ಮಕ್ಕಳ ಬಿಸಿಯೂಟದ 4.42 ಲಕ್ಷ ರೂ. ದುರುಪಯೋಗ ಆರೋಪ: ಹನಗೋಡು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅಮಾನತು | 4.42 lakhs of children’s food Allegations of abuse: Hanagodu High School Head teacher suspended


ಮಕ್ಕಳ ಬಿಸಿಯೂಟದ 4.42 ಲಕ್ಷ ರೂ. ದುರುಪಯೋಗ ಆರೋಪ: ಹನಗೋಡು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅಮಾನತು

ಮುಖ್ಯ ಶಿಕ್ಷಕಿ ಎಸ್​. ಅಂಜಲಿ ಮಾರೀಸ್

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟದಲ್ಲಿ ನಡೆದಿದೆ.

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಪ್ರೌಢಶಾಲೆ ಮಕ್ಕಳ ಬಿಸಿಯೂಟದ 4.42 ಲಕ್ಷ ರೂ. ದುರುಪಯೋಗ ಆರೋಪದಡಿ ಹನಗೋಡು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಎಸ್​. ಅಂಜಲಿ ಮಾರೀಸ್ ಅಮಾನತುಗೊಳಿಸಿ ಡಿಡಿಪಿಐ ರಾಮಚಂದ್ರರಾಜೇ ಅರಸ್​​ರಿಂದ ಆದೇಶ ಹೊರಡಿಸಲಾಗಿದೆ. ಶಿಕ್ಷಣಾಧಿಕಾರಿಗಳ ತನಿಖೆ ವೇಳೆ ಹಣ ದುರುಪಯೋಗ ಬೆಳಕಿಗೆ ಬಂದಿದ್ದು, ವಿಚಾರಣೆ ವೇಳೆ ಮುಖ್ಯಶಿಕ್ಷಕಿ ಎಸ್​.ಅಂಜಲಿ ಮಾರೀಸ್ ತಪ್ಪೊಪ್ಪಿ ಕೊಂಡಿದ್ದಾರೆ. ಹಣ ಹಿಂದಿರುಗಿಸುವುದಾಗಿ ಮುಖ್ಯಶಿಕ್ಷಕಿ ಅಂಜಲಿ ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ.

ನಕಲಿ ಕೀ ಬಳಸಿ ಬೈಕ್​ ಕಳ್ಳತನ

ಮೈಸೂರು: ನಂಜನಗೂಡು ಪೊಲೀಸರ ಕಾರ್ಯಾಚರಣೆಯಿಂದ ದ್ವಿಚಕ್ರ ವಾಹನ ಕಳ್ಳನ ಬಂಧನ ಮಾಡಿದ್ದು, 6.25 ಲಕ್ಷ ಮೌಲ್ಯದ 29 ಟಿವಿಎಸ್ ಮೊಪೆಡ್ ವಶಕ್ಕೆ ಪಡೆಯಲಾಗಿದೆ. ನಂಜನಗೂಡಿನ ಕಂದೇಗಾಲ ಗ್ರಾಮದ ಸಿದ್ದರಾಜು ಬಂಧಿತ ಆರೋಪಿ. ಟಿವಿಎಸ್ ಮೊಪೆಡ್ ವಾಹನವನ್ನೇ ಸಿದ್ದರಾಜು ಕಳ್ಳತನ ಮಾಡುತ್ತಿದ್ದ. ನಕಲಿ ಕೀ ಬಳಸಿ ಮೊಪೆಡ್​ಗಳನ್ನ ಕದ್ದು ಮಾರುತ್ತಿದ್ದ. ಗುಂಡ್ಲುಪೇಟೆ ಚಾಮರಾಜನಗರ ನಂಜನಗೂಡಿನಲ್ಲಿ ಕಳ್ಳತನ ಮಾಡುತ್ತಿದ್ದ. ಎಸ್​.ಪಿ.ಆರ್ ಚೇತನ್ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಸೆರೆಹಿಡಿಯಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಶೀಟರ್​ ಬಂಧನ

ಹುಬ್ಬಳ್ಳಿ: ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಶೀಟರ್​ ಅಲ್ತಾಫ್ ಬೇಪಾರಿಯನ್ನ ನಗರದ ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿ ಅಲ್ತಾಫ್ ಭಾಗಿಯಾಗಿದ್ದ. ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಹಿನ್ನೆಲೆ ಗೂಂಡಾ ಕಾಯ್ದೆಯಡಿ ರೌಡಿಶೀಟರ್​ ಅಲ್ತಾಫ್ ಬೇಪಾರಿ ನನ್ನು ಬಂಧಿಸಿ ಧಾರವಾಡ ಸೆಂಟ್ರಲ್​ ಜೈಲಿಗೆ ಪೊಲೀಸರು ಕಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ; ಚಾಲಕ ಸಾವು

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟದಲ್ಲಿ ನಡೆದಿದೆ. ಇಂದು ನಸುಕಿನ ವೇಳೆಯಲ್ಲಿ ಮಂಡ್ಯ ಮೈಸೂರು ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಎನ್​ಎಂಸಿ ಹೋಟೆಲ್​ನ ಬೀಗ ಮುರಿದು 2 ಮೊಬೈಲ್ ಕಳ್ಳತನ

ದಾವಣಗೆರೆ: ಎನ್​ಎಂಸಿ ಹೋಟೆಲ್​ನ ಬೀಗ ಮುರಿದು 2 ಮೊಬೈಲ್ ಕಳ್ಳತನ ಮಾಡಿರುವಂತಹ ಘಟನೆ ಜಿಲ್ಲೆಯ ಜಗಳೂರು ಪಟ್ಟಣದ ಹೋಟೆಲ್​ನಲ್ಲಿ ನಡೆದಿದೆ. ಸುಮಾರು ಒಂದು ಗಂಟೆ ಹೋಟೆಲ್​ನಲ್ಲಿ ಖದೀಮರು ತಡಕಾಡಿದ್ದು, ಹಣ ಸಿಗದಿದ್ದರಿಂದ 2 ಮೊಬೈಲ್​ ಕದ್ದು ಪರಾರಿಯಾಗಿದ್ದಾರೆ. ಹೋಟೆಲ್​ನಲ್ಲಿ ಕಳ್ಳನ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನಿವೃತ್ತ ಯೋಧ ಮೇಲೆ 10 ಜನರ ಗುಂಪಿನಿಂದ ಹಲ್ಲೆ

ಕೋಲಾರ: ಮನೆ ಬಳಿ ರಸ್ತೆ ವಿಚಾರಕ್ಕೆ ನಿವೃತ್ತ ಯೋಧ ಮೇಲೆ 10 ಜನರ ಗುಂಪಿನಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಹಳೆ ಅರಮಾಕನಹಳ್ಳಿಯಲ್ಲಿ ನಡೆದಿದೆ. ಎನ್​ಎಸ್​ಜಿಯ ನಿವೃತ್ತ ಯೋಧ ರಾಮಪ್ಪ ಹಲ್ಲೆಗೊಳಗಾದ ಯೋಧ. ಮನೆ ರಸ್ತೆ ಬಿಡುವ ವಿಚಾರಕ್ಕೆ ಹಲ್ಲೆ ಮಾಡಿದ್ದು, ಗಾಯಾಳು ರಾಮಪ್ಪಗೆ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹಲ್ಲೆ ಖಂಡಿಸಿದ್ದು, ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *