ಮಕ್ಕಳ ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಂಡುತುಂಡು ಮಾಡುತ್ತೇವೆ ಮುಕ್ರಂ ಖಾನ್ ವಿವಾದಾತ್ಮಕ ಹೇಳಿಕೆ: ಖಂಡನೆ, ಧರಣಿ | Hindu pro activists stage protest against mukarram khan over his controversial statement in kalaburagi


ಮಕ್ಕಳ ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಂಡುತುಂಡು ಮಾಡುತ್ತೇವೆ ಮುಕ್ರಂ ಖಾನ್ ವಿವಾದಾತ್ಮಕ ಹೇಳಿಕೆ: ಖಂಡನೆ, ಧರಣಿ

ಮಕ್ಕಳ ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಂಡುತುಂಡು ಮಾಡುತ್ತೇವೆ ಮುಕ್ರಂ ಖಾನ್ ವಿವಾದಾತ್ಮಕ ಹೇಳಿಕೆ: ಖಂಡನೆ, ಧರಣಿ

ಕಲಬುರಗಿ: ಶಾಲೆ-ಕಾಲೇಜುಗಳಲ್ಲಿ ಹಿಜಾಬ್(Hijab) ವಿವಾದ ಮುಂದುವರೆದಿದೆ. ನಿನ್ನೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯರು ಹಿಜಾಬ್, ಬುರ್ಖಾ ತೆಗೆಯಲ್ಲವೆಂದು ಪಟ್ಟು ಹಿಡಿದಿದ್ದರು. ಅದೆಷ್ಟೋ ವಿದ್ಯಾರ್ಥಿನಿಯರು ತರಗತಿಗೆ ಹೋಗದೆ ಮನೆಗೆ ವಾಪಸಾಗಿದ್ದರು. ಇದರ ನಡುವೆ ‘ಮಕ್ಕಳ ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಂಡುತುಂಡು ಮಾಡುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು ವಿರೋಧ ವ್ಯಕ್ತವಾಗಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಲಬುರಗಿ‌ ಜಿಲ್ಲೆ‌ ಸೇಡಂ ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ಹಿಜಾಬ್ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನೀವು ಯಾವ ಬಟ್ಟೆಯಾದ್ರು ಧರಿಸಿ, ಆದ್ರೆ ನಮ್ಮ ಹಿಜಾಬ್ಗೆ ಯಾಕೆ ಅಡ್ಡಿ ಅಂತ ಪ್ರಶ್ನಿಸಿದ್ದರು. ‘ಮಕ್ಕಳ ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಂಡುತುಂಡು ಮಾಡುತ್ತೇವೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಕ್ರಂ ಖಾನ್ ಹೇಳಿಕೆಗೆ ಹಿಂದೂಪರ‌ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

ಹಿಂದೂಪರ‌ ಸಂಘಟನೆಗಳು ಕೈ ಮುಖಂಡ ಮುಕ್ರಂ ಖಾನ್ ಹೇಳಿಕೆ ಖಂಡಿಸಿ ಕಲಬುರಗಿ ಜಿಲ್ಲೆಯ ಸೇಡಂ ಪೊಲೀಸ್ ಠಾಣೆ ಎದುರು ನಿನ್ನೆ ಪ್ರತಿಭಟನೆ ನಡೆಸಿದ್ದಾರೆ. ಮುಕ್ರಂ ಖಾನ್ ವಿರುದ್ಧ ದೂರು ದಾಖಲಿಸಬೇಕು ಅಂತ ಆಗ್ರಹಿಸಿದ್ದಾರೆ. ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಈ ಸಂಬಂಧ ಜಿಲ್ಲಾ ಸಂಘಟನಾ ಕಾರ್ಯದರ್ಶಿ,  ವಿಹೆಚ್​ಪಿ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ವಿವಾದಾತ್ಮಕ ಹೇಳಿಕೆ ನೀಡಿರೋ ಮುಕ್ರಂ ಖಾನ್ ವಿರುದ್ಧ ಎಫ್​ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ದ್ವೇಷ ಬಿತ್ತುವ ಹೇಳಿಕೆಯನ್ನು ನೀಡಿದವರನ್ನು ಸುಮ್ಮನೆ ಬಿಡಬಾರದು. ನಮಗೂ ಮಾತನಾಡಲಿಕ್ಕೆ ಬರುತ್ತದೆ. ಆದ್ರೆ ನಮ್ಮ ಮಾತುಗಳು ಅಶಾಂತಿಗೆ ಕಾರಣವಾಗಬಾರದು ಅಂತ ಸುಮ್ಮನಿದ್ದೇವೆ ಎಂದರು.

TV9 Kannada


Leave a Reply

Your email address will not be published. Required fields are marked *