ಬೆಂಗಳೂರು: ಕೊರೊನಾದ ಮೂರನೇ ಅಲೆ ಮುಂದಿನ 6 ರಿಂದ 8 ವಾರಗಳಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳಲಿದೆ ಅಂತಾ ಏಮ್ಸ್​ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಎಚ್ಚರಿಕೆಯನ್ನ ನೀಡಿದ್ದಾರೆ. ಹಿಂದಿನಿಂದಲೂ ಕೊರೊನಾದ ಮೂರನೇ ಅಲೆಯನ್ನ ಎದುರಿಸಲು ಜಾಗೃತರಾಗಬೇಕು ಅಂತಾ ತಜ್ಞರು ಸೂಚನೆ ನೀಡುತ್ತಲೇ ಬಂದಿದ್ದಾರೆ. ಸಮರ್ಥವಾಗಿ 3 ನೇ ಅಲೆ ವಿರುದ್ಧ ಹೋರಾಡಲು ತಜ್ಞರು ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಈ ಸಲಹೆಗಳನ್ನು ಚಾಚೂತಪ್ಪದೆ ಸರ್ಕಾರಗಳು ಪಾಲಿಸಿದಲ್ಲಿ 3 ನೇ ಅಲೆಯ ಹೊಡೆತದಿಂದ ಭಾಗಶಃ ಪಾರಾಗಬಹುದು ಎನ್ನಲಾಗಿದೆ.

3ನೇ ಅಲೆಗೆ ತಜ್ಞರ ಸಲಹೆಗಳು

 • ಕೊರೊನಾ ಸಂಬಂಧಿತ ವೈದ್ಯಕೀಯ ಸೇವೆಗೆ ದರ ನಿಗದಿಪಡಿಸಬೇಕು
 • ವಿಮೆಗಳಲ್ಲಿ ಚಿಕಿತ್ಸೆ ಒಳಪಡಿಸುವಂತೆ ಸ್ಪಷ್ಟ ಆದೇಶ ಹೊರಡಿಸಬೇಕು
 • ಕೋವಿಡ್​ ನಿರ್ವಹಣೆಗಾಗಿ ಅರ್ಥಪೂರ್ಣ ವಿಕೇಂದ್ರೀಕರಣ ಅವಶ್ಯಕ
 • ನಿರ್ವಹಣೆ & ಚಿಕಿತ್ಸೆಗಾಗಿ ಅದಕ್ಕೆ ತಕ್ಕಂತಹ ಸಂಪನ್ಮೂಲಗಳ ಲಭ್ಯತೆ
 • ಕೊರೊನಾ ಸಂಬಂಧಿತ ಮಾಹಿತಿ ಹಂಚಿಕೊಳ್ಳುವಾಗ ಪಾರದರ್ಶಕತೆ
 • ಆಕ್ಸಿಜನ್ ಉತ್ಪಾದನಾ ಘಟಕ , ವೈದ್ಯ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುವುದು
 • ಮಕ್ಕಳೇ ಟಾರ್ಗೆಟ್ ವರದಿ ಹಿನ್ನೆಲೆ ಪಿಡಿಯಾಟ್ರಿಕ್ ವಾರ್ಡ್​ಗಳ ಹೆಚ್ಚಿಸುವಿಕೆ
 • ಪ್ರಾಥಮಿಕ ಹಂತದಿಂದ ಉನ್ನತ ಹಂತದವರೆಗೂ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ
 • ಗ್ರಾಮ, ಜಿಲ್ಲಾ & ರಾಜ್ಯ ಮಟ್ಟದಲ್ಲಿ ಅಡಚಣೆ ಆಗದಂತೆ ಕ್ರಮಗಳ ಪಾಲನೆ
 • ಮುಂಚಿತವಾಗಿ ಔಷಧಿಗಳ ಖರೀದಿಸಿ ಅವಶ್ಯಕತೆ ಇರುವವರಿಗೆ ಲಭ್ಯ ಪಡಿಸುವಿಕೆ
 • ಸ್ಥಳೀಯವಾಗಿ ಲಸಿಕೆ ನೀಡಿಕೆ ಕಾರ್ಯವನ್ನು ತ್ವರಿತವಾಗಿ ರೂಪಿಸುವುದು
 • ಗ್ರಾಮಗಳಲ್ಲಿ ತಪ್ಪದೇ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವುದು
 • ಗ್ರಾಮೀಣ ಜನರಲ್ಲಿ ಚಿಕಿತ್ಸೆಗೆ ಮುಂಬರುವಂತಹ ವಾತಾವರಣ ಸೃಷ್ಟಿಸುವುದು
 • ಹೋಟೆಲ್​​ಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಬೇಕಾದ ಪೂರ್ವ ಸಿದ್ಧತೆ
 • ಮಕ್ಕಳಿಗಾಗಿಯೇ ವಿಶೇಷ ಐಸೋಲೇಷನ್ ಸೆಂಟರ್ ಸ್ಥಾಪಿಸುವುದು

The post ಮಕ್ಕಳ ಮೇಲೆ ಕೊರೊನಾ 3ನೇ ಅಲೆ ಸವಾರಿ.. ತಜ್ಞರ ಸಲಹೆಗಳೇನು..? appeared first on News First Kannada.

Source: newsfirstlive.com

Source link