚಾರಿಸಿದ್ರು. ಈ ವೇಳೆ ಸೋಂಕಿತ ಅಜ್ಜಿಯೊಬ್ಬರನ್ನ ಶಾಸಕರು ಮಾತಾಡಿಸಿದ್ರು.

ಈ ವೇಳೆ ವೃದ್ಧೆ, ನನ್ನ ಮಕ್ಕಳೇ ನನ್ನ ನೋಡೋದಕ್ಕೆ ಬಂದಿಲ್ಲ ಅಂದಾಗ.. ಶಾಸಕ, ನಾನು ನಿನ್ನ ಮಗನೇ, ನಿನ್ನ ಮಕ್ಕಳ ಬರದಿದ್ದರೆ ಎನಾಯಿತು ನಾ ಇದ್ದೇನೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಶಾಸಕ ರಾಜುಗೌಡ ವೃದ್ಧೆಗೆ ಸಾಂತ್ವನ ಹೇಳಿದ್ರು. ಕೊರೊನಾ ವಾರ್ಡ್​ನಲ್ಲಿ ಸೋಂಕಿತರ ಸಂಬಂಧಿಕರಿಗೆ ಪ್ರವೇಶ ಇರುವುದಿಲ್ಲ. ಹೀಗಾಗಿ ವೃದ್ಧೆಯ ಸಂಬಂಧಿಕರು ಯಾರೂ ಆಸ್ಪತ್ರೆಗೆ ಬಂದಿಲ್ಲ.

The post ‘ಮಕ್ಕಳೇ ಬರಲಿಲ್ಲ, ನೀ ನನ್ನ ನೋಡಾಕ ಬಂದೀರಿ’ ಎಂದು ಶಾಸಕರ ಮುಂದೆ ಕಣ್ಣೀರಿಟ್ಟ ಸೋಂಕಿತ ವೃದ್ಧೆ appeared first on News First Kannada.

Source: newsfirstlive.com

Source link