ಬೆಂಗಳೂರು: ಸಂಭಾವ್ಯ ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ಸವಾರಿ ಮಾಡಲಿದೆ ಅಂತಾ ತಜ್ಞರು ಎಚ್ಚರಿಕೆಯನ್ನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮುಂಜಾಗೃತ ಕ್ರಮದ ಬಗ್ಗೆ ಸಭೆ ನಡೆಸಿದರು.

‌ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು.. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸಿದ್ಧತೆ ಕೈಗೊಳ್ಳಲಾಗಿದೆ. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಅಪೌಷ್ಟಿಕತೆ ಇರುವ ಮಕ್ಕಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳಲಿದೆ. ಹೀಗಾಗಿ ಬೆಂಗಳೂರಲ್ಲಿ‌ ಮಕ್ಕಳಿಗಾಗಿ 1,419 ಬೆಡ್​ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 47 ವೆಂಟಿಲೇಟರ್​ಗಳುಳ್ಳ ಐಸಿಯು ಬೆಡ್​ಗಳು 116 ವೆಂಟಿಲೇಟರ್ ರಹಿತ ಐಸಿಯು ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜೊತೆಗೆ 671 ಹೆಚ್‌ಡಿಯು ಬೆಡ್​ಗಳು, 585 ಸಾಮಾನ್ಯ ಬೆಡ್​ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. 4 ಕ್ವಾರಂಟೀನ್ ಕೇಂದ್ರಗಳಿಗೆ ಸ್ಥಳಗಳನ್ನ ಗುರುತಿಸಲಾಗಿದೆ. ಟಿಸಿ ಪಾಳ್ಯ, ಕೆಂಗೇರಿ, ವೆಂಕಟೇಶ ಪುರದಲ್ಲಿ ಈ ಕ್ವಾರಂಟೀನ್ ಕೇಂದ್ರಗಳನ್ನಾಗಿ ಮಾಡಲಾಗಿದೆ. ಅದರಲ್ಲಿ ಕಲ್ಯಾಣ‌ ಮಂಟಪ, ಹಾಸ್ಟೆಲ್,‌ ಮೊರಾರ್ಜಿ ದೇಸಾಯಿ ಕಟ್ಟಡಗಳನ್ನ ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾಡಲಾಗಿವುದು ಅಂತ ತಿಳಿಸಿದ್ದಾರೆ.

The post ಮಕ್ಕಳ ಮೇಲೆ 3ನೇ ಅಲೆ ಸವಾರಿ.. ಬೆಂಗಳೂರಲ್ಲಿ ಎಷ್ಟೆಲ್ಲಾ ವ್ಯವಸ್ಥೆ ಆಗಿದೆ ಗೊತ್ತಾ? appeared first on News First Kannada.

Source: newsfirstlive.com

Source link