ವೈದ್ಯರು ಹೇಳುವಂತೆ ಮಕ್ಕಳು ಹೆಚ್ಚು ಸಮಯ ನಿದ್ದೆ ಮಾಡಬೇಕು. ಆದರೆ, ಕೆಲ ಮಕ್ಕಳಲ್ಲಿ ನಿದ್ದೆ ಮಾಡುವ ಸಮಯದ ಪ್ರಮಾಣ ಕಡಿಮೆಯಾಗಿರುತ್ತದೆ. ಮಕ್ಕಳು ಆರಾಮದಾಯಕ ಹಾಗೂ ಆರೋಗ್ಯಯುತ ನಿದ್ದೆ ಮಾಡಬೇಕಾದರೆ ಏನು ಮಾಡಬೇಕು ಎನ್ನುವ ಚಿಂತೆ ಪೋಷಕರಲ್ಲಿ ಇದ್ದೇ ಇರುತ್ತದೆ.

ಪೂರ್ಣ ಪ್ರಮಾಣದಲ್ಲಿ ನಿದ್ದೆ ಮಾಡುವುದು ಎಲ್ಲ ವಯಸ್ಸಿನವರಿಗೂ ಅತ್ಯವಶ್ಯಕ.ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಪೂರ್ಣ ನಿದ್ದೆ ಬೇಕೇಬೇಕು. ಅನೇಕ ಸಂಶೋಧನೆ ಹಾಗೂ ಅಧ್ಯಯನ ಪ್ರಕಾರ ಸಂಪೂರ್ಣ ನಿದ್ದೆಯಿಂದ ಮಕ್ಕಳ ಮೆದುಳಿನ ಬೆಳವಣಿಗೆಯಾಗುತ್ತದೆ ಎಂಬ ಅಂಶ ಗೊತ್ತಾಗಿದೆ.

ನೆಮ್ಮದಿ ನಿದ್ದೆಗೆ ಈ ಆಹಾರ ಸಹಕಾರಿ :

ಮಕ್ಕಳಲ್ಲಿ ನಿದ್ದೆಯ ಪ್ರಮಾಣ ಹೆಚ್ಚಿಸುವಲ್ಲಿ ಅವರು ಸೇವಿಸುವ ಆಹಾರ ಪದ್ಧತಿ ಕೂಡ ಬಹುಮುಖ್ಯವಾಗಿರುತ್ತದೆ. ಹಾಗಾದರೆ ಮಕ್ಕಳಿಗೆ ಯಾವ ಆಹಾರ ನೀಡಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ

  1. ಬಾಳೆ ಹಣ್ಣು, ಟ್ರೈ ಫ್ರೂಟ್ಸ್ ಹಾಗೂ ಹಸಿರು ತರಕಾರಿ
  2. ಮಕ್ಕಳಲ್ಲಿ ಮಿದುಳು ಬೆಳವಣೆಗೆ ಆಗುವಲ್ಲಿ ಒಮೆಗಾ ಪ್ರಮಾಣ ಬಹುಮುಖ್ಯ ಪಾತ್ರ ನಿಭಾಯಿಸುತ್ತದೆ. ಆದ್ದರಿಂದ ಒಮೆಗಾ ಅಂಶ ಹೊಂದಿರುವ ಚಿಯಾ ಬೀಜ, ಅಗಸೆ ಬೀಜ, ಸಾಲ್ಮನ್ ಹಾಗೂ ವಾಲ್‍ನಟ್‍ ನೀಡಬೇಕು.
  3. ಓಟ್ಸ್
  4. ಮೀನು, ತರಕಾರಿ, ಹಸಿರು ಪಲ್ಯೆ  ಮಕ್ಕಳಲ್ಲಿ ನಿದ್ದೆ ಪ್ರಮಾಣವನ್ನು ಹೆಚ್ಚಿಸುತ್ತದೆ.
  5. ಚೆರ್ರಿ
  6. ಸಿಹಿ ಅಲೋಗಡ್ಡೆಈ ಮೇಲಿನ ಆಹಾರವನ್ನು ನಿಯಮಿತವಾಗಿ ಮಕ್ಕಳಿಗೆ ನೀಡುವುದರಿಂದ ಪೂರ್ಣ ಪ್ರಮಾಣದ ನಿದ್ದೆ ಸಾಧ್ಯವಾಗುತ್ತದೆ.

ಆರೋಗ್ಯ – Udayavani – ಉದಯವಾಣಿ
Read More

By

Leave a Reply