ನವದೆಹಲಿ: 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಎರಡು ಮತ್ತು ಮೂರನೇ ಹಂತದ ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಮುಂದಿನ 10-12 ದಿನಗಳ ಒಳಗೆ ಶುರುವಾಗಲಿದೆ ಅಂತಾ ನೀತಿ ಆಯೋಗದ ಸದಸ್ಯ ಡಾ.ವಿ ಕೆ ಪೌಲ್ ಹೇಳಿದ್ದಾರೆ.

ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಪೌಲ್.. ಕೆಲವೇ ದಿನಗಳಲ್ಲಿ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತಿದೆ. ಒಂದರಿಂದ 28 ದಿನಗಳ ಅಂತರದಲ್ಲಿ ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗುವುದು ಅಂತಾ ತಿಳಿಸಿದ್ದಾರೆ.

ಇನ್ನು ದೆಹಲಿ ಹಾಗೂ ಪಾಟ್ನಾದಲ್ಲಿರುವ ಆಸ್ಪತ್ರೆಗಳಲ್ಲಿ ಹಾಗೂ ನಾಗ್ಪುರದಲ್ಲಿರುವ ಮೆಡಿಟ್ರಿನಾ ಇನ್​​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​ನಲ್ಲಿ ಟ್ರಯಲ್ ನಡೆಯಲಿದೆ. ಮಕ್ಕಳ ಮೇಲಿನ ಕ್ಲಿನಿಕಲ್ ಟ್ರಯಲ್​​ಗೆ ಸಬ್ಜೆಕ್ಟ್​ ಎಕ್ಸ್​​ಪರ್ಟ್​ ಕಮಿಟಿ ಮಾಡಿರುವ ಶಿಫಾರಸ್ಸಿಗೆ ಡ್ರಗ್​ ರೆಗ್ಯೂಲೆಟರ್ ಒಪ್ಪಿಗೆ ನೀಡಿದೆ. ಕೋವ್ಯಾಕ್ಸಿನ್ ಲಸಿಕೆ ತಯಾರಿಸುತ್ತಿರುವ ಭಾರತ್ ಬಯೋಟೆಕ್ ಮಕ್ಕಳ ಮೇಲಿನ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಪ್ರಸ್ತಾಪ ಮಾಡಿತ್ತು. ಈ ಪ್ರಯೋಗಕ್ಕೆ 525 ಆರೋಗ್ಯವಂತ ಮಕ್ಕಳು ಮುಂದೆ ಬಂದಿದ್ದಾರೆ.

ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಸರ್ಕಾರ ನೋಟಿಫಿಕೇಷನ್ ಹೊರಡಿಸುತ್ತಿದ್ದಂತೆ ಇದನ್ನ ಪ್ರಶ್ನೆ ಮಾಡಿ ದೆಹಲಿ ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿರೋದ್ರಿಂದ ಕ್ಲಿನಿಕಲ್ ಟ್ರಯಲ್​ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

The post ಮಕ್ಕಳ ಮೇಲೆ ಕೊವ್ಯಾಕ್ಸಿನ್ ಟ್ರಯಲ್​ಗೆ ಸರ್ಕಾರದ ಸಿದ್ಧತೆ.. ತಡೆ ಕೋರಿ PIL appeared first on News First Kannada.

Source: newsfirstlive.com

Source link