ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ನೋಡಲು ಇಂದಿಗೂ ಅಭಿಮಾನಿಗಳು, ಗಣ್ಯರು ಬರುತ್ತಲೇ ಇದ್ದರೆ. ಇವತ್ತು ನಟ ಸಾಯಿಕುಮಾರ್ ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಪ್ಪು ಸಮಾಧಿಯ ದರ್ಶನ ಪಡೆದುಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಾಯಿ ಕುಮಾರ್ ಕಂಠೀರವ ಸ್ಟುಡಿಯೋಗೆ ಬಂದು ಶೂಟಿಂಗ್ ಮಾಡ್ತಿದೀವಿ ಅನ್ನಿಸ್ತಿದೆ. ಆದರೆ ಅಪ್ಪು ಅವರನ್ನ ಕಳೆದುಕೊಂಡಿದೀನಿ ಅಂತ ನಂಬೋಕೆ ಆಗ್ತಿಲ್ಲ. ಶಿವಣ್ಣ ಜೊತೆ, ರಾಘಣ್ಣನ ಮಗನ ಜೊತೆ ನಟಿಸಿದ್ದೇನೆ. ಇನ್ನು ಅಪ್ಪು ಜೊತೆ ನಟಿಸಬೇಕು ಅಂತ ಆಸೆ ಇತ್ತು. ಅದು ಕೂಡ ಯುವರತ್ನ ಚಿತ್ರದಲ್ಲಿ ನೆರವೇರಿದೆ. ಆದ್ರೆ ಅಪ್ಪು ಇಲ್ಲ ಅನ್ನೊದನ್ನ ನಂಬೊಕೆ ಆಗ್ತಿಲ್ಲ, ಇಲ್ಲೇ ನಮ್ ಜತೆ ಇದಾರೆ ಅನ್ನೋ ಫೀಲಿಂಗ್ ಇದೆ. ನಾನು ದೇವರನ್ನು ತುಂಬ ನಂಬುತ್ತೇನೆ. ಆದ್ರೀಗ ದೇವರ ಮೇಲೆ ತುಂಬ ಕೋಪ ಬರುತ್ತಿದೆ ಅಂತಾ ಪುನೀತ್ರನ್ನು ನಟ ಸಾಯಿಕುಮಾರ್ ನೆನಪಿಕೊಂಡಿದ್ದಾರೆ.
1993ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೆ.. ರಾಜ್ಕುಮಾರ್ ಅವರ ಕುಟುಂಬದೊಂದಿಗೆ ಬಾಂಧವ್ಯವಿದ್ದರೂ ಯುವರತ್ನ ಸಿನಿಮಾದಲ್ಲಿ ಅವರೊಂದಿಗೆ ನಟಿಸೋ ಅವಕಾಶ ಸಿಕ್ತು. ಅವರನ್ನು ಹಲವು ಭಾರೀ ಭೇಟಿ ಮಾಡಿದ್ದರೂ ಕೂಡ ಅವರ ಸಮಾಜ ಕಾರ್ಯಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಕೇಳಿದ ತಕ್ಷಣ ಮಕ್ಕಳ ಭವಿಷ್ಯಕ್ಕೋಸ್ಕರ ನಾನು ಬರ್ತೀನಿ ಸರ್ ಅಂದ್ರು.. ನಮ್ಮ ಮಕ್ಕಳನ್ನು ಅವರೇ ಲಾಂಚ್ ಮಾಡಿದ್ದರು. ಪೊಲೀಸ್ ಸ್ಟೋರಿ ಜೊತೆಗೆ ರಂಗಿತರಂಗ ಸಿನಿಮಾ ಅಂದರೇ ಅವರಿಗೆ ತುಂಬಾ ಇಷ್ಟ. ಅವರಿಂದಲೇ ಪ್ರಶಸ್ತಿ ಪಡೆದು ಅವರ ಎದುರು ಬಾಬ್ರುವಾಹನ ಸಿನಿಮಾದ ಡೈಲಾಗ್ ಹೇಳಿದ್ದೆ. ಬಹಳ ಖುಷಿ ಪಟ್ಟಿದ್ದರು. ಎಲ್ಲರೂ ನಮ್ಮವರೇ ಅನ್ನೋ ಭಾವನೆ ಇದೆ. ಶೂಟಿಂಗ್ ಸಮಯದಲ್ಲಿ ಸ್ಟಾರ್ ಎಂದು ನೋಡದೆ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಇದನ್ನೇ ನನ್ನ ಮಗನಿಗೆ ತೋರಿಸಿ ಹೇಳಿದ್ದೆ. ದೊಡ್ಮೆನೆ ಕುಟುಂಬ ಆಗಿದ್ದರೂ ಕೂಡ ಎಷ್ಟು ಸರಳವಾಗಿದ್ದಾರೆ ಅಂತ ತೋರಿಸಿ ಹೇಳಿದ್ದೆ. ಆದರೆ ನಾನು ದೇವರನ್ನು ಬಹಳ ನಂಬುತ್ತೇನೆ.. ಆದರೆ ಈ ವಿಚಾರದಲ್ಲಿ ಯಾಕೆ ಈಗ ಮಾಡ್ದ ಅನ್ನೋದೆ ಗೊತ್ತಿಲ್ಲ. ಅವರ ಕುಟುಂಬಸ್ಥರಿಗೆ ದೇವರು ಧೈರ್ಯ ನೀಡಲಿ ಎಂದು ಭಾವುಕರಾಗಿ ಕಣ್ಣೀರಿಟ್ಟರು.