ನವದೆಹಲಿ: ಕೊರೊನಾದ ಎರಡನೇ ಅಲೆ ಬಹುದೊಡ್ಡ ಶಾಕ್ ನೀಡಿದ ಬಳಿಕ ವ್ಯಾಕ್ಸಿನೇಷನ್ ಸೆಂಟರ್​ಗೆ ಯುವಕರು ಮತ್ತು ವಯಸ್ಕರು ದೌಡಾಯಿಸುತ್ತಿದ್ದಾರೆ. ಇದರ ಮಧ್ಯೆ ಇಂದು ನಾವು ಮಕ್ಕಳ ಬಗ್ಗೆ ಜಾಗೃತರಾಗಿರಬೇಕು. ಯಾಕಂದ್ರೆ ಸದ್ಯ ಅವರಿಗೆ ಯಾವುದೇ ಲಸಿಕೆಗಳು ಲಭ್ಯವಿಲ್ಲ ಅಂತಾ ತಜ್ಞರು ಎಚ್ಚರಿಸಿದ್ದಾರೆ.

ಅದರಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ರೆ ಹೇಗೆ ನಿಭಾಯಿಸಬೇಕು ಅನ್ನೋದ್ರ ಬಗ್ಗೆ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಆರೋಗ್ಯ ಸಚಿವಾಲಯ ಟ್ವೀಟರ್​​​ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಕೊರೊನಾ ಸೋಂಕಿತ ಮಕ್ಕಳಲ್ಲಿ ಹೆಚ್ಚಾಗಿ ಅಸಿಮ್ಟಮ್ಯಾಟಿಕ್ ಮತ್ತು ಮೈಲ್ಡ್​ ಆಗಿ ರೋಗಲಕ್ಷಣಗಳು ಕಂಡು ಬರುತ್ತವೆ.

ಅಸಿಮ್ಟಮ್ಯಾಟಿಕ್ ಅಂದ್ರೆ ಏನು?
ಒಂದು ಮನುಷ್ಯನಿಗೆ ಕೋವಿಡ್ -19 ಬಂದಿರುತ್ತೆ. ಆದರೆ ಅವನಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಇದು 14 ದಿನಗಳವರೆಗೆ ಇರುತ್ತದೆ. ಅವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಇರೋದ್ರಿಂದ ಸೂಪರ್​ ಸ್ಪ್ರೆಡರ್​ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣಗಳು

 • ಜ್ವರ
 • ಕೆಮ್ಮು
 • ಉಸಿರಾಟದ ತೊಂದರೆ
 • ತಲೆಸುತ್ತು
 • ಗಂಟಲು ಹುಣ್ಣು
 • ರಚಿ ಕಳೆದುಕೊಳ್ಳುವುದು
 • ಮಾಂಸಖಂಡಗಳಲ್ಲಿ ನೋವು
 • ಶೀತ
 • ವಾಸನೆ ತಿಳಿಯದಿರುವುದು

ಮಕ್ಕಳನ್ನ ಹೇಗೆ ನೋಡಿಕೊಳ್ಳಬೇಕು..?
ಯಾವ ಮಕ್ಕಳಲ್ಲಿ ಅಸಿಮ್ಟಮ್ಯಾಟಿಕ್ ಲಕ್ಷಣಗಳು ಇರುತ್ತದೆಯೋ ಅವರನ್ನ ಮನೆಯಲ್ಲಿಯೇ ನೋಡಿಕೊಳ್ಳಬಹುದು. ಆರೋಗ್ಯ ಸಚಿವಾಲಯ ಹೇಳುವ ಪ್ರಕಾರ, ಱಂಡಮ್ ಕೋವಿಡ್ ಚೆಕಪ್ ಮಾಡುವಾಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತವೆ. ಮಕ್ಕಳಿರುವ ಮನೆಯಲ್ಲಿ ಯಾರಿಗಾದರೂ ಕೊರೊನಾ ಪಾಸಿಟಿವ್ ಇದ್ದರೆ ಮಕ್ಕಳಿಗೂ ಕೊರೊನಾ ಬರುವ ಸಾಧ್ಯತೆ ಇರುತ್ತದೆ. ಅಂತಹ ಮಕ್ಕಳ ಮೇಲೆ ನಿರಂತರವಾಗಿ ನಿಗಾ ಹಾಗೂ ಚಿಕಿತ್ಸೆಯ ಅಗತ್ಯ ಇರುತ್ತದೆ.

ಇಂತಹ ಸಂದರ್ಭದಲ್ಲಿ ಮಕ್ಕಳ ಗಂಟಲು ನೋವು, ಕೆಮ್ಮು ಬರಬಹುದು. ಆದರೆ ಈ ಬಗ್ಗೆ ತನಿಖೆ ಮಾಡುವ ಅಗತ್ಯತೆ ಇರಲ್ಲ. ಅಂತಹ ಮಕ್ಕಳನ್ನ ಮನೆಯಲ್ಲಿಯೇ ನೋಡಿಕೊಳ್ಳಬಹುದು ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.

ಕೊರೊನಾ ಸೋಂಕಿತ ಮಕ್ಕಳಿಗೆ ಹೇಗೆ ಟ್ರೀಟ್ಮೆಂಟ್..?

 1. ಹೋಂ ಐಸೋಲೇಷನ್
 2. ರೋಗಲಕ್ಷಣಗಳ ಮೇಲೆ ನಿಗಾ ಇಡೋದು
 3. ಸಿಮ್ಟಮ್ಯಾಟಿಕ್ ಟ್ರೀಟ್ಮೆಂಟ್

The post ಮಕ್ಕಳ ಮೇಲೆ ಕೊರೊನಾ ಸವಾರಿ; ಪೋಷಕರಿಗೆ ಗೊತ್ತಿರಬೇಕಾದ ಸಂಗತಿ ಏನು? appeared first on News First Kannada.

Source: newsfirstlive.com

Source link