ಚಿಕ್ಕಮಗಳೂರು: ಕೊರೊನಾ ಸಾಂಕ್ರಾಮಿಕ ಹಾಗೂ ಲಾಕ್​ಡೌನ್ ಕಾರಣ ಶಾಲೆಗಳನ್ನ ಬಂದ್​ ಮಾಡಿ ವರ್ಷವೇ ಕಳೆದಿದೆ. ಮಕ್ಕಳು ಶಾಲೆಗೆ ಬಾರದೆ ಆನ್​ಲೈನ್​ನಲ್ಲೇ ಪಾಠ ಕಲಿಯುವಂತಾಗಿದೆ. ಮಕ್ಕಳು ಶಾಲೆಯನ್ನ, ತಮ್ಮ ಪ್ರೀತಿಯ ಶಿಕ್ಷಕರು ಹಾಗೂ ಸ್ನೇಹಿತರನ್ನ ಎಷ್ಟು ಮಿಸ್​ ಮಾಡ್ಕೊಳ್ತಿದ್ದಾರೋ,  ಶಿಕ್ಷಕರು ಕೂಡ ಮಕ್ಕಳನ್ನ ಅಷ್ಟೇ ಮಿಸ್​ ಮಾಡಿಕೊಳ್ತಿರೋದು ಸುಳ್ಳಲ್ಲ. ಇಂಥ ಹೊತ್ತಲ್ಲಿ ಚಿಕ್ಕಮಗಳೂರಿನಲ್ಲಿ ಶಾಲೆಯ ಸಹಶಿಕ್ಷಕಿಯೊಬ್ಬರು ಮಕ್ಕಳಿಗೆ ಪತ್ರ ಬರೆದು ಅವರ ಆರೋಗ್ಯ ವಿಚಾರಿಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಯಲಗುಡಿಗೆ‌ ಸರ್ಕಾರಿ‌ ಶಾಲೆಯ ಶಿಕ್ಷಕಿ ಈ ವಿನೂತನ ಪ್ರಯೋಗ ಮಾಡಿದ್ದಾರೆ. ಫೋನ್ ಇದ್ರೂ ಕೂಡ, ಶಿಕ್ಷಕಿ ಗೀತಾ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ ತಮ್ಮ ಕೈಬರವಣಿಗೆಯಲ್ಲೇ ಲೇಟರ್ ಬರೆದು ಮಕ್ಕಳ ವಿಳಾಸಕ್ಕೆ ಪೋಸ್ಟ್ ಮಾಡಿದ್ದಾರೆ. ಮನೆಗೆ ಲೇಟರ್ ತಲುಪುತ್ತಿದ್ದಂತೆ ಅದನ್ನ ಓದಿದ ಪುಟಾಣಿಗಳು, ಭಾಳ ಒಳ್ಳೆಯವ್ರ್​​​ ನಮ್ ಮಿಸ್ಸು… ಅಂತ ಫುಲ್ ಖುಷ್​ ಆಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್​ನಿಂದಾಗಿ ಪತ್ರ ಸಂಸ್ಕೃತಿ ನಶಿಸಿಹೋಗ್ತಿದೆ. ಹೀಗಿರುವಾಗಿ ಶಿಕ್ಷಕಿ ಪತ್ರ ಬರೆದು ಮಕ್ಕಳ ಯೋಗಕ್ಷೇಮ ವಿಚಾರಿಸಿರೋದು ಪೋಷಕರಲ್ಲೂ ಸಂತಸ ಮೂಡಿಸಿದೆ.

 

 

The post ಮಕ್ಕಳ ಆರೋಗ್ಯ ವಿಚಾರಿಸಿ ಲೆಟರ್​ ಬರೆದ್ರು ಮಿಸ್ಸು.. ಪತ್ರ ಓದಿ ಪುಟಾಣಿಗಳು ಪುಲ್ ಖುಷ್ appeared first on News First Kannada.

Source: newsfirstlive.com

Source link